Parineeti chopra : ಸೆಪ್ಟಂಬರ್‌ 24ರಂದು ಪರಿಣಿತಿ ಹಾಗೂ ರಾಘವ್‌ ಚಡ್ಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಸಧ್ಯ ಈ ಜೋಡಿ ಮದುವೆ ವಿಚಾರವಾಗಿ ಸುದ್ದಿಯೊಂದು ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ಹೌದು.. ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಹಾಗು ಎಎಪಿ ಸಂಸದ ರಾಘವ್‌ ಚಡ್ಡಾ ಸೆಪ್ಟೆಂಬರ್‌ 24ರಂದು ಹಸೆಮಣೆ ಏರಿದರು. ರಾಜಸ್ತಾನದ ಉದಯ್‌ಪುರಲ್ಲಿ ಅದ್ಧೂರಿಯಾಗಿ ಈ ಜೋಡಿಯ ವಿವಾಹ ಜರುಗಿತು. ಈ ಮದುವೆಯಲ್ಲಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಕೂಡ ಭಾಗವಹಿಸಿದ್ದರು. ಸಧ್ಯ ಸಾನಿಯ ಹಂಚಿಕೊಂಡಿರುವ ಪೋಸ್ಟ್‌ ನಿಂದ ಪರಿಣಿತಿ ಮದುವೆಯಲ್ಲಿ ಜರುಗಿದ ಇಂಟ್ರೆಸ್ಟಿಂಗ್‌ ವಿಚಾರವೊಂದು ರಿವಿಲ್‌ ಆಗಿದೆ. 


ಸ್ಕಿನ್‌ ಕೇರ್‌ ಬ್ರಾಂಡ್ ಪರಿಚಯಿಸಿದ ನಟಿ ನಯನತಾರ : ಪ್ರಾಡೆಕ್ಟ್‌ಗಳ ಬೆಲೆ ನೋಡಿ ಜನ ಶಾಕ್‌


ಸಾನಿಯಾ ಪೋಸ್ಟ್‌ ಮಾಡಿದ ಫೋಟೋದಲ್ಲಿ ಒಂದು ಸಣ್ಣ ಪೇಪರ್‌ ಗ್ಲಾಸ್‌ನಲ್ಲಿ ಹೂಗಳು ಮತ್ತು ಹ್ಯಾಂಡ್‌ ಫ್ಯಾನ್‌ ಹಿಡಿದುಕೊಂಡಿದ್ದರು. ಅದರ ಜೊತೆ ಒಂದು ಬಿಳಿ ಹ್ಯಾಂಡ್‌ ಕರ್ಚೀಫ್‌ ಸಹ ಇತ್ತು. ಸಧ್ಯ ಇದು ಎಲ್ಲರ ಗಮನ ಸೆಳೆಯುತ್ತಿದೆ. ಆ ಕರ್ಚೀಫ್‌ ಮೇಲೆ ʼನಮ್ಮ ಮದುವೆ ನಿಮ್ಮ ಕಣ್ಣಲ್ಲಿ ನೀರು ತರಿಸಿದರೆ ಈ ಹ್ಯಾಂಡ್​ ಕರ್ಚಿಫ್ ಬಳಸಿಕೊಂಡು ಆ ಕಣ್ಣೀರನ್ನು ಒರೆಸಿಕೊಳ್ಳಿʼ ಎಂದು ಬರೆಯಲಾಗಿದ್ದು, ಕೊಂಚ ಡಿಫ್ರೆಂಟ್‌ ಅನಿಸುತ್ತಿದೆ.


ಇದನ್ನು ನೋಡಿದ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. ಇಷ್ಟೊಂದು ಎಮೋಷನಲ್‌ ಆಗ್ತೀರಾ, ಇದು ಯಾಕೋ ಸ್ವಲ್ಪ ಓವರ್‌ ಆಯ್ತು ಅಂತ ವ್ಯಂಗ್ಯವಾಡಿದ್ದಾರೆ. ಹಾಗೆ ಇನ್ನು ಕೆಲವರು ಹಣ ಜಾಸ್ತಿಯಿದೆ ಅಂತ ಬೇಕಾಬಿಟ್ಟಿ ಓವರ್‌ ಮಾಡ್ತಾರೆ ಅಂತ ರೆಗಾಡಿದ್ದಾರೆ. ಸಧ್ಯ ಈ ಫೊಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.