ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಕಿರಣ್‌ ರಾಜ್‌; ರಗಡ್‌ ಲುಕ್‌ ಆಗಮನಕ್ಕೆ ಮುಹೂರ್ತ ಫಿಕ್ಸ್‌

Kiaran Raj Rani Film Release Date : ಕನ್ನಡತಿ ಸಿರೀಯಲ್‌ ಖ್ಯಾತಿಯ ಕಿರಣ್‌ ರಾಜ್‌ ಇದೀಗ ಬೆಳ್ಳೆತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾನಿ ಶೀರ್ಷಿಕೆಯ ಸಿನಿಮಾದಲ್ಲಿ ಮಾಸ್‌ ಅವತಾರದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇನ್ನು ಈ ಸಿನಿಮಾದ ಟೀಸರ್‌ ಬಿಡುಗಡೆ ದಿನಾಂಕ ನಿಗದಿಯಾಗಿದೆ.   

Written by - Savita M B | Last Updated : Jun 25, 2023, 12:09 PM IST
  • ಕಿರುತೆರೆ ಹಾಗೂ ಸಾಮಾಜಿಕ ಕಾರ್ಯಗಳಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಟ ಕಿರಣ್‌ ರಾಜ್‌
  • ಇದೀಗ ನಟ ಎಲ್ಲ ಪ್ರಶ್ನೆಗಳಿಗೂ ಉತ್ತರ ಎಂಬಂತೆ ಹೊಸ ಮಾಹಿತಿಯನ್ನು ನೀಡಿದ್ದಾರೆ.
  • ʼರಾನಿʼ ಸಿನಿಮಾದ ಮೂಲಕ ನಟ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.
ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಕಿರಣ್‌ ರಾಜ್‌; ರಗಡ್‌ ಲುಕ್‌ ಆಗಮನಕ್ಕೆ ಮುಹೂರ್ತ ಫಿಕ್ಸ್‌  title=

Kannadati Serial Kiran raj : ಕಿರುತೆರೆ ಹಾಗೂ ಸಾಮಾಜಿಕ ಕಾರ್ಯಗಳಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಟ ಕಿರಣ್‌ ರಾಜ್‌ ಕನ್ನಡತಿ ಧಾರಾವಾಹಿ ನಂತರ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ.. ಇದೀಗ ನಟ ಎಲ್ಲ ಪ್ರಶ್ನೆಗಳಿಗೂ ಉತ್ತರ ಎಂಬಂತೆ ಹೊಸ ಮಾಹಿತಿಯನ್ನು ನೀಡಿದ್ದಾರೆ. ಹೌದು ʼರಾನಿʼ ಸಿನಿಮಾದ ಮೂಲಕ ನಟ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. 

ದುಬೈನಲ್ಲಿ ಹೆಲಿಕಾಪ್ಟರ್‌ನಿಂದ ಹದಿಮೂರು ಸಾವಿರ ಅಡಿ ಮೇಲಿಂದ ಜಿಗಿದು ತಮ್ಮ ಹೊಸ ಸಿನಿಮಾದ ಟೈಟಲ್‌ನ್ನು ಅನಾವರಣಗೊಳಿಸಿದ್ದರು. ಅದೇ ಸಿನಿಮಾ ʼರಾನಿʼ. ಇದೀಗ ಈ ಸಿನಿಮಾದ ಟೀಸರ್‌ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದ್ದು, ಫಸ್ಟ್‌ ಲುಕ್‌ನಲ್ಲಿ ಕುತೂಹಲ ಹೆಚ್ಚಿಸಿದ ಸಿನಿಮಾ ಟೀಸರ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ-Virushka Net Worth: ಅನುಷ್ಕಾ ಶರ್ಮಾ - ವಿರಾಟ್ ಕೊಹ್ಲಿ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಖ್ಯಾತ ನಿರ್ದೇಶಕ ಗುರುರಾಜ್‌ ಆಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ಕನ್ನಡತಿ ಸಿರೀಯಲ್‌ ಮೂಲಕ ಹೆಂಗಳೆಯರ ಮನಸ್ಸು ಕದ್ದಿದ್ದ ಕಿರಣ್‌ ರಾಜ್‌ ನಾಯಕನಾಗಿ ನಟಿಸಿದ್ದಾರೆ. ಕಿರುತೆರೆಯಲ್ಲಿ ತನ್ನದೇ ಆದ ಸೆನ್ಸೆಷನ್‌ ಕ್ರಿಯೆಟ್‌ ಮಾಡಿದ್ದ ನಟ ಇದೀಗ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇಷ್ಟು ದಿನ ಲವರ್‌ ಬಾಯ್‌ ತರ ಕಾಣಿಸಿಕೊಂಡಿದ್ದ ಕಿರಣ್‌ ರಾಜ್‌ ಇದೀಗ ರಗಡ್‌ ಲುಕ್‌ನಲ್ಲಿ ಘರ್ಜಿಸಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಫಸ್ಟ್‌ ಲುಕ್‌ ಸಖತ್‌ ಕ್ಯೂರಿಯಾಸಿಟಿ ಹುಟ್ಟಿಸಿದೆ. 

