ಮೂರನೇ ಹೆಂಡತಿಗೂ ಡೈವೋರ್ಸ್ ನೀಡಲು ರೆಡಿಯಾದ ಪವರ್ ಸ್ಟಾರ್ ಪವನ್ ಕಲ್ಯಾಣ್..!
Pawan Kalyan wife : ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸುತ್ತ ಮತ್ತೊಂದು ವಿವಾದ ಭುಗಿಲೆದ್ದಿದೆ. ಮೂರು ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಟಾಲಿವುಡ್ ನಟ ಇದೀಗ ಮೂರನೇ ಪತ್ನಿಗೂ ವಿಚ್ಛೇದನ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಹಿಂದಿನ ಸತ್ಯ ಏನೆಂದು ತಿಳಿಯೋಣ ಬನ್ನಿ..
Pawan Kalyan Divorce news : ತೆಲುಗು ಚಿತ್ರರಂಗದ ಖ್ಯಾತ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಈಗಾಗಲೇ ಮೂರು ಮದುವೆಯಾಗಿ ರಾಜಕೀಯವಾಗಿ ಟೀಕೆ ಎದುರಿಸುತ್ತಿದ್ದಾರೆ. ಇದೀಗ ಮತ್ತೊಂದು ವಿವಾದ ಅವರನ್ನು ಸುತ್ತಿಕೊಂಡಿದೆ. ಸದ್ಯ ಅವರು ತಮ್ಮ ಮೂರನೇ ಪತ್ನಿಗೂ ವಿಚ್ಛೇದನ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು.. ಜನ ಸೇನಾನಿ ಪವನ್ ಕಲ್ಯಾಣ್ ತನ್ನ ಮೊದಲ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿ 2013 ರಲ್ಲಿ ರಷ್ಯಾದ ಮಹಿಳೆ ಅನ್ನಾ ಲೆಜಿನೋವಾ ಅವರನ್ನು ಮೂರನೇ ಪತ್ನಿಯಾಗಿ ವರಿಸಿದರು. ಅವರಿಗಿಗ ಇಬ್ಬರು ಮಕ್ಕಳಿದ್ದಾರೆ. 1997 ರಲ್ಲಿ ವಿಶಾಖಪಟ್ಟಣಂನನ ನಂದಿನಿ ಅವರನ್ನು ವಿವಾಹವಾಗಿದ್ದರು. ಸ್ವಲ್ಪ ಸಮಯದ ನಂತರ ವಿಚ್ಛೇದನ ಪಡೆದರು.
ಇದನ್ನೂ ಓದಿ: 'ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ..'! ತಂದೆ ವಿರುದ್ಧ ಖ್ಯಾತ ನಟಿ ಗಂಭೀರ ಆರೋಪ
ಆ ನಂತರ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ 2012ರಿಂದ ಇಬ್ಬರೂ ದೂರವಾದರು. ಇದೀಗ ಪವನ್ ಕಳೆದ ಕೆಲವು ವರ್ಷಗಳಿಂದ ತಮ್ಮ ಮೂರನೇ ಪತ್ನಿ ಅನ್ನಾ ಲೆಜಿನೋವಾ ಅವರಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಅನ್ನಾ ಪವನ್ ಕಲ್ಯಾಣ್ ನಿಂದ ಬೇರ್ಪಟ್ಟಿದ್ದು ಸಿಂಗಾಪುರದಲ್ಲಿ ನೆಲೆಸಿದ್ದಾಳೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದರಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆಯೋ ಗೊತ್ತಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಸುದ್ದಿ ಹರಿದಾಡುತ್ತಿದೆ. ಅಂತಿಮ ನಿರ್ಧಾರ ತೆಗೆದುಕೊಂಡ ನಂತರ ಪವನ್ ಮೂರನೇ ಪತ್ನಿ ರಷ್ಯಾಗೆ ಹೋಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಕುರಿತು ಅನ್ನಾ ಮತ್ತು ಪವನ್ ಕಲ್ಯಾಣ್ ಅವರು ಯಾವುದೇ ಸ್ಪಷ್ಟತೆ ನೀಡಿಲ್ಲ.
ಇದನ್ನೂ ಓದಿ: ನಟಸಾರ್ವಭೌಮ ಅಣ್ಣಾವ್ರು & ಕರ್ನಾಟಕ ರತ್ನ ಅಪ್ಪು, ರವರ ಅಪರೂಪದ ಫೋಟೊ ವೈರಲ್..!
ಅನ್ನಾ ಲೆಜಿನೋವಾ ಇತ್ತೀಚೆಗೆ ಯಾವುದೇ ಸಮಾರಂಭದಲ್ಲಿ ಪವನ್ ಕಲ್ಯಾಣ್ ಜೊತೆ ಕಾಣಿಸಿಕೊಂಡಿಲ್ಲ, ಇದು ಬೆಂಕಿಗೆ ತುಪ್ಪ ಸುರಿದಂತಿದೆ. ಮೆಗಾ ಕುಟುಂಬದ ಪ್ರಮುಖ ಕಾರ್ಯಕ್ರಮಗಳಿಗೆ ಪವನ್ ಮಾತ್ರ ಹಾಜರಾಗಿದ್ದು, ಅನ್ನಾ ಲೆಜಿನೋವಾ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ನಡೆದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಮತ್ತು ರಾಮ್ ಚರಣ್-ಉಪಾಸನಾ ಮಗಳ ನಾಮಕರಣ ಕಾರ್ಯಕ್ರಮದಲ್ಲಿ ಪವನ್ ಒಂಟಿಯಾಗಿ ಕಾಣಿಸಿಕೊಂಡಿದ್ದರು. ಹಾಗಾಗಿಯೇ ಅವರು ಮೂರನೇ ಪತ್ನಿ ಲೆಜಿನೋವಾ ಅವರಿಗೆ ವಿಚ್ಛೇದನ ನೀಡುತ್ತಿದ್ದಾರೆ ಎಂಬ ಸುದ್ದಿ ಬಲವಾಗಿ ಹಬ್ಬುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.