ಅದ್ಧೂರಿಯಾಗಿ ಜರುಗುತ್ತಿದೆ ಪರಿಣಿತಿ-ರಾಘವ್ ಚಡ್ಡಾ ವಿವಾಹ..! ಪಂಜಾಬಿ ಸಂಪ್ರದಾಯದಂತೆ ಮದುವೆ
Parineeti Raghav Chadha wedding : ಪರಿಣಿತಿ ರಾಘವ್ ಮದುವೆಗಾಗಿ ರಾಜಸ್ತಾನದ ಉದಯಪುರದಲ್ಲಿರುವ ಹೋಟೆಲ್ ಲೀಲಾ ಪ್ಯಾಲೆಸ್ ಹಾಗು ʼತಾಜ್ ಲೇಕ್ ಪ್ಯಾಲೆಸ್ʼನ್ನು ಬುಕ್ ಮಾಡಲಾಗಿದೆ. ಸ್ಟಾರ್ ಜೋಡಿಯ ಮದುವೆ ಹಿನ್ನಲೆ ಹೊಟೆಲ್ ಸಿಬಂದ್ದಿ ವಿಶೇಷ ಭದ್ರತಾ ಕ್ರಮವನ್ನು ಕೈಗೊಂಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
Parineeti Raghav Chadha marriage : ಬಿ-ಟೌನ್ ಬೆಡಗಿ ಪರಿಣಿತಿ ಚೋಪ್ರಾ ಹಾಗು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಮದುವೆ ಇಂದು ಅದ್ದೂರಿಯಾಗಿ ನಡೆಯುತ್ತದೆ. ಕುಟುಂಬಸ್ಥರ ಜೊತೆ ಹಲವಾರು ರಾಜಕೀಯ ಗಣ್ಯರು, ಸಿನಿ ತಾರೆಯರು ಭಾಗಿಯಾಗಿದ್ದಾರೆ. ಸ್ಟಾರ್ ಜೋಡಿ ವಿವಾಹ ಮಹೋತ್ಸವದ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..
ಹೌದು.. ನಟಿ ಪರಿಣಿತಿ ಚೋಪ್ರಾ ಹಾಗು ರಾಜಕಾರಣಿ ರಾಘವ್ ಚಡ್ಡಾ ಮದುವೆ ಸೆಲೆಬ್ರೆಷನ್ ನೆನ್ನೆಯಿಂದ ಅದ್ಧೂರಿಯಾಗಿ ನಡೆಯುತ್ತಿದೆ. ಈ ಜೋಡಿ ತಮ್ಮ ಕುಟುಂಬದವರು, ಆಪ್ತರು, ವಿವಿಧ ಕ್ಷೇತ್ರಗಳ ಗಣ್ಯರ ಸಾಕ್ಷಿಯಾಗಿ ಹಸೆಮಣೆ ಏರುತ್ತಿದ್ದಾರೆ. ಈ ರಾಯಲ್ ಮದವೆಯಲ್ಲಿ ಪಾಲುಗೊಳ್ಳಲು ದೇಶ-ವಿದೇಶದಿಂದ ಸಹ ಅತಿಥಿಗಳು ಆಗಮಿಸಿದ್ದಾರೆ. ಹಾಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಹ ಭಾಗಿಯಾಗಲಿದ್ದಾರೆ.
ಕಣ್ಣುಕುಕ್ಕುವಂತಿದೆ ಬಂಗಾರದ ಜಿಂಕೆ ದಿಶಾ ಮಾದಕ ಮೈಮಾಟ..ಪೋಟೋಸ್ ಇಲ್ಲಿವೆ
ಈ ಜೋಡಿಯ ಮದುವೆಗಾಗಿ ರಾಜಸ್ತಾನದ ಉದಯಪುರದಲ್ಲಿರುವ ಹೋಟೆಲ್ ಲೀಲಾ ಪ್ಯಾಲೆಸ್ ಹಾಗು ʼತಾಜ್ ಲೇಕ್ ಪ್ಯಾಲೆಸ್ʼನ್ನು ಬುಕ್ ಮಾಡಲಾಗಿದೆ. ಸ್ಟಾರ್ ಜೋಡಿಯ ಮದುವೆ ಹಿನ್ನಲೆ ಹೊಟೆಲ್ ಸಿಬಂದ್ದಿ ವಿಶೇಷ ಭದ್ರತಾ ಕ್ರಮವನ್ನು ಕೈಗೊಂಡಿದ್ದಾರೆ. ದೆಹಲಿ ಮೂಲದ ಕಂಪನಿಯೊಂದು ಈ ಇವೆಂಟ್ ನೋಡಿಕೊಳ್ಳುತ್ತಿದ್ದು, ಹೋಟೆಲ್ ಸಿಬಂದ್ದಿಯಿಂದ ಯಾವುದೇ ಮಾಹಿತಿ ಲೀಕ್ ಆಗದಂತೆ ಜಾಗೃತಿ ವಹಿಸಿದೆ.
