Urvarshi Rautela ಡಾನ್ಸ್ ಗೆ ಫಿದಾ ಆದ ನೆಟ್ಟಿಗರು, 17 ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ

Urvashi Rautela Dance Video - ಬಾಲಿವುಡ್ ನಟಿ ಊರ್ವಶಿ ರೌತೇಲಾ ಅವಳ ಡ್ಯಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಇದುವರೆಗೆ ಇದು 17 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ.

Written by - Nitin Tabib | Last Updated : May 9, 2021, 08:02 PM IST
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಊರ್ವಶಿ ವಿಡಿಯೋ.
  • ವಿಡಿಯೋದಲ್ಲಿ ಊರ್ವಶಿ ಡಾನ್ಸ್ ಕಂಡ ನೆಟ್ಟಿಗರು ತಮ್ಮ ದೃಷ್ಟಿ ಕದಲಿಸುತ್ತಲೇ ಇಲ್ಲ.
  • ಹಾಗಾದರೆ ಬನ್ನಿ ನೀವೂ ಈ ಡಾನ್ಸ್ ವಿಡಿಯೋ ವಿಕ್ಷೀಸಿ
Urvarshi Rautela ಡಾನ್ಸ್ ಗೆ ಫಿದಾ ಆದ ನೆಟ್ಟಿಗರು, 17 ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ title=
Urvashi Rautela (File Photo)

ನವದೆಹಲಿ: Urvashi Rautela Video - ಬಾಲಿವುಡ್ ನಟಿ ಮತ್ತು ಸ್ಟೈಲ್ ಐಕಾನ್ ಊರ್ವಶಿ ರೌತೆಲಾ (Urvashi Rautela) ತನ್ನ ಸ್ಟೈಲ್ ಸ್ಟೇಟ್‌ಮೆಂಟ್‌ನಿಂದಾಗಿ ಹೆಡ್ ಲೈನ್ ಗಿಟ್ಟಿಸುತ್ತಲೇ ಇರುತ್ತಾಳೆ. ಆಕೆಯ ವೇಷಭೂಷಣಗಳು ಮತ್ತು ಆಭರಣಗಳು ಸಹ ಸಾರ್ವಜನಿಕರ ಗಮನ ಸೆಳೆಯುತ್ತವೆ. ಪ್ರಸ್ತುತ ಆಕೆಯ ಜಬರ್ದಸ್ತ್ ಡ್ಯಾನ್ಸ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪಡ್ಡೆ ಹೈಕಳ ಹೃದಯ  ಬಡಿತವನ್ನು ಹೆಚ್ಚಿಸುತ್ತಿದೆ.

ವಿಡಿಯೋಗೆ ಸಿಕ್ಕ ಒಟ್ಟು ನೋಟಗಳು ಎಷ್ಟು ಗೊತ್ತಾ?
ಊರ್ವಶಿ  ಇತ್ತೀಚೆಗೆ ತನ್ನ ಅಧಿಕೃತ ಇನ್‌ಸ್ಟಾಗ್ರಾಂ (Urvashi Rautela Instagram) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾಳೆ. ಈ ವೀಡಿಯೊದಲ್ಲಿ ತಮ್ಮ ನೆಚ್ಚಿನ ನಟಿಯ ನೃತ್ಯವನ್ನು ನೋಡಿ, ಅಭಿಮಾನಿಗಳೂ ಕೂಡ ತಮ್ಮ ದೃಷ್ಟಿಯನ್ನು ಬೇರೆಡೆಗೆ ಹಾಕಲು ಇಷ್ಟಪಡುತ್ತಿಲ್ಲ ಎಂಬಂತೆ ಕಂಡುಬರುತ್ತಿದೆ. ಏಕೆಂದರೆ ಈ ವೀಡಿಯೊವನ್ನು ಇದುವರೆಗೆ 1,756,936 ಬಾರಿ ವೀಕ್ಷಿಸಲಾಗಿದೆ... ನೀವೂ ವಿಡಿಯೋ ನೋಡಿ..

