Gurudev Hoysala Movie: ಡಾಲಿ ಧನಂಜಯ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ! ಅದೇನು ಅಂತೀರಾ ಹಾಗಿದ್ದರೆ ಈ ಸ್ಟೋರಿ ಓದಿ..
OTT Movies: ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ಡಾಲಿ ಧನಂಜಯ್ ಎಂದರೆ ಕರುನಾಡ ಮಂದಿಗೆ ಅಚ್ಚುಮೆಚ್ಚು. ಇದೀಗ ಗುರುದೇವ್ ಹೊಯ್ಸಳ ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಬೆಂಗಳೂರು: ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ಡಾಲಿ ಧನಂಜಯ್ ಎಂದರೆ ಕರುನಾಡ ಮಂದಿಗೆ ಅಚ್ಚುಮೆಚ್ಚು. ಅವರು ಇತ್ತೀಚೆಗಷ್ಟೇ ಗುರುದೇವ್ ಹೊಯ್ಸಳ ಸಿನಿಮಾ ಬಾರಿ ಸದ್ದು ಮಾಡಿತ್ತು. ಸಿನಿಮಾ ರೀಲಿಸ್ ಆದ ಬಳಿಕ ಎಷ್ಟೋ ಮಂದಿ ಬ್ಯೂಸಿ ಜೀವನದ ನಡುವೆ ಸಿನಿಮಾ ಮಿಸ್ ಮಾಡಿಕೊಂಡಿರುವವರಿಗೆ ಸಿನಿಮಾ ತಂಡದದಿಂದ ಗುಡ್ ನ್ಯೂಸ್ ನೀಡಿದ್ದಾರೆ.
ಸುಡೋ ಬಿಸಿಲ ಬೇಗೆಯಲ್ಲಿ ಎಲ್ಲೂ ಹೋಗಲು ಮನಸು ಆಗವುದಿಲ್ಲ...ಹೀಗಾಗಿ ಓಟಿಟಿ ಫ್ಲಾಟ್ ಫಾರಂ ಅಮೆಜಾನ್ ಪ್ರೈಮ್‌ನಲ್ಲಿ ಬೇಸಿಗೆ ರಜೆ ಪ್ರಯುಕ್ತ ಒಂದಿಷ್ಟು ಸಿನಿಮಾಗಳನ್ನು ನೀಡಿದ್ದಾರೆ ಅದರಲ್ಲಿ ಕನ್ನಡದ ಗುರುದೇವ್ ಹೊಯ್ಸಳ ಕೂಡ ಒಂದಾಗಿದೆ.
ಇದನ್ನೂ ಓದಿ: Samantha Birthday: ಟಾಲಿವುಡ್ ಹಾಟ್ ಬೆಡಗಿ ಸಮಂತಾಗೆ ಇಂದು ಎಷ್ಟನೇ ವರ್ಷದ ಹುಟ್ಟು ಹಬ್ಬ ಗೊತ್ತಾ?
ಅಮೆಜಾನ್ ಪ್ರೈಮ್ ನೀಡಿರುವ ಸಿನಿಮಾಗಳ ಪಟ್ಟಿಯಲ್ಲಿ ಹೀಗಿದೆ ನೋಡಿ..
