ಪವಿತ್ರಾ ಜಯರಾಂ ಸತ್ತಿದ್ದು ಆಕ್ಸಿಡೆಂಟ್ನಿಂದಲ್ಲ.. ದರ್ಶನ್ ಸಿನಿಮಾಗೆ ಸಹಿ ಹಾಕಲು ಬಂದಿದ್ದ ಕಿರುತೆರೆ ನಟಿ ಸಾವಿನ ಸತ್ಯ ಬಿಚ್ಚಿಟ್ಟ ಪತಿ !
Pavitra Jayaram Car Accident: ನಟಿ ಪವಿತ್ರಾ ಜಯರಾಮ್ ಸಾವಿಗೆ ಕಾರು ಅಪಘಾತ ಕಾರಣ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಸಾವಿಗೆ ಕಾರಣ ಕಾರ್ ಆಕ್ಸಿಡೆಂಟ್ ಅಲ್ಲ ಎನ್ನಲಾಗ್ತಿದೆ.
Pavitra Jayaram Death Reason: ತ್ರಿನಯನಿ ಧಾರಾವಾಹಿಯ ಮೂಲಕ ತಿಲೋತ್ತಮ ಪಾತ್ರದಿಂದ ಖ್ಯಾತಿ ಪಡೆದಿದ್ದ ನಟಿ ಪವಿತ್ರಾ ಜಯರಾಮ್ ನಿಧನರಾಗಿರುವ ವಿಚಾರ ಅನೇಕರಿಗೆ ಶಾಕ್ ನೀಡಿದೆ. ತನ್ನ ಅದ್ಭುತ ಅಭಿನಯದಿಂದ ಎಲ್ಲರನ್ನೂ ಆಕರ್ಷಿಸಿದ ನಟಿ ಪವಿತ್ರಾ ಜಯರಾಮ್ ವಿಧಿವಶರಾದ ವಿಚಾರ ಎಲ್ಲರಿಗೂ ಗೊತ್ತು. ನಟಿ ಪವಿತ್ರಾ ಜಯರಾಮ್ ಸಾವಿಗೆ ಕಾರು ಅಪಘಾತ ಕಾರಣ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಸಾವಿಗೆ ಕಾರಣ ಕಾರ್ ಆಕ್ಸಿಡೆಂಟ್ ಅಲ್ಲ ಎನ್ನಲಾಗ್ತಿದೆ. ನಟಿ ಪವಿತ್ರಾ ಜಯರಾಮ್ ಸಾವಿಗೆ ನಿಜವಾದ ಕಾರಣ ಬೇರೆಯೇ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ವಿಷಯವನ್ನು ಅವರ ಪತಿ ಚಲ್ಲಾ ಚಂದ್ರಕಾಂತ್ ನೇರವಾಗಿ ಬಹಿರಂಗಪಡಿಸಿದ್ದಾರೆ.
ಭಾನುವಾರ ಅಂದರೆ ಮೇ 12 ರಂದು ಪವಿತ್ರಾ ಜಯರಾಮ್ ನಿಧನರಾಗಿದ್ದಾರೆ. ಮಹೆಬೂಬ್‌ನಗರ ಜಿಲ್ಲೆಯ ಭೂತ್‌ಪುರ ಪುರಸಭೆ ವ್ಯಾಪ್ತಿಯ ಶೇರಿಪಲ್ಲಿ(ಬಿ) ಗ್ರಾಮದ ಬಳಿ ಆಕೆ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಈ ರಸ್ತೆ ಅಪಘಾತದಲ್ಲಿ ನಟಿ ಪವಿತ್ರಾ ಜಯರಾಮ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: 69 ವರ್ಷ.. 6 ಸಂಬಂಧ.. ಆದರೂ ಜೀವನದಲ್ಲಿ ಒಬ್ಬಂಟಿ! ಸಿನಿಮಾ ಜಗತ್ತನ್ನು ಆಳಿದ ಈ ತಾರೆ ಯಾರು ಗೊತ್ತೇ?
