Boycott Pathaan : ʼಪಠಾಣ್‌ʼ ಚಿತ್ರದ ವಿವಾದ ದಿನದಿಂದ ದಿನಕ್ಕೆ ಭಾರಿ ಸದ್ದು ಮಾಡುತ್ತಿದೆ. ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ವಿವಾದ ರಂಗು ಪಡೆದಿದ್ದು, ಶಾರುಖ್‌ ಖಾನ್‌ ಮತ್ತು ದೀಪಿಕಾಗೆ ಚಿತ್ರನಟಿ ನಟಿಯರು ಸೇರಿದಂತೆ ಅವರ ಅಭಿಮಾನಿಗಳು ಬೆಂಬಲ ನೀಡುತ್ತಿದ್ದಾರೆ. ಇದೀಗ ಈ ವಿಚಾರವಾಗಿ ಅಕ್ಷಯ್‌ ಕುಮಾರ್‌ ಜೊತೆ ಕಂಗನಾ ಹೆಸರು ಕೇಳಿ ಬಂದಿದೆ. ಅಲ್ಲದೆ, ಕಂಗನಾ ಲಾಕ್‌ಅಪ್‌ ಸಿನಿಮಾದ ಪೋಸ್ಟರ್‌ ಕೂಡ ವೈರಲ್‌ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಇತ್ತೀಚಿಗೆ ಫಿಲ್ಮಿ ಮಂದಿಗೆ ಬ್ಯಾನ್, ಬಾಯ್‌ಕಾಟ್ ಎಂಬ ಮಾತುಗಳು ನಡುಕ ಉಂಟು ಮಾಡಿಸುತ್ತಿವೆ. ಯಾವಾಗ ಯಾರ ಸಿನಿಮಾ ಬ್ಯಾನ್‌ ಆಗತ್ತೋ.. ಬಾಯ್ಕಾಟ್‌ ಆಗತ್ತೋ ಅಂತ ಗೊತ್ತೆ ಆಗಲ್ಲ. ನೆಟ್ಟಿಗರು ಪ್ರತಿಯೊಂದರಲ್ಲೂ ತಪ್ಪುನ್ನು ಕಂಡು ಹಿಡಿದು ಟ್ರೋಲ್‌ ಮಾಡಿ ವಿವಾದಕ್ಕೆ ಗುರಿಮಾಡುತ್ತಿದ್ದಾರೆ. ಇತ್ತೀಚಿಗೆ ರಶ್ಮಿಕಾ ಮಂದಣ್ಣ ವಿರುದ್ಧ ಬ್ಯಾನ್‌ ಕೂಗು ಕೇಳಿ ಬಂದಿತ್ತು. ಸ್ಯಾಂಡಲ್‌ವುಡ್‌ ಸಿನಿಮಾಗಳಿಂದ ರಶ್ಮಿಕಾ ಅವರನ್ನು ದೂರವಿಡಲಾಗಿದೆ ಎನ್ನುವ ಮಾತುಗಳು ಹರಿದಾಡುತ್ತಿದ್ದವು. ಆದ್ರೆ ಅದ್ಯಾವುದು ಅಧಿಕೃತವಾದ ಹೇಳಿಕೆ ಆಗಿರಲಿಲ್ಲ.


ಇದನ್ನೂ ಓದಿ: 'ಕೋಟಿಗೊಬ್ಬ ಕ್ಯಾಲೆಂಡರ್’ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್


