'ಲಿಯೋ' ಟ್ರೈಲರ್ ನೋಡಿ ಚಿತ್ರಮಂದಿರ ಧ್ವಂಸ ಮಾಡಿದ ನಟ ವಿಜಯ್‌ ಫ್ಯಾನ್ಸ್‌..! ಕಾರಣ ಇಲ್ಲಿದೆ

Vijay fans : ಲಿಯೋ ಟ್ರೈಲರ್‌ ಸ್ಕ್ರೀನಿಂಗ್‌ ನಂತರ ನಟ ಜೋಸೆಫ್ ವಿಜಯ್ ಅಭಿಮಾನಿಗಳು ಚನೈನ ರೋಹಿಣಿ ಚಿತ್ರಮಂದಿರವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಈ ಕುರಿತು ವಿಡಿಯೋ ಮತ್ತು ಫೋಟೋಸ್‌ ವೈರಲ್‌ ಆಗಿವೆ.. ಸಂಪೂರ್ಣ ಮಾಹಿತಿಗಾಗಿ ಸುದ್ದಿ ಓದಿ..

Written by - Krishna N K | Last Updated : Oct 6, 2023, 11:30 AM IST
  • ವಿಜಯ್ ಅಭಿಮಾನಿಗಳು ಚನೈನ ರೋಹಿಣಿ ಚಿತ್ರಮಂದಿರವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ.
  • ಲಿಯೋ ಸಿನಿಮಾದ ಟ್ರೇಲರ್‌ ಸ್ಕ್ರೀನಿಂಗ್‌ ವೇಳೆ ಈ ಘಟನೆ ನಡೆದಿದೆ.
  • ಚನೈನ ರೋಹಿಣಿ ಚಿತ್ರಮಂದಿರದಲ್ಲಿ ಲಿಯೋ ಸಿನಿಮಾದ ಟ್ರೈಲರ್‌ ಸ್ಕ್ರೀನಿಂಗ್‌ ಆಯೋಜನೆ ಮಾಡಲಾಗಿತ್ತು.
'ಲಿಯೋ' ಟ್ರೈಲರ್ ನೋಡಿ ಚಿತ್ರಮಂದಿರ ಧ್ವಂಸ ಮಾಡಿದ ನಟ ವಿಜಯ್‌ ಫ್ಯಾನ್ಸ್‌..! ಕಾರಣ ಇಲ್ಲಿದೆ title=

Leo trailer : ʼಲಿಯೋʼ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವೇಳೆ ನಟ ವಿಜಯ್‌ ಅಭಿಮಾನಿಗಳು ಚಿತ್ರಮಂದಿರವನ್ನು ಧ್ವಂಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಚನೈನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಕುರಿತು ಫೋಟೋ ಮತ್ತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಹೌದು... ಚೆನ್ನೈನ ರೋಹಿಣಿ ಥಿಯೇಟರ್‌ನಲ್ಲಿ ಲಿಯೋ ಟ್ರೇಲರ್ ಸ್ಕ್ರೀನಿಂಗ್ ಆಯೋಜನೆ ಮಾಡಲಾಗಿತ್ತು. ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಗುರುವಾರ ಸಂಜೆ 6:30 ಕ್ಕೆ ಪ್ರೀಮಿಯರ್ ಮಾಡಲಾಯಿತು. ಈ ವೇಳೆ ನೂರಾರು ದಳಪತಿ ಅಭಿಮಾನಿಗಳು ಜಮಾಯಿಸಿದ್ದರು. 

ಇದನ್ನೂ ಓದಿ :  ದಳಪತಿ ʼಲಿಯೋʼ ಟ್ರೇಲರ್‌ ಔಟ್‌ : ʼವಿಜಯ್‌ʼ ಇಲ್ಲಿ ಒಬ್ಬರೇ ಇಲ್ಲ

ಈ ಕುರಿತು ಮನೋಬಾಲಾ ವಿಜಯಬಾಲನ್ ವಿಡಿಯೋ ಮತ್ತು ಫೋಟೋಸ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಲಿಯೋ ಟ್ರೈಲರ್‌ ಸ್ಕ್ರೀನಿಂಗ್‌ ನಂತರ ನಟ ಜೋಸೆಫ್ ವಿಜಯ್ ಅಭಿಮಾನಿಗಳು ರೋಹಿಣಿ ಚಿತ್ರಮಂದಿರವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಟ್ರೇಲರ್ ಪ್ರದರ್ಶನವನ್ನು ಕೆಟ್ಟದಾಗಿ ಆಯೋಜಿಸಿದ್ದರು ಎಂದು ನೆಟಿಜನ್ಸ್‌ ಚಿತ್ರಮಂದಿರದ ಮಾಲೀಕರ ಮೇಲೆ ಆರೋಪಿಸಿದ್ದಾರೆ. 

ಶುಕ್ರವಾರ ಬಿಡುಗಡೆಯಾದ ಟ್ರೇಲರ್ ಯೂಟ್ಯೂಬ್‌ನಲ್ಲಿ ಸಖತ್‌ ಸತ್ತು ಮಾಡುತ್ತಿದೆ. ಈ ಚಿತ್ರದಲ್ಲಿ ನಟ ವಿಜಯ್ ಜೊತೆಗೆ ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾ, ಗೌತಮ್ ಮೆನನ್, ಮಿಸ್ಕಿನ್ ಮತ್ತು ಪ್ರಿಯಾ ಆನಂದ್ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಾಲಿವುಡ್ ನ ಜನಪ್ರಿಯ ನಟ ಸಂಜಯ್ ದತ್ ಕೂಡ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ : ದರ್ಶನ್ ಜೊತೆಗಿನ ಒಡಕಿನ ಬಗೆ ಧ್ರುವ ಸರ್ಜಾ ಹೇಳಿದ್ದೇನು?

ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಸಿನಿಮಾಗೆ ರತ್ನ ಕುಮಾರ್ ಮತ್ತು ದೀರಜ್ ವೈಡಿ ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರದ ಛಾಯಾಗ್ರಹಣ ಮತ್ತು ಸಂಕಲನವನ್ನು ಮನೋಜ್ ಪರಮಹಂಸ ಮತ್ತು ಫಿಲೋಮಿನ್ ರಾಜ್ ನಿರ್ವಹಿಸಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಕ್ಟೋಬರ್ 19 ರಂದು ಈ ಸಿನಿಮಾ ತೆರೆಕಾಣಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News