ಸ್ಕಿನ್‌ ಕೇರ್‌ ಬ್ರಾಂಡ್ ಪರಿಚಯಿಸಿದ ನಟಿ ನಯನತಾರ : ಪ್ರಾಡೆಕ್ಟ್‌ಗಳ ಬೆಲೆ ನೋಡಿ ಜನ ಶಾಕ್‌

Nayanthara skin care brand : ಇತ್ತೀಚಿಗೆ ʼಜವಾನ್‌ʼ ಸಿನಿಮಾದ ಮೂಲಕ ತಮ್ಮ ಫ್ಯಾನ್ಸ್‌ ಪಾಲೋಯಿಂಗ್‌ ಹೆಚ್ಚಸಿಕೊಂಡ ಸೌತ್‌ ಸೂಪರ್‌ ಸ್ಟಾರ್‌ ನಟಿ ನಯನತಾರ ತಮ್ಮ ಸೋಷಿಯಲ್ ಮಿಡಿಯಾದ‌ಲ್ಲಿ ಹಂಚಿಕೊಂಡಿರುವ ಪೋಸ್ಟ್‌ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತ ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ ನೋಡಿ.. 

Written by - Krishna N K | Last Updated : Oct 2, 2023, 07:07 PM IST
  • ನಟಿ ನಯನತಾರ ಹೊಸ ಬಿಸಿನೆಸ್‌ ಪ್ರಾರಂಭಿಸಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ.
  • ನಟಿ ತಮ್ಮ ಹೊಸ ಸ್ಕಿನ್‌ ಕೇರ್‌ ಬ್ರ್ಯಾಂಡ್‌ ಅನ್ನು ಸೆಪ್ಟೆಂಬರ್‌ 29 ರಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
  • ಸದ್ಯ ಇದೇ ವಿಚಾರವಾಗಿ ಫ್ಯಾನ್ಸ್‌ಗಳು ನಯನತಾರ ವಿರುದ್ದ ಟೀಕೆ ವ್ಯಕ್ತಪಡಿಸಿದ್ದಾರೆ. ‌
ಸ್ಕಿನ್‌ ಕೇರ್‌ ಬ್ರಾಂಡ್ ಪರಿಚಯಿಸಿದ ನಟಿ ನಯನತಾರ : ಪ್ರಾಡೆಕ್ಟ್‌ಗಳ ಬೆಲೆ ನೋಡಿ ಜನ ಶಾಕ್‌ title=

Nayanthara : ನಟಿ ನಯನತಾರ ಇಷ್ಟು ದಿನ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಜವಾನ್‌ ಸಿನಿಮಾದ ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ. ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸಿದೆ. ಈ ಚಿತ್ರದಿಂದ ಲೆಡಿ ಸೂಪರ್‌ ಸ್ಟಾರ್‌ ಫ್ಯಾನ್ಸ್‌ ಫಾಲೋಯಿಂಗ್‌ ಹೆಚ್ಚಾಯಿತು. ಸಧ್ಯ ನಯನತಾರ ಜಾಹೀರಾತಿನ ವಿಚಾರವಾಗಿ ಟ್ರೋಲ್‌ ಆಗಿದ್ದಾರೆ.

ಹೌದು.. ಇತ್ತೀಚೆಗೆ ನಯನತಾರ ಸಿನಿಮಾಗಳ ಜೊತೆ ಜಾಹೀರಾತಿನಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ. 9ಸ್ಕಿನ್‌ ಕೇರ್‌ ಬ್ರಾಂಡ್ ಪ್ರಾಡೆಕ್ಟ್‌ ಪರಿಚಯಿಸುವುದರ ಜೊತೆಗೆ, ಇದರ ಫೋಟೋ ಹಾಗೂ ವಿಡಿಯೋವನ್ನು ಸಹ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇದೇ ವಿಚಾರವಾಗಿ ಫ್ಯಾನ್ಸ್‌ಗಳು ನಯನತಾರ ವಿರುದ್ದ ಟೀಕೆ ವ್ಯಕ್ತಪಡಿಸಿದ್ದಾರೆ. ‌

 
 
 
 

 
 
 
 
 
 
 
 
 
 
 

A post shared by 9 S K I N (@9skinofficial)

ಇದನ್ನೂ ಓದಿ: 'ಗಜರಾಮ'ನ ಅಡ್ಡದಲ್ಲಿ ತುಪ್ಪದ ಬೆಡಗಿ : ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ ರಾಗಿಣಿ

ನಯನತಾರ ಹೊಸ ಬಿಸಿನೆಸ್‌ ಪ್ರಾರಂಭಿಸಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಟಿ ತಮ್ಮ ಹೊಸ ಸ್ಕಿನ್‌ ಕೇರ್‌ ಬ್ರ್ಯಾಂಡ್‌ ಅನ್ನು ಸೆಪ್ಟೆಂಬರ್‌ 29 ರಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 9ಸ್ಕಿನ್‌ ಕೇರ್‌ ಬ್ರಾಂಡ್ ಪ್ರಾಡೆಕ್ಟ್‌ ಕುರಿತು ವಿಡಿಯೋ ಮತ್ತು ಫೋಟೋಸ್‌ ಹಂಚಿಕೊಂಡಿದ್ದಾರೆ. ನಟಿಯ ಹೊಸ ಪ್ರಾಡಕ್ಟ್‌ ನೋಡಿದ ನೆಟಿಜನ್ಸ್‌ ಖರೀದಿಸಲು ಮುಂದಾಗಿ ಅದರ ಬೆಲೆ ನೋಡಿ ಶಾಕ್‌ ಆಗಿದ್ದಾರೆ. 

ಯಸ್‌.. 9ಸ್ಕಿನ್‌ ಕೇರ್‌ ಬ್ರಾಂಡ್‌ನ ಬೆಲೆ ಶುರವಾಗುವುದೇ ರೂ.999 ಇಂದ. ರೂ.1899ರ ವರೆಗಿನ ಉತ್ಪನ್ನಗಳು ಲಭ್ಯವಿದೆ. ಬೆಲೆ ವಿಚಾರವಾಗಿ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದು, ಇಷ್ಟೊಂದು ಬೆಲೆ ಏಕೆ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಇದು 9ಸ್ಕಿನ್‌ ಕೇರ್‌ ಬ್ರಾಂಡ್‌ ಅಲ್ಲ, ಇದು 9ತಾರಾ ಬ್ರಾಂಡ್‌ ಅಂತ ಕಮೆಂಟ್‌ ಮಾಡಿ ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಸೂಪರ್‌ ಅಂತ ಹೇಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News