ನವದೆಹಲಿ:Paresh Rawal Shared His Demise News - ಬಾಲಿವುಡ್ ನ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಪರೇಶ ರಾವಲ್, ಸ್ಕ್ರೀನ್ ಮೇಲೆ ಯಾವ ರೀತಿ ತಮಾಷೆಯ ಪಾತ್ರಗಳನ್ನು ನಿರ್ವಹಿಸುತ್ತಾರೆಯೋ, ಅದೇ ರೀತಿ ಅವರು ನಿಜ ಜೀವನದಲ್ಲಿಯೂ ಕೂಡ ತುಂಬಾ ತಮಾಷೆಯಾಗಿ ವರ್ತಿಸುತ್ತಾರೆ. ಇತ್ತೀಚೆಗಷ್ಟೇ ಅವರ ಸಾವಿನ ಕುರಿತಾದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈ ದಿಗ್ಗಜ ನಟ ಅದನ್ನು ಹಂಚಿಕೊಂಡ ರೀತಿ ನಿಮಗೂ ಕಚಗುಳಿ ಇಡಲಿದೆ.


COMMERCIAL BREAK
SCROLL TO CONTINUE READING

ಸ್ಕ್ರೀನ್ ಶಾಟ್ ಹಂಚಿಕೊಂಡ ಪರೇಶ್ ರಾವಲ್
ಹಿರಿಯ ಬಾಲಿವುಡ್ (Bollywood) ನಟ ಪರೇಶ್ ರಾವಲ್ ಶುಕ್ರವಾರ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯೊಂದರ ಮೂಲಕ ತಮ್ಮ ಸಾವಿನ ಕುರಿತಾಗಿ ಪ್ರಕಟಗೊಂಡ ಒಂದು ಸುದ್ದಿಯ ತಮಾಷೆ ಮಾಡಿದ್ದಾರೆ.  ವಾಸ್ತವದಲ್ಲಿ ನಟ ಒಂದು ಟ್ವೀಟ್ ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಹಿಂದಿ ಭಾಷೆಯಲ್ಲಿ ಶೋಕ ಸಂದೇಶದ ಜೊತೆಗೆ ಪರೇಶ್ ಅವರ ಭಾವಚಿತ್ರವಿದೆ. ಶೋಕ ಸಂದೇಶದಲ್ಲಿ 'ಪರೇಶ್ ರಾವಲ್ ಜೀ, ಚಿತ್ರೋದ್ಯಮದ ಓರ್ವ ಸದಸ್ಯ ಮೇ 14, 2021ರ ಬೆಳಗ್ಗೆ 7 ಗಂಟೆಗೆ ನಿಧನರಾಗಿದ್ದಾರೆ" ಎಂದು ಬರೆದಿದೆ.


ಇದನ್ನೂ ಓದಿ- 'ನನಗೆ ವಯಸ್ಸಾಗಿದ್ದರಿಂದ ನನ್ನ ದೇಹವೂ ಬದಲಾಗಿದೆ'- ಪ್ರಿಯಾಂಕಾ ಚೋಪ್ರಾ


ಈ ಸ್ಕ್ರೀನ್ ಶಾಟ್ ಗೆ ತನ್ನ ಪ್ರತಿಕ್ರಿಯೆ ನೀಡಿದ ಪರೇಶ್ ರಾವಲ್ 
ಈ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡು ಟ್ವೀಟ್ ಮಾಡಿರುವ  ಪರೇಶ್ ರಾವಲ್, "ತಪ್ಪುಗ್ರಹಿಕೆಗೆ ಕ್ಷಮಿಸಿ, ಏಕೆಂದರೆ ನಾನು ಬೆಳಗ್ಗೆ 7 ಗಂಟೆ ನಂತರವೂ ಮಲಗಿದ್ದೆ...!" ಎಂದಿದ್ದಾರೆ. ಆದರೆ, ಪರೇಶ್ ಅಭಿಮಾನಿಗಳಿಗೆ ಈ ಸಾವಿನ ವದಂತಿಯಿಂದ ತೀವ್ರ ಅಸಮಾಧಾನಗೊಂಡಿದ್ದಾರೆ.  ಕೆಲವರು ಇದಕ್ಕೆ ಕ್ರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.


Urvarshi Rautela ಡಾನ್ಸ್ ಗೆ ಫಿದಾ ಆದ ನೆಟ್ಟಿಗರು, 17 ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ


ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪರೇಶ್ ರಾವಲ್
ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಮುಂಬರುವ 'ಹಂಗಾಮಾ -2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2003ರಲ್ಲಿ ತೆರೆಕಂಡ 'ಹಂಗಾಮಾ' ಚಿತ್ರದ ಮುಂದುವರೆದ ಭಾಗವಾಗಿದೆ. ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ, ಮಿಜಾನ್ ಜಾಫೇರಿ ಹಾಗೂ ಪ್ರಣಿತಾ ಸುಭಾಶ್ ಕೂಡ ಅವರೊಂದಿಗೆ ನಟಿಸಿದ್ದಾರೆ.


ಇದನ್ನೂ ಓದಿ-'ಉತ್ತಮ ಚಿಕಿತ್ಸೆ ಸಿಕ್ಕಿದಿದ್ದರೆ ನನ್ನನ್ನೂ ಬದುಕಿಸಬಹುದಿತ್ತು' ಸಾವಿಗೂ ಮುನ್ನ ಪೋಸ್ಟ್ ಹಾಕಿದ ನಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.