 
 
 
 

 
 
 
 
 
 
 
 
 
 
 

A post shared by URVASHI RAUTELA 🇮🇳Actor🇮🇳 (@urvashirautela)

ಬ್ರಿಟ್ನಿ ಸ್ಪಿಯರ್ಸ್ ಗೆ ಜಬರ್ದಸ್ತ್ ಟಕ್ಕರ್
ಈ ವಿಡಿಯೋ ಕುರಿತು ಮಾತನಾಡುವುದಾದರೆ, ಈ ವಿಡಿಯೋದಲ್ಲಿ ಊರ್ವಶಿ, ಬ್ರಿಟನಿ ಸ್ಪೆಯರ್ಸ್ (Britney Spears) ಹಾಗೂ ಸ್ವೀಟಿ (Saweetie) ಅವರ ಟ್ಯಾಪ್ ಇನ್ (Tap In) ಹಾಡಿಗೆ ತನ್ನ ಡಾನ್ಸ್ ಮೂವ್ಸ್ ತೋರಿಸುತ್ತಿದ್ದಾಳೆ. ಈ ವಿಡಿಯೋ ಅನ್ನು ಹಂಚಿಕೊಂಡಿರುವ ಊರ್ವಶಿ ಬ್ರಿಟನಿ ಹಾಗೂ ಸ್ವೀಟಿ ಅವರಿಗೆ ವಿಡಿಯೋ ಅನ್ನು ಟ್ಯಾಗ್ ಮಾಡಿ, ಅಭಿಮಾನಿಗಳಿಗೆ ಟ್ಯಾಪ್ ಇನ್ ಡಾನ್ಸ್ ಚಾಲೆಂಜ್ ಕೂಡ ನೀಡಿದ್ದಾಳೆ. ಊರ್ವಶಿಯ ಈ ವಿಡಿಯೋಗೆ ಜನಸಾಮಾನ್ಯರ ಜೊತೆಗೆ ಹಾಲಿವುಡ್ (Urvashi Rautela Hollywood Song) ಸೆಲಿಬ್ರಿಟಿಗಳು ಕೂಡ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ- Nora Fatehi- ಕ್ಯಾಮರಾ ಮುಂದೆಯೇ ಬದಲಾದ ನೋರಾ ಫತೇಹಿ ಬಟ್ಟೆ, ವಿಡಿಯೋ ವೈರಲ್

25 ರೀತಿಯ ಡಾನ್ಸ್ ಮಾಡುತ್ತಾಳೆ ಊರ್ವಶಿ
ಚಿತ್ರೋದ್ಯಮದಲ್ಲಿ ಊರ್ವಶಿ 25 ಕ್ಕಿಂತಲೂ ಹೆಚ್ಚು ಡಾನ್ಸ್ ಫಾರ್ಮ್ ಗಳಲ್ಲಿ ನೈಪುಣ್ಯತೆ ಹೊದಿರುವ ನಟಿ ಎಂದೂ ಕೂಡ ಹೆಸರುವಾಸಿಯಗಿದ್ದಾಳೆ. 

ಇದನ್ನೂ ಓದಿ- Bollywood: ಸಿನಿ ಕಾರ್ಮಿಕರ ಸಹಾಯಕ್ಕೆ ಧಾವಿಸಿದ 'ಭಾಯಿಜಾನ್' Salman Khan, 25 ಸಾವಿರ ಕಾರ್ಮಿಕರ ಖಾತೆಗೆ ನೇರ ಹಣ ವರ್ಗಾವಣೆ

'ಇನ್ಸ್ಪೆಕ್ಟರ್ ಅವಿನಾಶ್' ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಊರ್ವಶಿ 
ಊರ್ವಶಿ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಅತಿ ಶೀಘ್ರದಲ್ಲಿಯೇ ಊರ್ವಶಿ ಜಿಯೋ ಸ್ಟುಡಿಯೊಸ್ ನ ಮುಂಬರುವ ವೆಬ್ ಸಿರೀಸ್ 'ಇನ್ಸ್ಪೆಕ್ಟರ್ ಅವಿನಾಶ್' ನಲ್ಲಿ ರಣದೀಪ್ ಹುಡ್ದಾ ವಿರುದ್ಧ ಕಾಣಿಸಿಕೊಳ್ಳಲಿದ್ದಾಳೆ. ಗ್ಲ್ಯಾಮರ್ ಗರ್ಲ್ ಎಂದೇ ಖ್ಯಾತಳಾಗಿರುವ ಊರ್ವಶಿ ಈ ವೆಬ್ ಸಿರೀಸ್ ಸಾಮಾನ್ಯ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಇದಲ್ಲದೆ ಅತಿ ಶೀಘ್ರದಲ್ಲಿಯೇ ಊರ್ವಶಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾಳೆ.

ಇದನ್ನೂ ಓದಿ-ತನ್ನ ಚಿಕ್ಕಮ್ಮನಿಗೆ ಆಕ್ಸಿಜನ್ ಸಿಲಿಂಡರ್ ಕೋರಿದ ರೈನಾ ನೆರವಿಗೆ ಧಾವಿಸಿದ ಸೋನು ಸೂದ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News