ಲಂಡನ್: ಸೋಶಿಯಲೈಟ್ ಪ್ಯಾರಿಸ್ ಹಿಲ್ಟನ್ ಚಿರಕಾಲ ಬದುಕುವ ಆಸೆ ಹೊಂದಿದ್ದಾಳೆ. ಏಕೆಂದರೆ, ಸಾವಿನ ಬಳಿಕ ಅಲ್ಲಿ ಒಂದು ವೇಳೆ ಏನೂ ಇಲ್ಲದೆ ಹೋದರೆ ತಮಗೆ ತುಂಬಾ ಬೋರ್ ಆಗಲಿದೆ ಎಂಬುದು ಅವಳ ಅನಿಸಿಕೆಯಾಗಿದೆ. ಫಿಮೆಲ್ ಫಸ್ಟ್ ಡಾಟ್ ನ ಡಾಟ್ ಯುಕೆಯಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಹಿಲ್ಟನ್ ಬ್ರಿಟನ್ ನ ಕಾಸ್ಮೋಪಾಲಿಟನ್ ಮ್ಯಾಗಜೀನ್ ಗೆ ನೀಡಿರುವ ಸಂದರ್ಶನದಲ್ಲಿ ಸಾವು ತನ್ನಲ್ಲಿ ಭೀತಿ ಉಂಟು ಮಾಡುತ್ತದೆ ಎಂದು ಹೇಳಿದ್ದಾಳೆ. ಏಕೆಂದರೆ, ಸಾವಿನ ಬಳಿಕ ಏನಾಗುತ್ತದೆ ಎಂಬುದು ತನಗೆ ಗೊತ್ತಿಲ್ಲ. ಅಲ್ಲಿ ಒಂದು ವೇಳೆ ಏನೂ ಇಲ್ಲದಿದ್ದರೆ ತನಗೆ ತುಂಬಾ ಬೋರ್ ಆಗಲಿದೆ ಎಂದು ಹೇಳಿದ್ದಾಳೆ.


COMMERCIAL BREAK
SCROLL TO CONTINUE READING

ಅಷ್ಟೇ ಅಲ್ಲ ತಾವು ಇದಕ್ಕಾಗಿ ಮಾರ್ಗವೊಂದನ್ನು ಕೂಡ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವುದಾಗಿ ಹಿಲ್ಟನ್ ಹೇಳಿದ್ದಾಳೆ. ತನ್ನನ್ನು ತಾನು ಫ್ರೀಜ್ ಗೊಳಿಸಲು ಅಥವಾ ನಿರಂತರ ಚಿರ ಯೌವ್ವನ ಪಡೆಯಲು ಮಾತ್ರೆಯೊಂದರ ಆವಿಷ್ಕಾರ ನಡೆಸುವುದು ತಮ್ಮ ಪ್ರಯತ್ನಗಳಲ್ಲಿ ಶಾಮೀಲಾಗಿವೆ ಎಂದ ನಟಿ 'ಡೆತ್ ಬಿಕಮ್ಸ್ ಹರ್' ಚಲನಚಿತ್ರದ ರೀತಿ ಜನರು ಚಿರಕಾಲ ಬದುಕಬೇಕು ಎಂದಿದ್ದಾಳೆ.


ಆದರೆ ಯಾವುದೇ ರೀತಿಯ ಕಾಸ್ಮೆಟಿಕ್ ಸರ್ಜರಿಯ ಸಹಾಯ ಪಡೆಯದೇ ಚಿರಯೌವ್ವನ ಹೊಂದಿರುವುದು ತಮ್ಮ ಭಾಗ್ಯ ಎಂದು ಹಿಲ್ಟನ್ ಹೇಳುತ್ತಾಳೆ.