ಸಿದ್ದಗಂಗಾ ಶ್ರೀಗಳಿಂದ ‘ಲವ್ ಯೂ ಶಂಕರ್’ ಚಿತ್ರದ ‘ಓಂ ನಮಃ ಶಿವಾಯ’ ಹಾಡು ಬಿಡುಗಡೆ
Love You Shankar: ‘ಲವ್ ಯೂ ಶಂಕರ್` ಚಿತ್ರದಲ್ಲಿ ಶ್ರೇಯಸ್ ತಲಪಾಡೆ, ತನಿಷಾ ಮುಖರ್ಜಿ, ಸಂಜಯ್ ಮಿಶ್ರಾ, ಮನ್ ಗಾಂಧಿ, ಅಭಿಮನ್ಯು ಸಿಂಗ್, ಪ್ರತೀಕ್ ಜೈನ್, ಹೇಮಂತ್ ಪಾಂಡೆ ಮುಂತಾದವರು ನಟಿಸಿದ್ದು, ಈ ಚಿತ್ರವು ತನ್ನ ವಿಭಿನ್ನ ಕಥಾಹಂದರ ಮತ್ತು ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಲಿದೆ.
ಬೆಂಗಳೂರು: ಭಾರತದ ಅತೀದೊಡ್ಡ ಕಾಂಪೋಸಿಟ್ ಅನಿಮೇಷನ್ ಡ್ರಾಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಲವ್ ಯೂ ಶಂಕರ್’ ಚಿತ್ರದ ‘ಓಂ ನಮಃ ಶಿವಾಯ’ ಹಾಡನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಬಿಡುಗಡೆ ಮಾಡಿದ್ದಾರೆ. ವರ್ಧನ್ ಸಿಂಗ್ ಸಂಗೀತ ಸಂಯೋಜಿಸಿದ್ದಾರೆ.
ರಿಲಯನ್ಸ್ ಎಂಟರ್‍ಟೈನ್‍ಮೆಂಟ್ ಸ್ಟುಡಿಯೋ ಮತ್ತು ಎಸ್.ಡಿ.ವರ್ಲ್ಡ್ ಫಿಲಂ ಪ್ರೈವೇಟ್ ಲಿಮಿಟೆಡ್ ಜೊತೆಯಾಗಿ ಅರ್ಪಿಸುತ್ತಿರುವ ‘ಲವ್ ಯೂ ಶಂಕರ್' ಚಿತ್ರವನ್ನು ಜನಪ್ರಿಯ ನಿರ್ದೇಶಕ ‘ಮೈ ಫ್ರೆಂಡ್ ಗಣೇಶ’ ಖ್ಯಾತಿಯ ರಾಜೀವ್ ಎಸ್.ರುಯಾ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಸೀಸನ್ 10ರ ಮನೆ ಹೇಗೆ ನಿರ್ಮಾಣವಾಯ್ತು ಗೊತ್ತಾ..? ಬಿಗ್‌ಹೌಸ್ ವಿಡಿಯೋ ನೋಡಿ
‘ಲವ್ ಯೂ ಶಂಕರ್' ಚಿತ್ರದಲ್ಲಿ ಶ್ರೇಯಸ್ ತಲಪಾಡೆ, ತನಿಷಾ ಮುಖರ್ಜಿ, ಸಂಜಯ್ ಮಿಶ್ರಾ, ಮನ್ ಗಾಂಧಿ, ಅಭಿಮನ್ಯು ಸಿಂಗ್, ಪ್ರತೀಕ್ ಜೈನ್, ಹೇಮಂತ್ ಪಾಂಡೆ ಮುಂತಾದವರು ನಟಿಸಿದ್ದು, ಈ ಚಿತ್ರವು ತನ್ನ ವಿಭಿನ್ನ ಕಥಾಹಂದರ ಮತ್ತು ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಲಿದೆ. ತೇಜಸ್ ದೇಸಾಯಿ ಮತ್ತು ಸುನೀತಾ ದೇಸಾಯಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವರ್ಧನ್ ಸಿಂಗ್ ಮತ್ತು ರಾಮಿರಾ ತನೇಜ ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರವು ನವಿರಾದ ಭಾವನೆಗಳು, ಪಾತ್ರಗಳು, ಹಾಡುಗಳು ಮತ್ತು ಕಲಾವಿದರ ಅದ್ಭುತ ಪಾತ್ರಪೋಷಣೆಯಿಂದ ಎಲ್ಲಾ ಭಾಷೆಗಳ ಮತ್ತು ಪ್ರದೇಶಗಳ ಪ್ರೇಕ್ಷಕರಿಗೆ ಆಪ್ತವಾಗಲಿದೆ ಎಂದು ಚಿತ್ರತಂಡ ನಂಬಿದೆ. ‘ಲವ್ ಯೂ ಶಂಕರ್' ಚಿತ್ರವು ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. Visica films ವಿತರಣಾ ಸಂಸ್ಥೆ ಕರ್ನಾಟಕದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: ಬಹುನಿರೀಕ್ಷಿತ ʼಇನಾಮ್ದಾರ್ʼ ಚಿತ್ರದ ಟ್ರೇಲರ್ ಔಟ್ : ʼಕಪ್ಪು ಸುಂದರಿಯ ಸುತ್ತʼ ಏನಾಯ್ತು..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.