ಕೊಲೆ ಕೇಸಲ್ಲಿ ಪವಿತ್ರಾ ಗೌಡ ಎ1, ದರ್ಶನ್ ಎ2: ರೇಣುಕಾಸ್ವಾಮಿ ಕೊಂದವರು 13 ಜನರಲ್ಲ 17 ಜನ
Darshan Pavithra gowda murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಮತ್ತು ಪವಿತ್ರಗೌಡ ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ಇನ್ನು ಈ ಕೊಲೆ ಪ್ರಕರಣದಲ್ಲಿ 13 ಜನರಲ್ಲ ಒಟ್ಟು 17 ಜನ ಆರೋಪಿಗಳು ಭಾಗಿಯಾಗಿದ್ದರು.. ಈ ಕುರಿತ ವರದಿ ಇಲ್ಲಿದೆ..
Renukaswamy murder case : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಸ್ಪೋಟಕ ಮಾಹಿತಿಗಳನ್ನು ಹೊರತೆಗೆಯುತ್ತಿದ್ದಾರೆ. ದರ್ಶನ್, ಪವಿತ್ರಾಗೌಡ 13 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಕೊಲೆ ಪ್ರಕರಣದಲ್ಲಿ ಯಾರ್ಯಾರು ಎಷ್ಟನೇ ಆರೋಪಿಗಳನ್ನಾಗಿ ಮಾಡಲಾಗಿದೆ ಎಂಬುದು ಈ ಕೇಸಲ್ಲಿ ಪ್ರಮುಖವಾಗುತ್ತೆ. ಕೋರ್ಟ್ ಗೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.
A1- ಪವಿತ್ರಗೌಡ, ಬೆಂಗಳೂರು
A2-ದರ್ಶನ್ , ಬೆಂಗಳೂರು
A3-ಪುಟ್ಟಸ್ವಾಮಿ, ಅಕ್ಕೂರು ಗ್ರಾಮ ಚೆನ್ನಪ್ಪಟ್ಟಣ ರಾಮನಗರ
4- ರಾಘವೇಂದ್ರ, ಕೋಳಿ ಬರ್ಜನ ಹಟ್ಟಿ ದೊಡ್ಡಪೇಟೆ, ಚಿತ್ರದುರ್ಗ
5-ನಂದೀಶ್, ಚಾಮಲಾಪುರ ಗ್ರಾಮ ಮಂಡ್ಯ
6-ಜಗದೀಶ@ಜಗ್ಗ
7-ಅನು
8-ರವಿ
9- ರಾಜು
10-ವಿನಯ, ಆರ್ ಆರ್ ನಗರ ಬೆಂಗಳೂರು
11- ನಾಗರಾಜ್ ರಾಮಕೃಷ್ಣನಗರ ಮೈಸೂರು
12-ಲಕ್ಷ್ಮಣ್, ಆರ್ ಪಿ ಸಿ ಲೇಔಟ್ ಬೆಂಗಳೂರು
13-ದೀಪಕ್ , ಬಿಇಎಂಲೇಎಲ್ ಔಟ್ ಆರ್ ಆರ್ ನಗರ ಬೆಂಗಳೂರು
14-ಪ್ರದೂಷ್, ಗಿರಿನಗರ ಬೆಂಗಳೂರು
15-ಕಾರ್ತಿಕ್@ಕಪ್ಪೆ, ಗಿರಿನಗರ ಬೆಂಗಳೂರು
16-ಕೇಶವಮೂರ್ತಿ, ಗಿರಿನಗರ ಬೆಂಗಳೂರು
17-ನಿಖಿಲ್ ನಾಯಕ್, ಕೆಂಬತಹಳ್ಳಿ, ಬೆಂಗಳೂರು ಎಂದು ಕೋರ್ಟ್ ಗೆ ಮಾಹಿತಿ ನೀಡಲಾಗಿದೆ.
ಇನ್ನೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪೈಕಿ 13 ಮಂದಿಯನ್ನು ಬಂಧಿಸಲಾಗಿದೆ. ಆದರೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಾದ ಜಗದೀಶ@ಜಗ್ಗ, ಅನು, ರವಿ, ರಾಜು ಎಸ್ಕೇಪ್ ಆಗಿದ್ದು, ಇವರಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ. ಮೊದಲು ರೇಣುಕಾಸ್ವಾಮಿಯನ್ನ ಕೊಂದವರು 13 ಮಂದಿ ಎನ್ನಲಾಗಿತ್ತು. ಆದರೆ ಪೊಲೀಸರ ತನಿಖೆ ವೇಳೆ ಕೇಸಲ್ಲಿ 17 ಮಂದಿ ಕೈವಾಡವಿದೆ ಎಂಬುದು ಬಟಬಯಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.