Saregamapa Manjamma passes away: ಸರಿಗಮಪ ಶೋನ ಖ್ಯಾತ ಗಾಯಕಿ ವಿಧಿಶರಾಗಿದ್ದಾರೆ. ಇತ್ತೀಚಿಗಷ್ಟೇ ಸರಿಗಮಪ ಶೋನ ಜ್ಯೂರಿ ಮೆಂಬರ್ ಕನ್ನಡ ಸಂಗೀತ ಲೋಕದ ದಿಗ್ಗಜ, ಬಹು ವಾದ್ಯ ಪರಿಣಿತರಾದ ಎಸ್. ಬಾಲಿ ಅವರು ನಿಧನರಾಗಿದ್ದರು. ಈ ಬೆನ್ನಲ್ಲೇ ಇದೀಗ ಮತ್ತೋರ್ವ ಗಾಯಕಿ ವಿಧಿವಶರಾಗಿದ್ದಾರೆ. ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ವಿಶಿಷ್ಟ ಗಾಯನದ ಮೂಲಕ ಜನಪ್ರಿಯತೆ ಗಳಿಸಿದ್ದ ಮಂಜಮ್ಮ ನಿಧನರಾಗಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜಮ್ಮ ನಿಧನರಾಗಿದ್ದಾರೆ ಎಂದು ತಿಳದುಬಂದಿದೆ.
ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಮಧುಗಿರಿಯ ಅಂಧ ಸಹೋದರಿಯರಾದ ಮಂಜಮ್ಮ ಹಾಗೂ ರತ್ನಮ್ಮ ತಮ್ಮ ಕಂಠಸಿರಿಯ ಮೂಲಕ ಜನರ ಮನಗೆದ್ದಿದ್ದರು. ಜೋಡಿಯಾಗಿ ಹಾಡಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದರು. ಕಡು ಬಡತನದಲ್ಲಿದ್ದ ಈ ಸೋದರಿಯರು ದೇವಸ್ಥಾನದಲ್ಲಿ ಹಾಡುಗಳನ್ನು ಹಾಡಿ ಹಣ ಸಂಗ್ರಹಿಸುತ್ತಿದ್ದರು. ಮಂಜಮ್ಮ ಹಾಗೂ ರತ್ನಮ್ಮ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.
ಈ ವಿಡಿಯೋ ಸರಿಗಮಪ ತಂಡಕ್ಕೆ ತಲುಪಿತ್ತು. ಬಳಿಕ ತಂಡದ ಸಹಾಯ ಪಡೆದು ಸರಿಗಮಪ ವೇದಿಕೆಗೆ ಬಂದ ಮಂಜಮ್ಮ ಹಾಗೂ ರತ್ನಮ್ಮ ಸೋದರಿಯರು ಹಾಡಿನ ಮೂಲಕ ಜನರಿಂದ ಮೆಚ್ಚುಗೆ ಪಡೆದಿದ್ದರು. ಸೂರಿಲ್ಲದೇ ಪರದಾಡುತ್ತಿದ್ದ ಈ ಅಂಧ ಸಹೋದರಿಯರಿಗೆ ನವರಸ ನಾಯಕ ಜಗ್ಗೇಶ್ ಸಹಾಯ ಮಾಡಿದ್ದರು.
ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಬಳಿಕ ಮತ್ತೆ ಮಧುಗಿರಿ ತಾಲೂಕಿನ ದೇವಸ್ಥಾನದ ಬಳಿ ಹಾಗೂ ಕೆಲವು ಕಾರ್ಯಕ್ರಮದಲ್ಲಿ ಮಂಜಮ್ಮ ಹಾಗೂ ರತ್ನಮ್ಮ ಹಾಡು ಹೇಳುತ್ತ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚಿಗೆ ಮಂಜಮ್ಮ ಅನಾರೋಗ್ಯದಿಂದ ನಿಧನರಾದರು. ಮಗಳನ್ನು ಕಳೆದು ಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: "ರುದ್ರ ಗರುಡ ಪುರಾಣ" ಚಿತ್ರದ ಯಶಸ್ಸಿನ ಖುಷಿ, ಮಾಧ್ಯಮದ ಮುಂದೆ ಹಂಚಿಕೊಂಡ ರಿಷಿ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.