AI ತಂತ್ರಜ್ಞಾನದ ಕುಶಲತೆಯಲ್ಲಿ ಹಾಲಿವುಡ್ ನಟರಂತೆ ಮೂಡಿ ಬಂದ ಚಂದನವನದ ತಾರೆಯರು..!
ತಂತ್ರಜ್ಞಾನವೆಂದರೆ ಹಾಗೆ ಅದು ನಿಂತ ನೀರಲ್ಲ, ಅದು ಸದಾ ಹರಿಯುವ ತೊರೆಯಂತೆ,ಈಗ ಇದಕ್ಕೆ ಪೂರಕ ಎನ್ನುವಂತೆ ಚಂದನವನದ ತಾರೆಯರನ್ನು ಹಾಲಿವುಡ್ ನಟರ ನೋಟದಂತೆ ಈಗ ಡಿಜಿಟಲ್ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗಿದೆ.
ಬೆಂಗಳೂರು: ತಂತ್ರಜ್ಞಾನವೆಂದರೆ ಹಾಗೆ ಅದು ನಿಂತ ನೀರಲ್ಲ, ಅದು ಸದಾ ಹರಿಯುವ ತೊರೆಯಂತೆ,ಈಗ ಇದಕ್ಕೆ ಪೂರಕ ಎನ್ನುವಂತೆ ಚಂದನವನದ ತಾರೆಯರನ್ನು ಹಾಲಿವುಡ್ ನಟರ ನೋಟದಂತೆ ಈಗ ಡಿಜಿಟಲ್ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗಿದೆ.
ಹೌದು, ಅದರಲ್ಲೂ ಕೃತಕ ಬುದ್ದಿಮತ್ತೆ(AI) ತಂತ್ರಜ್ಞಾನವು ಹೊಸ ಬಗೆಯ ಅದ್ಬುತಗಳನ್ನು ಸೃಷ್ಟಿಸುವುದರಲ್ಲಿ ಎತ್ತಿದ ಕೈ ಎಂದು ಹೇಳಬಹುದು.KRG Connect ತನ್ನ ಟ್ವಿಟ್ಟರ್ ಪ್ರೊಫೈಲ್ ನಲ್ಲಿ ಚಂದನವನದ ತಾರಾಮಣಿಗಳ ಚಿತ್ರವನ್ನು ಈ ತಂತ್ರಜ್ಞಾನವನ್ನೇ ಬಳಸಿಕೊಂಡು ಸೃಷ್ಟಿಸಿದೆ.ಇದರಲ್ಲಿ ಪ್ರಮುಖವಾಗಿ ಡಾ.ರಾಜಕುಮಾರ್, ಪುನೀತ್ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್,ರವಿಚಂದ್ರನ್, ಶಂಕರನಾಗ್, ಕಿಚ್ಚ ಸುದೀಪ್, ಯಶ್,ರಿಶಬ್ ಶೆಟ್ಟಿ,ದರ್ಶನ್,ರಕ್ಷಿತ್ ಶೆಟ್ಟಿ,ಡಾಲಿ ಧನಂಜಯ್ ನಟರ ವಿಭಾಗದಲ್ಲಿದ್ದರೆ,ಇನ್ನೂ ನಟಿಯರಲ್ಲಿ ರಮ್ಯಾ,ಶ್ರೀನಿಧಿ ಶೆಟ್ಟಿ,ಸಪ್ತಮಿ ಗೌಡ,ರಾಧಿಕಾ ಪಂಡಿತ್, ಪ್ರೇಮಾ, ಮಾಲಾಶ್ರಿ,ಆಶಿಕಾ ರಂಗನಾಥ್,ಶಾನ್ವಿ ಶ್ರೀವಾಸ್ತವ್, ರಕ್ಷಿತಾ, ರುಕ್ಮಿಣಿ, ಸುಧಾರಾಣಿ, ರಚಿತಾ ರಾಮ್ ಅವರ ಚಿತ್ರಗಳನ್ನು ಸೃಷ್ಟಿಸಲಾಗಿದೆ.
ಒಟ್ಟಿನಲ್ಲಿ ಈ ಹೊಸ ಬಗೆಯ ಫೋಟೋಗಳನ್ನು ನೋಡಿದ ಅಭಿಮಾನಿಗಳಂತೂ ಫುಲ್ ಖುಷಿಯಲ್ಲಿದ್ದಾರೆ. ಹೊಸ ಗೆಟಪ್ ನಲ್ಲಿರುವ ಈ ಫೋಟೋ ಗಳಂತೂ ನಮ್ಮ ದೇಶಿ ಹೀರೋಗಳನ್ನು ಹಾಲಿವುಡ್ ಪಾತ್ರಗಳ ಹೀರೋ ಹಿರೋಯಿನ್ ಗಳಂತೆ ನೋಡುವುದೇ ವಿಶೇಷ ಎಂದು ಹೇಳಬಹುದು.