Pawan Kalyan son : ನಿನ್ನೆಯವರೆಗೂ.. ಪವನ್ ಕಲ್ಯಾಣ್ ಅಭಿಮಾನಿಗಳನ್ನು ಬಿಟ್ಟರೆ.. ತೆಲುಗು ಪ್ರೇಕ್ಷಕರಿಗೆ ಅಕಿರಾ ಬಗ್ಗೆ ಅಷ್ಟು ಕ್ರೇಜ್ ಇರಲಿಲ್ಲ. ಅಕಿರಾ ಅವರನ್ನು ಪವನ್ ಕಲ್ಯಾಣ್ ಅವರ ಮಗ ಎಂದು ಮಾತ್ರ ಕರೆಯಲಾಗುತ್ತದೆ. ಇದಲ್ಲದೆ, ಪವನ್ ಕೂಡ ತಮ್ಮ ಮಗನ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.. ಇದೀಗ ಏಕಾಎಕಿ ಮಗಳನ್ನು ಮೋದಿ ಹತ್ತಿರ ಕರೆದುಕೊಂಡು ಹೋಗಿದ್ದಾರೆ..


COMMERCIAL BREAK
SCROLL TO CONTINUE READING

ಮತ್ತೊಂದೆಡೆ ಪವನ್‌ ಮಾಜಿ ಪತ್ನಿ ರೇಣು ದೇಸಾಯಿ ಕೂಡ ಮಗ ಅಕಿರಾ ಸಿನಿಮಾಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರೊಂದಿಗೆ ಅಕಿರಾ ತಂದೆಯಂತೆ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಇಲ್ಲ.


ಇದನ್ನೂ ಓದಿ:ಬಿಗ್‌ಬಾಸ್‌ ಬ್ಯೂಟಿ ಸಂಗೀತಾ ಶೃಂಗೇರಿ ತಂದೆ ಇವರೇ! ತಾಯಿ ಕೂಡ ಸಖತ್‌ ಫೇಮಸ್!!


ಪವನ್ ಕಲ್ಯಾಣ್‌ ಆಂಧ್ರ ಪ್ರದೇಶ ಚುನಾವಣೆಯಲ್ಲಿ ಗೆದ್ದಾಗಿನಿಂದ ಅಕಿರಾ ಹೆಸರು ಮುಂಚೂಣಿಯಲ್ಲಿದೆ. ಪವರ್‌ ಸ್ಟಾರ್‌ ಸಂಭ್ರಮಾಚರಣೆ ವಿಡಿಯೋದಲ್ಲಿ ಅಕಿರಾ ಕಾಣಿಸಿಕೊಂಡಾಗಿನಿಂದ ಎಲ್ಲೇಡೆ ಪವನ್‌ ಪುತ್ರನದ್ದೆ ಹವಾ ಆಗಿದೆ. ಅಪ್ಪನಂತೆ ಮಗ ಸಖತ್ತಾಗಿದ್ದಾನೆ ಅಂತ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.


ಇತ್ತೀಚಿಗೆ ಚಂದ್ರಬಾಬು ಅವರನ್ನು ಭೇಟಿ ಮಾಡಲು ಹೋದಾಗ ಪವನ್‌ ಅಕಿರಾ ಅವರನ್ನೂ ಕರೆದುಕೊಂಡು ಹೋಗಿದ್ದರು. ಇದೀಗ ಪವನ್ ತಮ್ಮ ಮಗನನ್ನು ಕರೆದುಕೊಂಡು ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಇದನ್ನೂ ಓದಿ:ಮತ್ತೆ SIT ಕಸ್ಟಡಿಗೆ ಪ್ರಜ್ವಲ್ ರೇವಣ್ಣ..! 4 ದಿನದ ವರೆಗೆ ಬ್ಲೂ ಬಾಯ್‌ಗೆ ಡ್ರಿಲ್...!


ಇಷ್ಟು ದಿನ ಮಗನ ಬಗ್ಗೆ ಮೌನವಾಗಿದ್ದ ಪವನ್ ಈಗ ಸರಿಯಾದ ಸಮಯ ತೆಗೆದುಕೊಂಡು ಮಗನಿಗೆ ಒಳ್ಳೆ ಎಲಿವೇಷನ್ ನೀಡುತ್ತಿದ್ದಾರೆ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪವನ್ ಈ ಸಮಯಕ್ಕಾಗಿ ಕಾಯುತ್ತಿದ್ದರು ಅಂತ ಅವರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.