Anant Radhika marriage : ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ನೀತು ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅದ್ದೂರಿಯಾಗಿ ವಿವಾಹವಾದರು. ಜುಲೈ 12 ರಂದು ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಮೂರು ದಿನಗಳ ಈ ವಿವಾಹಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಅತಿರಥ ಮಹಾರಥರು ಆಗಮಿಸಿದ್ದರು. 


COMMERCIAL BREAK
SCROLL TO CONTINUE READING

ಈ ಅದ್ಧೂರಿ ಮದುವೆಗೆ ಖ್ಯಾತ ಉದ್ಯಮಿಗಳು, ಸಿನಿಮಾ, ರಾಜಕೀಯ, ಕ್ರೀಡಾ ಗಣ್ಯರು ಸಾಕ್ಷಿಯಾಗಿದ್ದರು. ನವ ದಂಪತಿಗಳನ್ನು ಮನಸಾರೆ ಆಶೀರ್ವದಿಸಿದರು. ಮುಕೇಶ್ ಅಂಬಾನಿ-ನೀತಾ ದಂಪತಿಗಳು ತಮ್ಮ ಶಕ್ತ್ಯಾನುಸಾರ ಜೀವನ ಪರ್ಯಂತ ಸ್ಮರಣೀಯವಾಗಲು ಈ ವಿವಾಹ ಸಮಾರಂಭವನ್ನು ಆಯೋಜಿಸಿದ್ದರು. 


ಇದನ್ನೂ ಓದಿ:ಆ ದಿನ ಮಾತ್ರ ನಾನು ಮತ್ತು ವಿರಾಟ್ ಕೊಹ್ಲಿ..! ಕೊನೆಗೂ ಲವ್‌ ಮ್ಯಾಟರ್‌ ಬಿಚ್ಚಿಟ್ಟ ತಮನ್ನಾ


ಇಡೀ ವಿಶ್ವವೇ ಅನಂತ್ ಅಂಬಾನಿ ಮದುವೆ ಸಮಾರಂಭದ ಬಗ್ಗೆ ಮಾತನಾಡುತ್ತಿರುವಾಗಲೇ ಪಾಕಿಸ್ತಾನದ ಖ್ಯಾತ ನಟ ಅರ್ಸಲಾನ್ ನಜೀರ್ ವ್ಯಂಗ್ಯವಾಡಿದ್ದಾರೆ.. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ 'ಮದುವೆಯ ಕಾರ್ಯಗಳು ಅದ್ಧೂರಿಯಾಗಿ ನಡೆದಷ್ಟು ಕಾಲ ಈ ದಿನಗಳಲ್ಲಿ ಸಂಬಂಧಗಳು ಉಳಿಯುವುದಿಲ್ಲ’ ಎಂದು ರಾಧಿಕಾ ಅವರ ಫೋಟೋಗಳನ್ನು ಅನಂತ್ ಹಂಚಿಕೊಂಡಿದ್ದಾರೆ.


ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಅರ್ಸಾಲನ್ ನಜೀರ್ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಬಾಲ್ಯದ ಗೆಳೆಯರು. ಅವರ ಪ್ರೀತಿಯಲ್ಲಿ ತುಂಬಾ ಪ್ರಾಮಾಣಿಕತೆ ಇದೆ. ನಿಮ್ಮ ಸಮಸ್ಯೆ ಏನು? ಅಂತ ಪಾಕ್‌ ನಟನ ವಿರುದ್ಧ ನೆಟಿಜನ್‌ಗಳ ಕಿಡಿಕಾರಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.