BBK 9 : ಯಾರಾಗಬಹುದು ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್‌!?

Bigg Boss Kannada 9‌ Winner : ಇದೀಗ ಐವರು ಫೈನಲಿಸ್ಟ್‌ಗಳು ಮನೆಯಲ್ಲಿದ್ದೂ, ಇವರಲ್ಲಿ ಯಾರು ವಿನ್ನರ್‌ ಆಗಲಿದ್ದಾರೆ ಎಂಬ ಕಾತುರ ಹೆಚ್ಚಾಗಿದೆ. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ದಿವ್ಯಾ ಉರುಡುಗ ಇವರಲ್ಲಿ ಯಾರು ಬಿಗ್‌ ಬಾಸ್‌ ಟ್ರೋಪಿ ಎತ್ತಲಿದ್ದಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.   

Written by - Chetana Devarmani | Last Updated : Dec 29, 2022, 11:16 PM IST
  • ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್ ಫಿನಾಲೆ
  • ದೊಡ್ಮನೆಯಲ್ಲಿ ಐವರು ಫೈನಲಿಸ್ಟ್‌ಗಳು
  • ಯಾರಾಗಬಹುದು ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್‌!?
BBK 9 : ಯಾರಾಗಬಹುದು ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್‌!?  title=

BBK 9‌ Winner : ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್ ಫಿನಾಲೆಯತ್ತ ಸಾಗುತ್ತಿದೆ ಮತ್ತು ಸ್ಪರ್ಧಿಗಳು ಬಿಗ್‌ ಬಾಸ್‌ ಗ್ಲಾಸ್ ಹೌಸ್‌ನಲ್ಲಿ ತಮ್ಮ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಬಿಗ್‌ ಬಾಸ್‌ ಆಯೋಜಕರು ವಿಶೇಷ ಸಂಚಿಕೆಗೆ ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದಾರೆ. ಅಂತಿಮ ವಾರದಲ್ಲಿ ಸ್ಪರ್ಧಿಗಳಿಗೆ ಮನೆಯಲ್ಲಿ ಅವರ ಬೇಡಿಕೆಗಳನ್ನು ಸಹ ಈಡೇರಿಸುತ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ, ಅರವಿಂದ್ ಕೆಪಿ ಬಿಗ್ ಬಾಸ್ ಕನ್ನಡ 9 ಮನೆಗೆ ಪ್ರವೇಶಿಸಿ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದರು. ಬಿಬಿಕೆ9 ಮನೆಗೆ ಅರವಿಂದ್ ಕೆಪಿ ಅವರ ಪ್ರವೇಶ ಬಹು ನಿರೀಕ್ಷಿತವಾಗಿತ್ತು ಮತ್ತು ವೀಕ್ಷಕರು ಮತ್ತೊಮ್ಮೆ ಬಿಬಿಕೆ ಮನೆಯಲ್ಲಿ ಅರವಿಂದ್ ಕೆಪಿ ಮತ್ತು ದಿವ್ಯಾ ಅವರನ್ನು ಒಟ್ಟಿಗೆ ನೋಡಿದರು. ಇಂದು ವಾಸುಕಿ ವೈಭವ್‌ ಮನೆಗೆ ಬಂದು ಮತ್ತೊಮ್ಮೆ ತಮ್ಮ ಹಾಡಿನ ಮೂಲಕ ಎಲ್ಲರನ್ನು ರಂಜಿಸಿದರು. 

ಇದನ್ನೂ ಓದಿ : BBK9 Finale : ಬಿಗ್ ಬಾಸ್ ಐವರು ಫೈನಲಿಸ್ಟ್‌ಗಳಿಗೂ ಇದೆ ಒಂದೊಂದು ಪ್ಲಸ್​ ಪಾಯಿಂಟ್​

BBK9 ಸ್ಪರ್ಧಿಗಳು ಬಿಗ್ ಬಾಸ್  ಮನೆಯಲ್ಲಿ ತಮ್ಮ ಕೊನೆಯ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಈ ಸಂತಸದ ಸಮಯದಲ್ಲಿ ಸ್ಪರ್ಧಿಗಳ ಕುಟುಂಬ ಸದಸ್ಯರನ್ನು ಕರೆತರುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆ ಶುಕ್ರವಾರ ಮತ್ತು ಶನಿವಾರ ರಂದು ರಾತ್ರಿ 7.30 ಕ್ಕೆ ಪ್ರಸಾರವಾಗಲಿದೆ. ವರದಿಗಳ ಪ್ರಕಾರ, ಬಿಗ್ ಬಾಸ್ ಕನ್ನಡ 9, ಕಲರ್ಸ್ ಕನ್ನಡ ಈಗಾಗಲೇ ಬಿಬಿಕೆ 9 ಗ್ರ್ಯಾಂಡ್ ಫೈನಲ್‌ಗಾಗಿ ಭವ್ಯವಾದ ವೇದಿಕೆಯನ್ನು ಸಿದ್ಧಪಡಿಸಿದೆ.  

ಬಿಗ್ ಬಾಸ್ ಕನ್ನಡ 9 ಪ್ರೇಕ್ಷಕರು ಗ್ರ್ಯಾಂಡ್ ಫಿನಾಲೆಯನ್ನು ವೀಕ್ಷಿಸಲು ಕಾಯುತ್ತಿದ್ದಾರೆ, ಯಾವ ಸ್ಪರ್ಧಿ ಟ್ರೋಫಿ ಎತ್ತುತ್ತಾರೆ ಎಂದು ತಿಳಿಯಲು ಕಾತುರರಾಗಿದ್ದಾರೆ. ಅಂತಿಮ ವಾರದಲ್ಲಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಮತ್ತು ರೂಪೇಶ್ ರಾಜಣ್ಣ ಬಿಗ್ ಬಾಸ್ ಕನ್ನಡ 9 ಮನೆಯಲ್ಲಿ ಉಳಿದಿದ್ದಾರೆ. ವಾರದ ಮಧ್ಯದ ಎಲಿಮಿನೇಷನ್‌ನಲ್ಲಿ ಆರ್ಯವರ್ಧನ್ ಹೊರಹೋದರು. ಬಿಗ್ ಬಾಸ್ ಕನ್ನಡ 9 ಗ್ರ್ಯಾಂಡ್ ಫಿನಾಲೆಗೆ ಇನ್ನು ಕೇವಲ ಒಂದು ದಿನ ಬಾಕಿ ಉಳಿದಿದ್ದು, ವೀಕ್ಷಕರು ಕಾರ್ಯಕ್ರಮದ ವಿನ್ನರ್ ಮತ್ತು ರನ್ನರ್ ಅಪ್ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೀವ್ರವಾಗಿ ಚರ್ಚಿಸುತ್ತಿದ್ದಾರೆ. ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ಕಾರ್ಯಕ್ರಮದ ವಿಜೇತ ಮತ್ತು ರನ್ನರ್ ಅಪ್ ಆಗಲು ಅಗ್ರ ಆಯ್ಕೆಯಾಗಿದ್ದಾರೆ. 

ಇದನ್ನೂ ಓದಿ : BBK 9 : ಬಿಗ್ ಬಾಸ್ ಮನೆಯಲ್ಲಿ ನಟ ಶಿವರಾಜ್ ಕುಮಾರ್?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News