Pawan Kalyan Allu arjun : ನಟ, ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಅವರು ಇತ್ತೀಚಿಗೆ ರಾಜ್ಯ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಅವರು, ನೀಡಿದ ಹೇಳಿಕೆ ಅಲ್ಲು ಅರ್ಜುನ್‌ ನಟನೆಯ ಪುಷ್ಪ ಕಥೆಯನ್ನ ಟೀಕೆಸಿದೆ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ. ಅಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ..


COMMERCIAL BREAK
SCROLL TO CONTINUE READING

ಪತ್ರಿಕಾಗೋಷ್ಠಿಯಲ್ಲಿ ಪವನ್‌ ಕಲ್ಯಾಣ್ ಅವರು 1973 ರಲ್ಲಿ ಬಿಡುಗಡೆಯಾದ ಡಾ. ರಾಜ್‌ಕುಮಾರ್‌ ನಟನೆಯ ಗಂಧದ ಗುಡಿ ಸಿನಿಮಾವನ್ನು ನೆನಪಿಸಿಕೊಂಡರು. ಈ ಸಿನಿಮಾದ ಮೂಲಕ ಅಣ್ಣಾವ್ರು ಕಾಡಿನ ರಕ್ಷಣೆಯ ಮಹತ್ವ ಸಾರಿದ್ದಾರೆ.. ಚಿತ್ರದಲ್ಲಿ ಮೀಸಲು ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಂಡು, ಕಳ್ಳ ಬೇಟೆಗಾರರು ಮತ್ತು ಕಳ್ಳಸಾಗಾಣಿಕೆದಾರರಿಂದ ಕಾಡುಗಳನ್ನು ರಕ್ಷಿಸಿದ ಒಬ್ಬ ವೀರನ ಪಾತ್ರ ಮಾಡಿದ್ದರು. ಆದರೆ ಇತ್ತೀಚಿನ ನಾಯಕರನ್ನು ಕಾಡು ನಾಶ ಮಾಡುವ ವ್ಯಕ್ತಿಯಂತೆ ಚಿತ್ರಿಸಲಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು..


ಇದನ್ನೂ ಓದಿ:ಮದುವೆಗೆ ಕಾರಣರಾದವರೇ ಗೈರು..! ಜೈಲಿಗೆ ಹೋಗಿ ದರ್ಶನ್‌ ಆಶೀರ್ವಾದ ಪಡೆಯುತ್ತಾರಾ ತರುಣ್‌-ಸೋನಲ್‌..?


ಸಿನಿಮೀಯ ನಿರೂಪಣೆಯಲ್ಲಿನ ಈ ಬದಲಾವಣೆಯ ವಿರು‍ದ್ಧ ನಟ-ರಾಜಕಾರಣಿ ಪವನ್‌ ಕಲ್ಯಾಣ್‌ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ನಾನು ಚಲನಚಿತ್ರೋದ್ಯಮದ ಭಾಗವಾಗಿದ್ದೇನೆ. ಕಥೆ ಹೇಳುವ ಪ್ರಸ್ತುತ ಶೈಲಿಯ ವಿರುದ್ಧ ಹೋರಾಡುತ್ತೇನೆ. ನಾವು ಜನರಿಗೆ ಸರಿಯಾದ ಸಂದೇಶ ನೀಡುತ್ತಿದ್ದೇವೇಯೇ..? ಎಂದು ಡಿಸಿಎಂ ಆಶ್ಚರ್ಯ ಪಡಿಸಿದರು. ಅಲ್ಲದೆ, "ನನಗೆ ರೀಲ್ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಾಗಲಿಲ್ಲ, ನಿಜ ಜೀವನದಲ್ಲಿ ಸಾಧಿಸಲು ನಾನು ಆಶಿಸುತ್ತೇನೆ." ಎಂದು ತಮ್ಮ ಗುರಿಯನ್ನ ಬಿಚ್ಚಿಟ್ಟರು..


ಇನ್ನು ಪವನ್‌ ಕಲ್ಯಾಣ್ ಅವರ ಹೇಳಿಕೆಯನ್ನ ಕೆಲವು ನೆಟ್ಟಿಗರು ಪುಷ್ಪ: ದಿ ರೈಸ್‌ನಲ್ಲಿ ಅಲ್ಲು ಅರ್ಜುನ್‌ನ ಪಾತ್ರಕ್ಕೆ ಲಿಂಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ಅವರು ಪುಷ್ಪಾ ರಾಜ್ ಎಂಬ ರಕ್ತ ಚಂದನದ ಕಳ್ಳಸಾಗಾಣಿಕೆದಾರರಾಗಿ ನಟಿಸಿದ್ದಾರೆ.. ಪವನ್ ಕಲ್ಯಾಣ್ ಇದನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಾರೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ.. 


ಇದನ್ನೂ ಓದಿ: ಶಿವಣ್ಣ ನಟನೆಯ ʻಭೈರತಿ ರಣಗಲ್ʼ ಟೈಟಲ್‌ ಸಾಂಗ್‌ಗೆ ಸಿನಿಪ್ರಿಯರು ಫಿದಾ


ಕಲ್ಯಾಣ್ ಬೆಂಬಲಿಗರು ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯಾವುದೇ ನಿರ್ದಿಷ್ಟ ಚಲನಚಿತ್ರ ಅಥವಾ ವ್ಯಕ್ತಿಯನ್ನು ಗುರಿಯಾಗಿಸುವ ಬದಲು ವಿಶಾಲವಾದ ಸಾಂಸ್ಕೃತಿಕ ಬದಲಾವಣೆಯನ್ನು ಉದ್ದೇಶಿಸಿ ನಟ ಈ ಹೇಳಿಕೆ ನೀಡಿದ್ದಾರೆ ಎಂದು ವಿವರಿಸುತ್ತಿದ್ದಾರೆ.. ಅಲ್ಲದೆ, "ಪವನ್ ಕಲ್ಯಾಣ್ ಅವರ ಹೇಳಿಕೆಗಳು ಬದಲಾಗುತ್ತಿರುವ ನಾಯಕರ ಚಿತ್ರಣದ ಬಗ್ಗೆ, ವೈಯಕ್ತಿಕವಾಗಿ ಅಲ್ಲು ಅರ್ಜುನ್ ಬಗ್ಗೆ ಅಲ್ಲ" ಎಂದು ಅಭಿಮಾನಿಯೊಬ್ಬರು ಹೇಳಿಕೆ ನೀಡಿ ಗಮನಸೆಳೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.