ಇದೀಗ ಪಠಾಣ್‌ ವಿರುದ್ಧ ದೇಶಾದ್ಯಂತ ಬಾಯ್ಕಾಟ್‌ ಕೂಗು ಕೇಳಿ ಬರುತ್ತಿದೆ. ಕೇಸರಿ ಬಣ್ಣಕ್ಕು ಪಠಾಣ್‌ ಸಿನಿಮಾಗು ಲಿಂಕ್‌ ಕ್ರಿಯೇಟ್‌ ಮಾಡಿರುವ ಜನ ಶಾರುಖ್‌ ಖಾನ್‌ ಸಿನಿಮಾ ವಿರುದ್ಧ ಹರಿಹಾಯ್ದಿದ್ದಾರೆ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಬಾಯ್ಕಾಟ್‌ ಪಠಾಣ್‌ ಎಂಬ ಹ್ಯಾಷ್‌ ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ. ಅಲ್ಲದೆ, ಹಿಂದೂ ಸಂಘಟನೆಗಳು ದೀಪಿಕಾ ಕೇಸರಿ ಬಿಕನಿ ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಶಾರುಖ್‌ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆ ಪಠಾಣ್ ಚಿತ್ರದ ಬೇಷರಂ ರಂಗ್‌ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ತೊಟ್ಟಿದ್ದು ಇಷ್ಟೋಂದು ವಿವಾದಕ್ಕೆ ಕಾರಣವಾಗುತ್ತದೆ ಅಂತ ಯಾರೂ ಊಹಿಸಿರಲಿಲ್ಲ ಅನಿಸುತ್ತೆ. ಇದೀಗ ಈ ಮ್ಯಾಟರ್‌ ರಂಗು ಪಡೆದಿದ್ದು, ಕಿಂಗ್‌ ಖಾನ್‌ ಮತ್ತು ದೀಪಿಕಾ ಅಭಿಮಾನಿಗಳು ಹಾಗೂ ಕೆಲ ನೆಟ್ಟಿಗರು ಕಂಗನಾ, ಅಕ್ಷಯ್‌ ಕುಮಾರ ಸೇರಿದಂತೆ ಇತರು ತಮ್ಮ ಸಿನಿಮಾಗಳಲ್ಲಿ ಕೇಸರಿ ತೊಟ್ಟಿದ್ದ ಫೋಟೋ ಹಾಗೂ ವಿಡಿಯೋಗಳನ್ನು ವೈರಲ್‌ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಶಾರುಖ್‌ಗೆ ಒಂದು ಕಂಗನಾ, ಅಕ್ಷಯ್‌ ಕುಮಾರ್‌ಗೆ ಒಂದಾ... ನ್ಯಾಯ ಎಲ್ಲಿದೆ...? ಅಂತ ಕೇಳುತ್ತಿದ್ದಾರೆ.


ಇದನ್ನೂ ಓದಿ: ಡಾಲಿ ʼಜಮಾಲಿ ಗುಡ್ಡʼ ಟ್ರೇಲರ್‌ ಸೂಪರ್‌ : ಡಿ.30 ರಂದು ರಾಜ್ಯಾದ್ಯಂತ ತೆರೆಗೆ


ಅಷ್ಟೇ ಅಲ್ಲ, ಕಂಗನಾ ಅವರ ಲಾಕ್‌ ಅಪ್‌ ಸಿನಿಮಾದ ಪೋಸ್ಟರ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪೋಸ್ಟರ್‌ನಲ್ಲಿ ಕಂಗನಾ ಕೇಸರಿ ತೊಟ್ಟ ಖೈದಿಯೊಬ್ಬನ ಮೇಲೆ ಕಾಲು ಇಟ್ಟಿದ್ದಾರೆ. ಇದನ್ನು ಹಂಚಿಕೊಂಡಿರುವ ನೆಟ್ಟಿಗರು ಕೇಸರಿ ಬಟ್ಟೆ ತೊಟ್ಟ ವ್ಯಕ್ತಿಯ ಮೇಲೆ ಬೂಟುಗಾಲಿಟ್ಟರೂ ಯಾರು ಇವರನ್ನು ಬ್ಯಾನ್‌, ಬಾಯ್ಕಾಟ್‌ ಮಾಡಲು ಹೋಗಿಲ್ಲ ಯಾಕೆ..? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ದೀಪಿಕಾ ವಿರುದ್ಧ ಮಾತನಾಡಿದವರು, ಕಂಗನಾ ವಿರುದ್ಧ ಏಕೆ ತುಟಿ ಬಿಚ್ಚುತ್ತಿಲ್ಲ ಅಂತ ಕಿಡಿಕಾರಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.