ದಿ ಕೇರಳ ಸ್ಟೋರಿ ಖರೀದಿಗೆ ಒಟಿಟಿ ಸಂಸ್ಥೆಗಳು ಹಿಂದೇಟು; ಅಸಲಿ ಕಾರಣ ಏನು ಗೊತ್ತಾ..?
The Kerala Story OTT Release : ಸಾಕಷ್ಟು ಅಡೆತಡೆಗಳನ್ನು ಮೀರಿ ತೆರೆಗೆ ಬಂದಿದ್ದ ಸಿನಿಮಾ ದಿ ಕೇರಳ ಸ್ಟೋರಿ. ಚಿತ್ರ ರಿಲೀಸ್ ಆದ ನಂತರವೂ ಸಾಕಷ್ಟು ವಿವಾದಗಳ ಹೊಣೆಯನ್ನೆ ಹೊತ್ತುಕೊಂಡಿತ್ತು. ಇದೀಗ ಈ ಸಿನಿಮಾ ಖರೀದಿಗೆ ಒಟಿಟಿ ಸಂಸ್ಥೆಗಳು ಹಿಂಜರಿಯುತ್ತಿವೆ.
The Kerala Story : ವಿವಾದಗಳ ಮೂಲಕವೇ ಸಾಕಷ್ಟು ಸುದ್ದಿಯಲ್ಲಿದ್ದ ಸಿನಿಮಾಗಳಲ್ಲಿ ದಿ ಕೇರಳ ಸ್ಟೋರಿ ಕೂಡ ಒಂದು. ಇದು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ತಯಾರಾದ ಸಿನಿಮಾ. ಆದರೆ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಬರೋಬ್ಬರಿ 240 ಕೋಟಿಗಿಂತ ಅಧಿಕ ಗಳಿಕೆ ಮಾಡಿತ್ತು. ಮೇ 5 ರಂದು ಈ ಸಿನಿಮಾ ಬಿಡುಗಡೆಯಾಯಿತು. ಇದರ ಎದುರು ಬಿಡುಗಡೆಯಾದ ಎಲ್ಲ ಸಿನಿಮಾಗಳು ನೆಲಗ್ಚಿದವು.
ಇನ್ನು ಚಿತ್ರಮಂದಿರಗಳಲ್ಲಿ ದಾಖಲೆ ಬರೆದಿದ್ದ ದಿ ಕೇರಳ ಸ್ಟೋರಿ ಸಿನಿಮಾವನ್ನು ಖರೀದಿಸಲು ಯಾವ ಒಟಿಟಿ ಸಂಸ್ಥೆಗಳು ಮುಂದೆ ಬರುತ್ತಿಲ್ಲವಂತೆ. ಹಾಗಾದರೆ ಕಾರಣವಾದ್ರೂ ಏನು? ಈ ಬಗ್ಗೆ ಚಿತ್ರದ ನಿರ್ದೇಶಕರು ಹೇಳೋದೇನು..? ಮುಂದೆ ಓದಿ
ಇದನ್ನೂ ಓದಿ-ಬಾಲಿವುಡ್ ಸಿನಿಮಾಗಳನ್ನು ತಿರಸ್ಕರಿಸಿದ ಸೌತ್ ಸ್ಟಾರ್ ನಟ-ನಟಿರಿವರು..!
ಸಿನಿಮಾ ರಿಲೀಸ್ ನಂತರ ಇದರ ಮೇಲೆ ಯಾರಿಗೂ ಅಷ್ಟು ನಂಬಿಕೆ ಇರಲಿಲ್ಲ. ಇಷ್ಟು ಕಡಿಮೆ ಬಜೆಟ್‌ನ ಸಿನಿಮಾವನ್ನು ಎಲ್ಲರು ಸ್ವೀಕರಿಸುತ್ತಾರೆ ಅನ್ನೋದೆ ಅಚ್ಚರಿಯ ವಿಷಯ. ಆದರೆ ಈ ಸಿನಿಮಾ ಅನೀರಿಕ್ಷಿತವಾಗಿ ಗೆಲುವು ಸಾಧಿಸಿತು. ಈ ಸಿನಿಮಾದಯಶಸ್ಸು ಎಷ್ಟೋ ಜನರಿಗೆ ಅಚ್ಚರಿ ಮೂಡಿಸಿದೆ. ಇನ್ನು ಈ ಸಿನಿಮಾ ಇನ್ನು ಯಾಎ ಒಟಿಟಿ ಅಂಗಳ ಪ್ರವೇಶಿಸಿಲ್ಲ ಅನ್ನೋದೆ ಸಿನಿಪ್ರಿಯರ ಪ್ರಶ್ನೆ.. ಆದರೆ ಇದೆಲ್ಲದಕ್ಕೂ ನಿರ್ದೇಶಕ ಸುದೀಪ್ತೋ ಸೇನ್ ಉತ್ತರ ನೀಡಿದ್ದಾರೆ.
ದೊರೆತಿರುವ ಕೆಲವು ಮಾಹಿತಿಗಳ ಪ್ರಕಾರ ದಿ ಕೇರಳ ಸ್ಟೋರಿ ಚಿತ್ರವನ್ನು ಖರೀದಿಸಲು ಒಟಿಟಿ ಸಂಸ್ಥೆಗಳು ಹಿಂಜರಿಯಲು ಕಾರಣವೆಂದರೆ ಅದೇ ಸಿನಿಮಾದಲ್ಲಿರುವ ರಾಜಕೀಯ ವಿವಾದದ ಕಂಟೆಂಟ್. ಇದೇ ಕಾರಣಕ್ಕೆ ಈ ವರೆಗೂ ಕೇರಳ ಸ್ಟೋರಿ ಸಿನಿಮಾವನ್ನು ಯಾವ ಸಂಸ್ಥೆಗಳು ಖರೀದಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ನಿರ್ದೇಶಕ ಸುದಿಪ್ತೋ ಸೇನ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ-ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಕಿರಣ್ ರಾಜ್; ರಗಡ್ ಲುಕ್ ಆಗಮನಕ್ಕೆ ಮುಹೂರ್ತ ಫಿಕ್ಸ್
"ನಮ್ಮ ಯಶಸ್ಸನ್ನು ಕಂಡು ಕೆಲವರಿಗೆ ಹೊಟ್ಟೆಯುರಿ, ಅದೇ ಕಾರಣಕ್ಕೆ ಈ ತರಹದ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ. ಈಗಾಗಲೇ ಹಲವು ಒಟಿಟಿಗಳಿಂದ ನಮ್ಮ ಸಿನಿಮಾ ಖರೀದಿಗೆ ಬೇಡಿಕೆಗಳು ಬಂದಿವೆ ಆದರೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಯೋಗ್ಯ ಬೆಲೆ ದೊರೆತಾಗ ಒಟಿಟಿಗೆ ನೀಡುತ್ತೇವೆ. ಜೊತೆಗೆ ನಮ್ಮ ಸಿನಿಮಾ ಯಶಸ್ಸನ್ನು ಕಂಡು ಉರಿಕೊಳ್ಳುತ್ತಿರುವ ಕೆಲವು ಸಿನಿಮಾ ಗ್ಯಾಂಗ್‌ಗಳು ಈ ರೀತಿ ನಮ್ಮ ವಿರುದ್ಧ ಪ್ಲ್ಯಾನ್ ಮಾಡುತ್ತಿವೆ." ಎಂದು ಹೇಳಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.