ಆದರೆ ಇತ್ತೀಚೆಗೆ ಅವರ ಪತಿ ಚಲ್ಲಾ ಚಂದ್ರಕಾಂತ್ ತಮ್ಮ ಪತ್ನಿ ನಟಿ ಪವಿತ್ರಾ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾರಿನಲ್ಲಿ 4 ಜನರಿದ್ದೆವು. ಬೆಂಗಳೂರಿನಿಂದ ಹೈದರಾಬಾದ್ ಗೆ ಹೋಗುತ್ತಿದ್ದೆವು. ಮಧ್ಯಾಹ್ನ 2:30ಕ್ಕೆ ಬೆಂಗಳೂರಿನಿಂದ ಹೊರಟೆವು ಸಂಜೆ 6:30ಕ್ಕೆ ಮಳೆ ಶುರುವಾಯ್ತು. ಈ ವೇಳೆ ಟ್ರಾಫಿಕ್ ಜಾಮ್ ನಲ್ಲಿ ಮೂರು ಗಂಟೆ ಜಾಮ್ ಸಿಲುಕಿಕೊಂಡೆವು. 80 ಫೀಟ್ ರೋಡ್‌ನಲ್ಲಿ ಹೋಗುತ್ತಿದ್ದೆವು. ಈ ವೇಳೆ ಬಸ್ ಒಂದು ಓವರ್ ಟೇಕ್ ಮಾಡುವಾಗ ಕಾರಿಗೆ ಟಚ್ ಆಗಿದೆ. ಇದರಿಂದಗಾಬರಿಗೊಂಡ ಡ್ರೈವರ್ ಸ್ಟೇರಿಂಗ್ ನ ಉಲ್ಟಾ ತಿರುಗಿಸಿದ್ದಾನೆ. ಆಗ ಕಾರು ಪಕ್ಕದ ರಸ್ತೆಗೆ ಹೋಗಿದೆ. ಎದುರಿನಿಂದ ಬಸ್ ಬರುತ್ತಿತ್ತು ಆ ಬಸ್ ಕೂಡ ಟಚ್ ಆಯಿತು ಎಂದಿದ್ದಾರೆ.
ಈ ಅವಘಡದಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಅಪಘಾತದಲ್ಲಾದ ಗಾಯಗಳಿಂದ ಪವಿತ್ರಾ ಸಾವನ್ನಪ್ಪಿಲ್ಲ. ಅಪಘಾತದ ರೀತಿ ನೋಡಿ ಆಘಾತವಾಯಿತು. ಡ್ರೈವರ್ ಹಾಗೂ ಪವಿತ್ರಾ ಅಕ್ಕನ ಮಗಳು ಮುಂದೆ ಇದ್ರು. ಅವರಿಗೆ ಏನು ಆಗಿರಲಿಲ್ಲ. ನನ್ನ ಕೈಗೆ, ತಲೆಗೆ ಪೆಟ್ಟಾಯ್ತು. ಇದನ್ನು ನೋಡಿದ ಪವಿತ್ರಾ ಶಾಕ್ ಆದರು. ಗಾಬರಿಯಿಂದ ಜೋರಾಗಿ ಉಸಿರು ಎಳೆದುಕೊಂಡರು. ಇದು ಸಡನ್ ಸ್ಟ್ರೋಕ್ ಎಂದು ವೈದ್ಯರು ಹೇಳಿದ್ದಾರೆ. ರಸ್ತೆ ಅಪಘಾತದಲ್ಲಿ ಯಾವುದೇ ಗಾಯಗಳಿಲ್ಲದೆ ಹೃದಯಾಘಾತದಿಂದ ಪವಿತ್ರಾ ಸಾವನ್ನಪ್ಪಿರುವುದು ನಿಜಕ್ಕೂ ನೋವಿನ ಸಂಗತಿ. ಪತ್ನಿಯ ಸಾವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ದರ್ಶನ್ ಸರ್ ಸಿನಿಮಾದಲ್ಲಿ ನಟಿಸಲು ಪವಿತ್ರಾ ಅವರಿಗೆ ಆಫರ್ ಬಂದಿತ್ತು. ಆ ಸಿನಿಮಾಗೆ ಸಹಿ ಮಾಡಲು ಪವಿತ್ರಾ ಜೊತೆ ನಾನು ಬೆಂಗಳೂರಿಗೆ ಬಂದಿದ್ದೆ. ಆ ಬಳಿಕ ಜೆಮಿನಿ ಟಿವಿಯಿಂದ ಆಫರ್ ಬಂತು. ಹೀಗಾಗಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದೆವು ಎಂದು ಪತಿ ಚಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 'ರಾಮಾಯಣ' ದೇಶದ ಅತ್ಯಂತ ದುಬಾರಿ ಚಿತ್ರ.. ಈ ಬಜೆಟ್‌ನಲ್ಲಿ ಕೆಜಿಎಫ್ 2 ಸಿನಿಮಾವನ್ನು 8 ಬಾರಿ ನಿರ್ಮಿಸಬಹುದು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.