ಪರಿಣಿತಿ ಹಾಗು ರಾಘವ್ ಇಬ್ಬರು ಒಂದೇ ಬಣ್ಣದ ಉಡುಗೆಗಳನ್ನ ತೊಡಲಿದ್ದಾರೆ. ಪರಿಣಿತಿ ತನ್ನ ಮದುವೆಯ ಬ್ಲೂಕಲರ್ ಲೆಹೆಂಗಾವನ್ನು ಬಾಲಿವುಡ್‌ನ ಫೇಮಸ್ ಫ್ಯಾಷನ್ ಡಿಸೈನರ್ ಮನೀಶ್ ಮೆಲ್ಹೋತ್ರ ಅವರಿಂದ ರೆಡಿ ಮಾಡಿಸಿದ್ದಾರೆ. ಹಾಗೆ ವಧು ಲೆಹೆಂಗಾಕ್ಕೆ ಮ್ಯಾಚ್ ಆಗುವಂತಿ ಆಭರಣಗಳನ್ನು ಸಹ ಧರಿಸಲಿದ್ದಾರೆ. ಮದುವೆಯ ಶಾಸ್ತ್ರಗಳ ಬಳಿಕ, ಬೇರೆ ಶಾಸ್ತ್ರಗಳಿಗೆ ಹಾಗು ಕಾರ್ಯಕ್ರಮಗಳಿಗೆ ಪರ್ಲ್ಸ್ ಥೀಮ್ ವೇಷಭೂಷಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಲಾರ್ ಬಿಗ್ ಅನೌನ್ಸ್..! ಪ್ರಭಾಸ್- ಪ್ರಶಾಂತ್ ನೀಲ್ ಸಿನಿಮಾದ ರಿಲೀಸ್ ಡೇಟ್ ಇಲ್ಲಿದೆ
ಪರಿಣಿತಿ-ರಾಘವ್ ವಿವಾಹ ಪಂಜಾಬಿ ಸಂಪ್ರದಾಯದಂತೆ ನಡೆಯುತ್ತಿದ್ದು, ಬೆಳ್ಳಗಿನಿಂದಲೇ ವಿವಿಧ ಶಾಸ್ತ್ರಗಳು ಪ್ರಾರಂಭವಾಗಿದೆ. ನೆನ್ನೆ ಸಂಗೀತ ಕಾರ್ಯಕ್ರಮ ನೆಡೆಸಿದ್ದರು, ಇಂದು ಮಧ್ಯಾಹ್ನ 1 ಗಂಟೆಗೆ ವರನಿಗೆ ಸಂಭಂದಿಸಿದ ಶಾಸ್ತ್ರಗಳು ಜರುಗಲಿದೆ. ಹಾಗೆ 2 ಗಂಟೆಗೆ ವರನನ್ನು ರಾಯಲ್ ಬೋಟ್‌ನಲ್ಲಿ, ಮೆರವಣಿಗೆ ಮಾಡಿಕೊಂಡು ಹೋಟೆಲ್ ಲೀಲಾ ಪ್ಯಾಲೆಸ್‌ಗೆ ತಲುಪಿಸಿ, ನಂತರ ವಧು ಕುಟುಂಬದವರು ಅತಿಥಿಗಳನ್ನು ಸ್ವಾಗತಿಸುತ್ತಾರೆ. 3.30ಕ್ಕೆ ವಧು-ವರ ಹಾರ ಬದಲಾಯಿಸಿಕೊಂಡು 4 ಗಂಟೆಗೆ ಮದುವೆ ಶಾಸ್ತ್ರ ನೆರೆವೇರಲಿದೆ. ಸಂಜೆ 6.30 ಬೀಳ್ಕೋಡುಗೆ ಸಮಾರಂಭ ಪೂರ್ಣಗೊಂಡ ಮೇಲೆ ರಾತ್ರಿ 8.30ಕ್ಕೆ ಅಪಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದಾರೆ.
ಮುದುವೆಗೆ ಕಾರ್ಯಪ್ರಮದಲ್ಲಿ ಆಸೀನಯಾಗಿರುವ ಅತಿಥಿಗಳಿಗಾಗಿ ವಿವಿಧ ರಾಜ್ಯಗಳ ಭೋ ಜನ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಮದುವೆಯ ಮೆನುನ್ಲಿ ಮುಖ್ಯವಾಗಿ ಪಂಜಾಬಿ ಆಹಾರ ಸಿದ್ದತೆಗೊಳಿಸಲಿದ್ದಾರೆ. ಮದುವೆ ಉದಯಪುರದಲ್ಲಿ ನಡೆಯುತ್ತರುವ ಕಾರಣದಿಂದ ರಾಜಸ್ತಾನದ ಖಾದ್ಯಗಳನ್ನು ಸಹ ನೀಡಲಾಗುತ್ತದೆ. ವಿವಿಧ ರಾಜ್ಯಗಳ ಆಹಾರದ ಜೊತೆ ಇಟಾಲಿಯನ್ ಹಾಗು ಫ್ರೆಂಚ್ ತಿನಿಸುಗಳನ್ನು ಸಹ ತಯಾರಿಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.