ಇಂಟರ್‌ನೆಟ್‌ನಲ್ಲಿ ಹಾಟ್ ಟಾಪಿಕ್ ಆದ ʼಪವನ್ ಕಲ್ಯಾಣ್ ಶೂʼ : ಬೂಟಿನ ರೇಟ್ ಎಷ್ಟು ಗೋತ್ತಾ..!
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಸಿನಿಮಾದ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಸಿನಿಮಾ ಶೂಟಿಂಗ್‌ಗಾಗಿ ಚಿತ್ರತಂಡ ಸನ್ನದ್ಧವಾಗಿದ್ದು, ತಯಾರಿಯಲ್ಲಿರುವ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದೆ. ಪವನ್ ಕಲ್ಯಾಣ್ ಹೊಸ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ, ಹೊಸ ಲುಕ್‌ನ್ನೇ ಫೈನಲ್ ಮಾಡಿ ಎಂದು ಹರೀಶ್ ಶಂಕರ್‌ಗೆ ಪವರ್ ಸ್ಟಾರ್ ಫ್ಯಾನ್ಸ್ ಟ್ವೀಟ್, ಟ್ಯಾಗ್‌ಗಳನ್ನು ಮಾಡಿ ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು : ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಸಿನಿಮಾದ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಸಿನಿಮಾ ಶೂಟಿಂಗ್‌ಗಾಗಿ ಚಿತ್ರತಂಡ ಸನ್ನದ್ಧವಾಗಿದ್ದು, ತಯಾರಿಯಲ್ಲಿರುವ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದೆ. ಪವನ್ ಕಲ್ಯಾಣ್ ಹೊಸ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ, ಹೊಸ ಲುಕ್‌ನ್ನೇ ಫೈನಲ್ ಮಾಡಿ ಎಂದು ಹರೀಶ್ ಶಂಕರ್‌ಗೆ ಪವರ್ ಸ್ಟಾರ್ ಫ್ಯಾನ್ಸ್ ಟ್ವೀಟ್, ಟ್ಯಾಗ್‌ಗಳನ್ನು ಮಾಡಿ ಒತ್ತಾಯಿಸುತ್ತಿದ್ದಾರೆ.
ಒಂದಷ್ಟು ಜನ ಪವನ್ ಕಲ್ಯಾಣ್ ನೋಡಿ ಖುಷಿಯಾಗಿದ್ದರೆ. ಇನ್ನೊಂದಿಷ್ಟು ಜನರ ಕಣ್ಣು ಮಾತ್ರ ಪವನ್ ಕಲ್ಯಾಣ್ ಬೂಟ್‌ಗಳ ಮೇಲೆ ಬಿದ್ದಿದ್ದು, ಬೂಟಿನ ರೇಟ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಒಂದಿಷ್ಟು ನೆಟಿಜನ್ ಪವನ್ ಕಲ್ಯಾಣ್ ಶೂ ರೇಟ್ ಹತ್ತು ಲಕ್ಷ ಎಂದು ಹೇಳುತ್ತಿದ್ದಾರೆ. ಕೆಲವರು ಒಂದುವರೆ ಲಕ್ಷ ರೂ. ಎಂದು ವಾದಿಸುತ್ತಿದ್ದಾರೆ. ಮತ್ತೊಬ್ಬರು ಹತ್ತು ಸಾವಿರ ಮಾತ್ರ ಎಂದು ಹೇಳುತ್ತಾರೆ. ಈ ರೀತಿಯಾಗಿ ಪವನ್ ಕಲ್ಯಾಣ್ ಶೂ ಈಗ ಇಂಟರ್‌ನೆಟ್‌ನಲ್ಲಿ ಹಾಟ್ ಟಾಪಿಕ್ ಆಗುತ್ತಿದೆ. ಪವರ್ ಸ್ಟಾರ್ ಮಾತ್ರ ಫುಲ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಆನಂದಕ್ಕೆ ಕಾರಣರಾಗಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ ಮನೆಗೆ ಪುಟ್ಟ ಲಕ್ಷಿ ಆಗಮನ : ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರೇರಣಾ..!
ಇನ್ನು ಶೀಘ್ರದಲ್ಲೇ ಹರಿಹರ ವೀರಮಲ್ಲು ಚಿತ್ರದ ಶೂಟಿಂಗ್ ಪ್ರಾರಂಭಿಸಲಾಗುತ್ತದೆ. ಪವನ್ ಕಲ್ಯಾಣ್ ಅವರಿಗೆ ಜೊಡಿಯಾಗಿ ಸಿನಿಮಾದಲ್ಲಿ ನಿಧಿ ಅಗರ್ವಾಲ್ ನಟಿಸಿದ್ದಾರೆ. ಅಲ್ಲದೆ, ಹರಿ ಹರ ವೀರಮಲ್ಲು ಸಿನಿಮಾದ ