69 ವರ್ಷ.. 6 ಸಂಬಂಧ.. ಆದರೂ ಜೀವನದಲ್ಲಿ ಒಬ್ಬಂಟಿ! ಸಿನಿಮಾ ಜಗತ್ತನ್ನು ಆಳಿದ ಈ ತಾರೆ ಯಾರು ಗೊತ್ತೇ?

Rekha Life Story : ಸಿನಿಮಾ ಜಗತ್ತನ್ನು ಆಳಿದ ಈ ನಟಿಗೆ 69 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.

Written by - Chetana Devarmani | Last Updated : May 14, 2024, 11:12 AM IST
  • ಸಿನಿಮಾ ಜಗತ್ತನ್ನು ಆಳಿದ ತಾರೆ
  • 6 ಮಂದಿ ಜೊತೆಗಿನ ಲವ್ ಅಫೇರ್ ಮೂಲಕ ಸಂಚಲನ
  • 69 ವರ್ಷ ವಯಸ್ಸಿನಲ್ಲೂ ಒಂಟಿ ಜೀವನ ಸಾಗಿಸುತ್ತಿರುವ ನಟಿ
69 ವರ್ಷ.. 6 ಸಂಬಂಧ.. ಆದರೂ ಜೀವನದಲ್ಲಿ ಒಬ್ಬಂಟಿ! ಸಿನಿಮಾ ಜಗತ್ತನ್ನು ಆಳಿದ ಈ ತಾರೆ ಯಾರು ಗೊತ್ತೇ? title=
Rekha

Bollywood Actress Rekha: ಈ ನಟಿ ತನ್ನ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಬಾಲ್ಯದಲ್ಲಿ ಅಪ್ಪನ ಪ್ರೀತಿ ಸಿಗಲಿಲ್ಲ. ಅವರೊಬ್ಬ ದೊಡ್ಡ ಸಿನಿಮಾ ತಾರೆ. ಅವರ ಸಿನಿಮಾ ವೃತ್ತಿಜೀವನ ಎಷ್ಟು ಅದ್ಭುತವೋ, ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿತ್ತು. ಈ ನಟಿ 6 ಮಂದಿ ಜೊತೆಗಿನ ಲವ್ ಅಫೇರ್ ಮೂಲಕ ಸುದ್ದಿಯಾಗಿದ್ದರು. ಸಿನಿಮಾ ಜಗತ್ತನ್ನು ಆಳಿದ ಈ ನಟಿಗೆ 69 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಒಂದಾನೊಂದು ಕಾಲದಲ್ಲಿ ಈಕೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರೆ ಯುವಕರು ಸಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದರು. ಬಾಲಿವುಡ್‌ನ ಈ ತಾರೆಯ ಸೌಂದರ್ಯಕ್ಕೆ ಯುವಕರು ಫಿದಾ ಆಗಿದ್ದರು. ಅವರೇ ಬಾಲಿವುಡ್ ನಟಿ ರೇಖಾ. ವಯಸ್ಸು ಎಪ್ಪತ್ತರ ಸಮೀಪವಿದ್ದರೂ ರೇಖಾ ಆ ಸೌಂದರ್ಯವನ್ನು ಇಂದಿಗೂ ಕಾಯ್ದುಕೊಳ್ಳುತ್ತಿದ್ದಾರೆ.
 
ಖ್ಯಾತ ನಟಿ ರೇಖಾ ಜೀವನದಲ್ಲಿ ಬಹಳ ದುಃಖವನ್ನು ಅನುಭವಿಸಿದರು. ಬಹುಶಃ ಸಿನಿಮಾ ಹಿನ್ನಲೆಯಿಂದ ಬಂದರೂ ಯಶಸ್ಸನ್ನು ಪಡೆಯಲು ಕಷ್ಟ ಪಡಬೇಕಾಯಿತು. ತನ್ನ ಸಿನಿಮಾಗಳಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 

ಇದನ್ನೂ ಓದಿ: ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್ 

ಅಮಿತಾಬ್ ಬಚ್ಚನ್‌ಗಿಂತ ಮೊದಲು ನಟಿ ರೇಖಾ ಅವರ ಹೆಸರು ಜೀತೇಂದ್ರ ಜೊತೆ ಸೇರಿಕೊಂಡಿತ್ತು. ಅವರ ಜೊತೆ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಜಿತೇಂದ್ರ ಈಗಾಗಲೇ ಮದುವೆಯಾಗಿದ್ದರಿಂದ ಆ ಸಂಬಂಧಕ್ಕೆ ಬ್ರೇಕ್ ಬಿದ್ದಿತ್ತು. 

ಅದರ ನಂತರ ನಟ ಕಿರಣ್ ಕುಮಾರ್ ಜೊತೆ ರೇಖಾ ಅವರ ಸಂಬಂಧದ ವದಂತಿ ಹಬ್ಬಿತು. ಕಿರಣ್ ವಿನೋದ್ ಮೆಹ್ರಾ ಅವರ ಆತ್ಮೀಯ ಸ್ನೇಹಿತ. 50 ರಿಂದ 80 ರ ದಶಕದವರೆಗೆ ಬಾಲಿವುಡ್ ಅನ್ನು ಆಳಿದ ಖ್ಯಾತ ಖಳನಟ. 

ರೇಖಾ ಬಾಲಿವುಡ್‌ನ ಇನ್ನೊಬ್ಬ ನಾಯಕ ವಿನೋದ್ ಮೆಹ್ರಾ ಜೊತೆಗಿನ ಸಂಬಂಧದ ಬಗ್ಗೆ ಗಾಳಿಸುದ್ದಿಗಳು ಶುರುವಾದವು. ಇವರಿಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಸಂದರ್ಶನದಲ್ಲಿ ರೇಖಾ ವಿನೋದ್ ಮೆಹ್ರಾ ಅವರೊಂದಿಗಿನ ವಿವಾಹದ ಸುದ್ದಿಯನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: Ramayana budget : 'ರಾಮಾಯಣ' ದೇಶದ ಅತ್ಯಂತ ದುಬಾರಿ ಚಿತ್ರ.. ಈ ಬಜೆಟ್‌ನಲ್ಲಿ ಕೆಜಿಎಫ್ 2 ಸಿನಿಮಾವನ್ನು 8 ಬಾರಿ ನಿರ್ಮಿಸಬಹುದು!

ಅಮಿತಾಬ್ ಬಚ್ಚನ್ ಜೊತೆಗಿನ ರೇಖಾ ಸಂಬಂಧ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರೇಖಾ ಅವರು ಅಮಿತಾಬ್ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದರು. ಅಮಿತಾಬ್-ರೇಖಾ ಮದುವೆಯ ವದಂತಿಗಳು ಹಬ್ಬಿದ್ದವು. ಈ ವದಂತಿ ಬಳಿಕ ರೇಖಾ ಅವರೊಂದಿಗೆ ಕೆಲಸ ಮಾಡಲು ಜಯಾ ಬಚ್ಚನ್ ಅವರು ಅಮಿತಾಬ್‌ಗೆ ಬ್ರೇಕ್ ಹಾಕಿದರು ಎಂದು ಬಾಲಿವುಡ್ ಮೂಲಗಳು ಹೇಳುತ್ತವೆ. ಆಗ ಅಮಿತಾಬ್, ರೇಖಾ, ಜಯಾ ಬಚ್ಚನ್ ಅಭಿನಯದ ‘ಸಿಲ್ಸಿಲಾ’ ಸಿನಿಮಾ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. 

ನಂತರ ರೇಖಾ ದೆಹಲಿಯ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು. 'ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ' ಪುಸ್ತಕದ ಪ್ರಕಾರ, ಮುಕೇಶ್ ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಈ ಕಾರಣದಿಂದ ಮುಖೇಶ್‌ ನಿಧನರಾದರು. ಅವರ ಸಂಬಂಧವು ದುರಂತವಾಗಿ ಕೊನೆಗೊಂಡಿತು.

ರೇಖಾ ಅವರ ಹೆಸರು ಮತ್ತೆ ಸಂಜಯ್ ದತ್ ಜೊತೆ ತಳುಕು ಹಾಕಿಕೊಂಡಿತ್ತು. ಆದರೆ ಇಬ್ಬರೂ ನಮ್ಮ ನಡುವೆ ಅಂತಹದ್ದೇನೂ ಇಲ್ಲ ಎಂದು ನಿರಾಕರಿಸಿದರು. ಸಂಜಯ್ ದತ್ ಜೊತೆಗೆ ರೇಖಾ ಈ ಸಂಬಂಧದ ಸುದ್ದಿಯನ್ನು ನಿರಾಕರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News