Prajwal revanna case update : ಅತ್ಯಾಚಾರ ಕೇಸ್ ನಲ್ಲಿ ಅರೆಸ್ಟ್ ಆಗಿರೋ ಪ್ರಜ್ವಲ್ ರೇವಣ್ಣಗೆ ಮತ್ತೆ PC ಕಸ್ಟಡಿಯೇ ಗತಿಯಾಗಿದೆ.. ಕಳೆದ 6 ದಿನಗಳಿಂದ SIT ಡ್ರಿಲ್ ಗೆ ವಿಲವಿಲ ಅಂತಿರೋ ಪ್ರಜ್ವಲ್ ಗೆ ಇನ್ನೂ 4 ದಿನ ಅದೇ ಕಸ್ಟಡಿಯಲ್ಲೇ ಇರಬೇಕಿದೆ.
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಕೇಸ್ ನಲ್ಲಿ ಬಂಧಿತನಾಗಿರೋ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತೆ SIT ತೆಕ್ಕೆಗೆ ಬಿದ್ದಿದ್ದಾರೆ. ಕಳೆದ 6 ದಿನಗಳಿಂದ ಅತ್ಯಾಚಾರ ಕೇಸ್ ಸಂಬಂಧ SIT ಅಧಿಕಾರಿಗಳ ವಿಚಾರಣೆ ಎದುರಿಸುತ್ತಿರೋ ಪ್ರಜ್ವಲ್ ಗೆ ಮತ್ತೆ ನಾಲ್ಕು ದಿನ ಎಸ್ ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.. ಇದ್ರಿಂದ ಪ್ರಕರಣದ ತನಿಖೆಗೆ ಮತ್ತಷ್ಟು ಬಲ ಸಿಕ್ಕಿದೆ..
ಇದನ್ನೂ ಓದಿ:ಥಿಯೇಟರ್ನಲ್ಲಿ ಅಲ್ಲ ಡೈರೆಕ್ಟ್ 'ಒಟಿಟಿ'ಗೆ ಎಂಟ್ರಿ ಕೊಡ್ತೀದೆ ಚೈತ್ರ ಆಚಾರ್ ಸಿನಿಮಾ..!
ಯೆಸ್.. ಕಳೆದ ಮೇ.31 ರಂದು ವಿದೇಶದಿಂದ ವಾಪಸ್ ಆಗಿದ್ದ ಪ್ರಜ್ವಲ್ ರನ್ನ ಏರ್ ಪೋರ್ಟ್ ನಲ್ಲೇ ಎಸ್ ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ರು. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ಆರು ದಿನ ಕಸ್ಟಡಿಗೆ ಪಡೆದಿದ್ರು. ಈ ವೇಳೆ ಅತ್ಯಾಚಾರ ಕೇಸ್ ಸಂಬಂಧ ಪ್ರಜ್ವಲ್ ನನ್ನ ಎಸ್ ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ರು.. ಆದ್ರೆ ಪ್ರಜ್ವಲ್ ಅಧಿಕಾರಿಗಳ ವಿಚಾರಣೆಗೆ ಸೂಕ್ತವಾಗಿ ಸ್ಪಂದಿಸಿರ್ಲಿಲ್ಲ..
ಇನ್ನು ಪ್ರಜ್ವಲ್ ವಿದೇಶದಲ್ಲಿದ್ದ ವೇಳೆ ಅತನ ಹಣದ ವಹಿವಾಟು, ಆತನ ಮೊಬೈಲ್ ಬಗ್ಗೆಯೂ ಸರಿಯಾದ ಮಾಹಿತಿ ಕಲೆಹಾಕಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಕೆಲವು ಸಂತ್ರಸ್ತೆಯರು, ಸಾಕ್ಷಿಗಳೊಂದಿಗೆ ಮುಖಾಮುಖಿ ವಿಚಾರಣೆ ಮಾಡಬೇಕಿದ್ಯಂತೆ.. ಇದೇ ಅಂಶಗಳನ್ನ ಮುಂದಿಟ್ಟು ಎಸ್ ಐಟಿ ಪರ ವಕೀಲರು ಪ್ರಜ್ವಲ್ ನನ್ನ ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು.. ಈ ಮನವಿಗೆ ಸ್ಪಂದಿಸಿದ ಕೋರ್ಟ್ ಪ್ರಜ್ವಲ್ ನನ್ನ ಮತ್ತೆ ನಾಲ್ಕು ದಿನ ಕಸ್ಟಡಿಗೆ ನೀಡಿ ಆದೇಶಿಸಿದೆ..