ತಮಿಳು ನಟ ಸಿಂಬು ನಟಿಸಿರುವ ಕನ್ನಡದ 'ಮಫ್ತಿ' ಸಿನಿಮಾದ ರೀಮೆಕ್ ಆಗಿರುವ 'ಪತ್ತು ತಲ'
ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ ಹಾಲಿವುಡ್ ವೆಬ್ ಶೋ 'ಸಿಟಾಡೆಲ್'
ಪವನ್ ಕುಮಾರ್ ನಿರ್ದೇಶನದ 'ಯೂಟರ್ನ್' ಹಿಂದಿ ರೀಮೆಕ್ ಇದು. ವ್ಯವಸ್ಥ ಎಂಬ ಹೆಸರಿನ ತೆಲುಗು ವೆಬ್ ಸೀರಿಸ್ ಆಗಿದೆ
ಕನ್ನಡದ ಹೊಯ್ಸಳ ಗುರುದೇವ್ ಕಳೆದ ತಿಂಗಳು ಮಾರ್ಚ್-30 ರಂದು ತೆರೆ ಕಂಡಿತ್ತು. ಇದೀಗ ಏಪ್ರಿಲ್-27 ರಂದು ಸಿನಿಮಾ ಓಟಿಟಿಗೆ ಬಂದಿದೆ. ಇನ್ನು ಮುಂದೆ ಅಮೆಜಾನ್ ಪ್ರೈಮ್‌ನಲ್ಲಿ ಗುರುದೇವ್ ಹೊಯ್ಸಳ ಸಿನಿಮಾ ನೋಡಬಹುದಾಗಿದೆ.
ಇದನ್ನೂ ಓದಿ: Sanya IyerHot Photos: ಕಿರುತೆರೆಯ ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಬಾಲಿವುಡ್‌ಗೆ ಹಾರಿದ್ರೇ?
ಸದ್ಯ ಡಾಲಿ ಇದೀಗ ಗುರುದೇವ್ ಹೊಯ್ಸಳ ಸಿನಿಮಾ ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವಿಕೇಂಡ್ ವಿಥ್ ರಮೇಶ ಕಾರ್ಯಕ್ರಮದಲ್ಲಿ ತಮ್ಮ ಜೀವನ ಒಂದಿಷ್ಟು ಏಳು ಬೀಳುಗಳನ್ನು ಹಂಚಿಕೊಂಡರು. ಹೀರೋ ಆಗಿ ನಟಿಸಿದ್ದರೂ ಖ್ಯಾತಿ ಗಳಿಸಿರುವುದು ಮಾತ್ರ ವಿಲನ್ ಪಾತ್ರದಿಂದಲೇ. ಟಗರು ಸಿನಿಮಾದ ವಿಲನ್ ಪಾತ್ರವು ಇಂದಿಗೂ ಎಲ್ಲರ ಮನದಲ್ಲಿ ಅಚ್ಚು ಉಳಿಯವಂತೆ ಮಾಡಿದೆ. ನಟ ತಾವು ಬೆಳೆಯುದರ ಜೊತೆಗೆ ತಮ್ಮವರನ್ನು ಬೆಳೆಸುವ ಪ್ರೋತ್ಸಾಹ ಮಾಡುತ್ತಿರುತ್ತಾರೆ.
ಗುರುದೇವ್ ನನ್ನು ಹರಸಿ ಬರುವ ಚಿತ್ರತಂಡಕ್ಕೆ ಶುಭ ಕೋರುವ ಮೂಲಕ ಹೊಸ ಪ್ರತಿಭೆಗಳಿಗೆ ಪೋತ್ಸಾಹ ನೀಡುತ್ತಿದ್ದಾರೆ. ಹಾಗೂ ಹೊಯ್ಸಳ ಸಿನಿಮಾ ಬಳಿಕ ಹೊಯ್ಸಳ ಸಿನಿಮಾ ಬಳಿಕ ಡಾಲಿ ಹಾಗೂ ಅಮೃತಾ ಅಯ್ಯಂಗಾರ್ ಒಂದಿಷ್ಟು ಗಾಸಿಪ್ ಹರಿದಾಡುತ್ತಿದ್ದವು . ಗಾಸಿಪ್ ಬಗ್ಗೆ ಕೇಳಿದಾಗ ತುಸು ನಕ್ಕು ಅವೆಲ್ಲಾ ಗಾಳಿ ಸುದ್ದಿ ಎಂದು ಉತ್ತರಿಸಿದ್ದಾರೆ. ಸದ್ಯ ಇವರ ನಟನೆಗೆ ಮನ ಸೋತಿರುವ ಅಭಿಮಾನಿಗಳು ಇವರ ಮುಂದಿನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.