Padavi Poorva Cinema: ವಿಕಟ ಕವಿ ಯೋಗರಾಜ್ ಭಟ್ ರಿಗೆ ಯೋಗ ಅನ್ನೋದು ಬೆನ್ನೇರಿದೆ. ಇತ್ತೀಚೆಗಷ್ಟೇ ಭಟ್ಟರ ಗಾಳಿಪಟ 2 ಭರ್ಜರಿ ಕಲೆಕ್ಷನ್ ಮಾಡಿತ್ತು. ಆದ್ರೆ ಈಗ ಭಟ್ರು ನಿರ್ಮಾಣದ ಹೊಸ ಪ್ರತಿಭೆಗಳ "ಪದವಿ ಪೂರ್ವ" ಗೆಲುವಿನ ಮುನ್ಸೂಚನೆ ಕೊಟ್ಟಿದೆ.  ಇವತ್ತು  ರಾಜ್ಯಾದ್ಯಂತ ಪದವಿ ಪೂರ್ವ ಸಿನಿಮಾ ರಿಲೀಸ್ ಆಗಿದ್ದು ಪದವಿ ಪೂರ್ವ ಚಿತ್ರವನ್ನ ಜನ ಒಪ್ಪಿ ಅಪ್ಪಿಕೊಳ್ಳೋದು ಫಿಕ್ಸ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʼಕಾಂತಾರʼ ಪಂಜುರ್ಲಿ ದೈವವನ್ನು ಅವಹೇಳನ ಮಾಡಿದ ಸಾಂತಾಕ್ಲಾಸ್..! ವಿಡಿಯೋ ವೈರಲ್‌


ಯೋಗರಾಜ್ ಭಟ್ಟರು ತಮ್ಮ ಯೋಗರಾಜ್ ಸಿನಿಮಾಸ್ ನಲ್ಲಿ ಪದವಿ ಪೂರ್ವ ಸಿನಿಮಾ ಅನೌನ್ಸ್ ಮಾಡಿದ ದಿನವೇ ಚಿತ್ರದ ಮೇಲೆ ಒಂದು ನಿರೀಕ್ಷೆ ಇತ್ತು. ಆ ನಿರೀಕ್ಷೆ ಈಗ ನಿಜ ಆಗೋ ಲಕ್ಷಣ ಕಾಣ್ತಿದೆ. ಇವತ್ತು ಭಟ್ಟರ ಶಿಷ್ಯ ಹರಿಪ್ರಸಾದ್ ಮೊದಲ ನಿರ್ದೇಶನದ ಪದವಿ ಪೂರ್ವ ಬೆಳ್ಳಿತೆರೆಯನ್ನ ರಂಗೇರಿಸಿದೆ.


ಈ ಸಿನಿಮಾ ನಿಜಕ್ಕೂ ನಮ್ಮ ಪದವಿ ಪೂರ್ವ ದಿನಗಳನ್ನ ನೆನಪು ಮಾಡುತ್ತೆ. ಪದವಿ ಪೂರ್ವ ಕಾಲೇಜು ಜೀವನದ ಅದ್ಬುತ  ಲೈಫ್ ನ್ನು ತೆರೆ ಮೇಲೆ‌ ಕಟ್ಟಿ ಕೊಡುವಲ್ಲಿ ನಿರ್ದೇಶಕ ಹರಿಪ್ರಸಾದ್ ಗೆದ್ದಿದ್ದು, ಪದವಿ ಪೂರ್ವ ಚಿತ್ರಕ್ಕೆ ಜನ ಪುಲ್ ಮಾರ್ಕ್ಸ್ ಕೊಟ್ಟಿದ್ದಾರೆ.


ಪದವಿ ಪೂರ್ವದ ಕಾಲೇಜ್ ಗೋಲ್ಡನ್ ಲೈಫ್ ಜೊತೆ ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತೆ. ಆ ಎಲ್ಲಾ ದೃಶ್ಯಗಳನ್ನ ಸ್ಕ್ರೀನ್ ಮೇಲೆ ನೋಡಿ ಥ್ರಿಲ್ ಆಗ ಬಹುದು. ಹಾಡುಗಳು, ಸ್ಟೋರಿಯಲ್ಲಿರೋ ಟ್ವಿಸ್ಟ್ ಆಂಡ್ ಟರ್ನ್ ಸೀಟ್ ಅಂಚಿನಲ್ಲಿ ಕೂರುವಂತೆ ಮಾಡುತ್ತೆ.


ತಂದೆಗೆ ಮಗ ಡಾಕ್ಟರ್ ಆಗ್ಬೇಕು ಬಡವರ ಸೇವೆ ಮಾಡಬೇಕು ಅನ್ನೋ ಆಸೆ. ಆದ್ರೆ ಮಗ ಫ್ರೆಂಡ್ಸ್, ಫನ್, ಲವ್ ಅಂತ ಇರುವಾಗ ಲೈಫ್ ನಲ್ಲಿ ದೊಡ್ಡ ಬದಲಾವಣೆ ಆಗುತ್ತೆ. ಅದೇನು ಅನ್ನೋದನ್ನ ತಿಳಿಯಬೇಕಾದ್ರೆ ಪದವಿ ಪೂರ್ವ ಸಿನಿಮಾನಾ ಥೀಯೇಟರ್ ಗೆ ಬಂದು ನೋಡಿ ಎಂಜಾಯ್ ಮಾಡಬೇಕು.


ನೀವು ಕೊಟ್ಟ ಕಾಸಿಗೆ ಲಾಸ್ ಅಂತೂ ಇಲ್ಲ. ಬದಲಾಗಿ ಪದವಿ ಪೂರ್ವ ಹ್ಯಾಂಗೋವರ್ನಲ್ಲಿ ಮನೆಗೆ ಹೋಗಬೋದು. ಪದವಿಪೂರ್ವ' 1995-96ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಪದವಿ ಪೂರ್ವ ಸಿನಿಮಾದಲ್ಲಿ ಹೊಸಬರೇ ಇರೋದು. ಯುವ ನಟರ ದಂಡೇ ಈ ಕಾಲೇಜಿನಲ್ಲಿದ್ದಾರೆ. ಇವರ ತರ್ಲೆಗಳು, ತುಂಟಾಟಗಳು, ಲವ್ಲಿ ಕಥೆಗಳು, ಎಲ್ಲವೂ ಇಲ್ಲಿಯ ವಿಶೇಷತೆ ಆಗಿವೆ. ಇದರ ಸುತ್ತ ಒಂದ್ ಒಳ್ಳೆ ಸಿನಿಮಾ ಮಾಡಿರೋದು ವಿಶೇಷವೇ ಆಗಿದೆ.


ಇದನ್ನೂ ಓದಿ: BBK 9 : ಯಾರಾಗಬಹುದು ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್‌!?


ಅಂಜಲಿ ಅನೀಶ್, ಯಶ ಶಿವಕುಮಾರ್ ಸಿನಿಮಾದಲ್ಲಿ ಇದ್ದಾರೆ. ಇವರಲ್ಲದೇ ವಿಶೇಷ ಪಾತ್ರದಲ್ಲಿ ಅದಿತಿ ಪ್ರಭುದೇವ, ದಿವ್ಯಾ ಉರುಡುಗ, ನಯನ ಕೂಡ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ರಂಗಾಯಣ ರಘು ಸಹ ಬಣ್ಣ ಹಚ್ಚಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.