ಇದನ್ನೂ ಓದಿ:ಜೂ. ಎನ್ಟಿಆರ್ ಜೊತೆ ನಟಿಸೋಕೆ ರಶ್ಮಿಕಾ ಕೇಳಿದ ಸಂಭಾವನೆ ಎಷ್ಟು ಗೊತ್ತೆ..? ಕೇಳಿದ್ರೆ ಶಾಕ್ ಆಗ್ತಿರಾ..
ಸದ್ಯ ಕೋರ್ಟ್ ಆದೇಶದಿಂದ ಪ್ರಜ್ವಲ್ ಮತ್ತೆ ಎಸ್ ಐಟಿ ಸುಪರ್ದಿಗೆ ಬಂದಿದ್ದಾರೆ.. ಇದ್ರಿಂದ ಎಸ್ ಐಟಿ ತನಿಖೆಗೆ ಮತ್ತಷ್ಟು ಸಹಕಾರಿಯಾಗುತ್ತಾ. ಕಳೆದ ಏಳು ದಿನಗಳಿಂದ SIT ಅಧಿಕಾರಿಗಳ ಮುಂದೆ ವಿಚಾರಣೆಯಲ್ಲಿ ಬೇಕಾಬಿಟ್ಟಿ ಉತ್ತರ ನೀಡುತ್ತಿರುವ ಪ್ರಜ್ವಲ್. ಎಸ್ ಐ ಟಿ ಯಾವ ರೀತಿ ಬಿಸಿ ಮಾಡಿಸುತ್ತೆ ಅಂತ ನೋಡಬೇಕಿದೆ ಹಾಸನ ಹಾಗೂ ಹೊಳೆನರಸೀಪುರ ಸ್ಥಳ ಮಹಜರ್ ಮಾಡಬೇಕಿದೆ. ಪ್ರಜ್ವಲ್ ಉಪಯೋಗಿಸುತ್ತಿದ್ದ ಮೊಬೈಲನ್ನು ಪ್ರಜ್ವಲ್ PA ಇಂದ ವಶಕ್ಕೆ ಪಡೆದು FSL ಕಳಿಸೋ ಸಾಧ್ಯತೆ ಇದೆ ಆದರೆ ತಂದೇ ರೇವಣ್ಣ ಕೊಡುತ್ತಿದ್ದಂತಹ ಉತ್ತರವನ್ನೇ. ಪ್ರಜ್ವಲ್ ಕೊಡುತ್ತಿದ್ದಾನೇ ನನಗೇನು ಗೊತ್ತಿಲ್ಲ ಈ ವಿಡಿಯೋಗು ನನಗು ಸಂಬಂಧವಿಲ್ಲ ಅಂತ. ಏಳು ದಿನಗಳಿಂದ SIT ಅಧಿಕಾರಿಗಳ ವಿಚಾರಣೆಯಲ್ಲಿ ಹೇಳುತ್ತಿದ್ದಾನೆ...
ಸತ್ಯ ವಿದೇಶದಲ್ಲಿ ಹಣ ವರ್ಗಾವಣೆ ಹೇಗೆ ನಡಿತು. ತನ್ನ ಮೊದಲ ಮೊಬೈಲ್ ಅನ್ನು ವಿದೇಶದಲ್ಲಿ ಹಾಳು ಮಾಡಿದ್ದಾನ. ಪ್ರಜ್ವಲ್ ಬಳಿ ಮೊಬೈಲ್ ಇಲ್ಲ ಅಂದ್ರೆ ಯಾವ ಮೊಬೈಲಿಂದ ವಿಡಿಯೋ ರೆಕಾರ್ಡ್ ಆಯ್ತು. ಜೊತೆಗೆ ಪ್ರಜ್ವಲ್ ವಾಟ್ಸಾಪ್ ಹಿಸ್ಟರಿ ಅನ್ನು ಎಸ್ಐಟಿ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ ನಾಲ್ಕು ದಿನಗಳ ಕಾಲ ಪ್ರಜ್ವಲ್SIT ಯಲ್ಲಿ ಯಾವ ಉತ್ತರ ನೀಡುತ್ತಾನೆ ಅನ್ನೋದನ್ನ ಕಾದು ನೋಡ್ಬೇಕು...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.