ಸಿನಿಮಾದ ಹೆಸರು ರಾನಿ. ಈ ಚಿತ್ರದ ಹೆಸರಿನಂತೆ ಇದು ಮಾಸ್‌ ಸಿನಿಮಾ.. ರಗಡ್‌ ಲುಕ್‌ಗೆ ಬೇಕಾಗುವಂತೆ ತಮ್ಮ ದೇಹವನ್ನು ಮಸ್ತ್‌ ರೆಡಿಮಾಡಿದ್ದಾರೆ ಕಿರಣ್‌ ರಾಜ್‌. ಎಲ್ಲರಿಗೂ ಮೋಡಿ ಮಾಡುವ ಸಿಕ್ಸ್‌ ಪ್ಯಾಕ್‌ ಬೆಳೆಸಿಕೊಂಡು ಮಾಸ್‌ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. 6 ಸನ್ನಿವೇಶ್ಗಳಲ್ಲಿ ಫೈಟ್‌ ಇರಲಿದ್ದು, ಇದೆಲ್ಲದರ ತುಣುಕು ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದು, ಅದು ಜುಲೈ 5ರಂದು ಬಿಡುಡೆಯಾಗಲಿದೆ. 

ಇದನ್ನೂ ಓದಿ-ಬಾಲಿವುಡ್‌ ಸಿನಿಮಾಗಳನ್ನು ತಿರಸ್ಕರಿಸಿದ ಸೌತ್‌ ಸ್ಟಾರ್‌ ನಟ-ನಟಿರಿವರು..!

ಈ ಸಲ ಗಟ್ಟಿ ಕಂಟೆಂಟ್‌ ಸಿನಿಮಾದೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ ಎಂದು ನಿರ್ದೇಶಕ ಗುರುತೇಜ್‌ ಶೆಟ್ಟಿ ಹೇಳಿದ್ದಾರೆ. ಇದೊಂದು ಗ್ಯಾಂಗ್‌ಸ್ಟರ್‌ ಸಿನಿಮಾ ಆಗಿದ್ದು, ಕುಟುಂಬದವರೊಂದಿಗೆ ನೋಡುವಂತಹ ಭಾವನಾತ್ಮಕ ವಿಷಯಗಳು ಸಹ ಈ ಸಿನಿಮಾದಲ್ಲಿವೆ ಎಂದು ತಿಳಿಸಿದ್ದಾರೆ. ಸಮೀಕ್ಷಾ, ಅಪೂರ್ವ ಹಾಗೂ ರಾದ್ಯಾ ಮೂವರು ಈ ಚಿತ್ರದ ನಾಯಕಿಯರು ಮೂರು ನಟಿಯರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ರವಿಶಂಕರ್‌, ಮೈಕೋ ನಾಗರಾಜ್‌, ಉಗರಂ ರವಿ, ಮಂಜು, ಬಿ ಸುರೇಶ್‌, ಹೀಗೆ ಸಾಕಷ್ಟು ಕಲಾವಿದರ ಬಳಗೆವೇ ಚಿತ್ರದಲ್ಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News