Rakhi Sawanth Marriage News : ಮನರಂಜನಾ ಉದ್ಯಮದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಒಬ್ಬರು ರಾಖಿ ಸಾವಂತ್. ಒಂದಲ್ಲ ಒಂದು ವಿಷಯಕ್ಕಾಗಿ ಸದಾ ಸುದ್ದಿಯಲ್ಲಿರುವ ನಟಿ ಇವರು. ಸದ್ಯ ನಟಿ ಪಾಕಿಸ್ತಾನದಲ್ಲಿದ್ದು, ಆಕೆಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಹೌದು, ರಾಖಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ರಾಖಿ ಸಾವಂತ್ ಗೆ ಈಗಾಗಲೇ ಎರಡು ಬಾರಿ ಮದುವೆಯಾಗಿದೆ. ಆಕೆಯ ಮೊದಲ ಮದುವೆ 2019ರಲ್ಲಿ ರಿತೇಶ್ ಸಿಂಗ್ ಜೊತೆ ನೆರವೇರಿತು. ಆದರೆ ಅವರಿಬ್ಬರೂ 2022 ರಲ್ಲಿ ವಿಚ್ಛೇದನ ಪಡೆದರು. ನಂತರ, ಅದೇ ವರ್ಷದಲ್ಲಿ ಆದಿಲ್ ಖಾನ್ ದುರಾನಿ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಆದರೆ ಈ ಮದ್ವೆ ಕೂಡಾ ಬಹಳ ದಿನಗಳವರೆಗೆ ಉಳಿಯಲಿಲ್ಲ. ಇಬ್ಬರೂ 2023ರಲ್ಲಿ ವಿಚ್ಛೇದನ ಪಡೆದರು. ಇದಾದ ಬಳಿಕ ಇದೀಗ ಮೂರನೇ ಮದುವೆಯ ಸಂಭ್ರಮದಲ್ಲಿದ್ದಾರೆ ರಾಖಿ ಸಾವಂತ್. ಅಚ್ಚರಿಯ ವಿಷಯವೆಂದರೆ ಮೂರನೇ ಮದುವೆಯನ್ನು ಭಾರತದಲ್ಲಿ ಅಲ್ಲ ಪಾಕಿಸ್ತಾನದಲ್ಲಿ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ ಈ ನಟಿ. 


ಇದನ್ನೂ ಓದಿ :  ಕಿಚ್ಚನ ಬಳಿಕ ಈ ಸ್ಟಾರ್‌ ಆಂಕರ್‌ಗೆ ಬಿಗ್‌ ಬಾಸ್‌ ಹೋಸ್ಟ್‌ ಮಾಡಲು ಆಫರ್‌! ಸಿನಿಮಾಗಾಗಿ ಅಲ್ಲ ಸುದೀಪ್‌ ಬಿಗ್‌ ಬಾಸ್‌ ಬಿಡಲು ಅಸಲಿ ಕಾರಣವೇ ಇದು! ಶೋ ಮುಗಿದು 2 ದಿನದ ಬಳಿಕ ಹೊರಬಿತ್ತು ನಿಜವಾದ ಸಂಗತಿ !


ಪಾಕಿಸ್ತಾನಿ ನಟನಿಂದ ಪ್ರೊಪೋಸ್ :  
ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನಿ ನಟ-ನಿರ್ಮಾಪಕ ದೋಡಿ ಖಾನ್  ರಾಖಿ ಮುಂದೆ ಮಾಡುವೆ ಪ್ರಸ್ತಾಪ ಇಟ್ಟಿದ್ದಾರೆ.ಮದುವೆಗೆ ಪ್ರೊಪೋಸ್ ಮಾಡಿರುವ ವಿಡಿಯೋವನ್ನು ದೋಡಿ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ಅದರಲ್ಲಿ ಅವರು ಮಾಡುವೆ ದಿಬ್ಬಣ ಭಾರತಕ್ಕೆ ಬರುವುದೋ ಅಥವಾ ದುಬೈಯಲ್ಲಿ ನೆರವರಿಸುವುದೋ ಎಂದು ಪ್ರಶ್ನಿಸುವುದನ್ನು ನೋಡಬಹುದು. ಅಲ್ಲದೆ ಕೊನೆಗೆ ಲವ್ ಯು ಎಂದು ಹೇಳುತ್ತಾರೆ.  


 


 

 

 

 



 

 

 

 

 

 

 

 

 

 

 

A post shared by Dodi Khan (@dodi_khan)


ಇದೀಗ ಖುದ್ದು ಮಾಧ್ಯಮದೊಂದಿಗೆ ರಾಖಿ ಈ ಬಗ್ಗೆ ಮಾತನಾಡಿದ್ದಾರೆ. ದೋಡಿಯ ಮದುವೆಯ ಪ್ರಸ್ತಾಪವನ್ನು ಪರಿಗಣಿಸಿ, ಪಾಕಿಸ್ತಾನದ ಸೊಸೆಯಾಗುವ ಬಗ್ಗೆ  ಯೋಚಿಸುತ್ತಿದ್ದೇನೆ ಎಂದಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಇದೀಗ ರಾಖಿಯ ಮೂರನೇ ಮದುವೆ ಬಗ್ಗೆ ಚರ್ಚೆ ಶುರುವಾಗಿದೆ. 


 



ಇದನ್ನೂ ಓದಿ :   ಸರಿಗಮಪ ಶೋನ ಖ್ಯಾತ ಗಾಯಕಿ ವಿಧಿವಶ


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