ನವದೆಹಲಿ: ಬಾಲಿವುಡ್ ನಲ್ಲಿ ಇತ್ತೀಚೆಗೆ ಸ್ಟಾರ್ ಮಕ್ಕಳ ಜಲ್ವಾ ನೋಡುತ್ತಿದ್ದಂತೆಯೇ ನಿರ್ಮಾಣಗೊಳ್ಳುತ್ತಿದೆ. ಒಂದೆಡೆ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್, ದಿ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹಾಗೂ ಚಂಕಿ ಪಾಂಡೆ ಅವರ ಪುತ್ರಿ ಅನನ್ಯ ಪಾಂಡೆ ಈಗಾಗಲೇ ಬಾಲಿವುಡ್ ನಲ್ಲಿ ತಮ್ಮ ಕರಿಯರ್ ಆರಂಭಿಸಿದ್ದರೆ, ಇನ್ನೊಂದೆಡೆ ಶಾರುಕ್ ಪುತ್ರಿ ಸುಹಾನಾ ಖಾನ್  ಹಾಗೂ ಅಜಯ್ ದೇವಗನ್ ಅವರ ಪುತ್ರಿ ನ್ಯಾಸಾ ದೇವಗನ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹರಿಬಿಟ್ಟು ಸುದ್ದಿ ಸೃಷ್ಟಿಸುತ್ತಲೇ ಇರುತ್ತಾರೆ. ಸದ್ಯ ಮತ್ತೊಮ್ಮೆ ನ್ಯಾಸಾ ದೇವಗನ್ ಅವಳ ಕೆಲ ಫೋಟೋಗಳು ಇಂಟರ್ ನೆಟ್ ಮೇಲೆ ಭಾರಿ ವೈರಲ್ ಆಗಿದ್ದು, ನ್ಯಾಸಾ ಇವುಗಳಲ್ಲಿ ಕಿಲ್ಲರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸ್ಪೆಷಲ್ ಸ್ಕ್ರೀನಿಂಗ್ ನಿಂದ ಹೊರಹೊಮ್ಮಿವೆ ಈ ಫೋಟೋಗಳು

ನ್ಯಾಸಾ ಅವಳ ಈ ಫೋಟೋಗಳು ಅಜಯ್ ದೇವಗನ್ ಅಭಿನಯದ 'ತಾನಾಜಿ-ದಿ ಅನ್ಸಂಗ್ ವಾರಿಯರ್' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಕಾರ್ಯಕ್ರಮದಿಂದ ಬಹಿರಂಗಗೊಂಡಿವೆ.


ತುಂಬಾ ಸಿಂಪಲ್ ಅವತಾರದಲ್ಲಿ ಕಾಣಿಸಿಕೊಂಡ ನ್ಯಾಸಾ


ಕಾರ್ಯಕ್ರಮದಿಂದ ಹೊರಹೊಮ್ಮಿದ ಈ ಫೋಟೋಗಳಲ್ಲಿ ನ್ಯಾಸಾ ತುಂಬಾ ಸಿಂಪಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ.


ವೈರಲ್ ಆಗಿವೆ ಈ ಫೋಟೋಗಳು


ನ್ಯಾಸಾ ಅವರ ಈ ಭಾವಚಿತ್ರಗಳು ಸಾಮಾಜಿಕ ಮಾಧ್ಯಮ ಮತ್ತು ಇಂಟರ್ ನೆಟ್ ಮೇಲೆ ಇದೀಗ ಭಾರಿ ಹವಾ ಸೃಷ್ಟಿಸಿದ್ದು, ಫೋಟೋಗಳು ವೈರಲ್ ಆಗಿವೆ.


ಬಿಡುಗಡೆಯಾಗಿದೆ 'ತಾನಾಜಿ'


ಅಜಯ್ ದೇವಗನ್ ಅವರ ಚಿತ್ರ 'ತಾನಾಜಿ-ದಿ ಅನ್ಸಂಗ್ ವಾರಿಯರ್' ಜನವರಿ 10ರಂದು ದೇಶಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.


ಈ ಚಿತ್ರದಲ್ಲಿ ಕಾಜೋಲ್ ಕೂಡ ನಟಿಸಿದ್ದಾರೆ

ಅಜಯ್ ಅಭಿನಯದ ಈ ಚಿತ್ರದಲ್ಲಿ ನ್ಯಾಸಾ ತಾಯಿ ಮತ್ತು ಖ್ಯಾತ ನಟಿ ಕಾಜೋಲ್ ದೇವಗನ್ ಕೂಡ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಕಾಜೋಲ್ ಅಜಯ್ ದೇವಗನ್ ಅಂದರೆ ತಾನಾಜಿ ಪತ್ನಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.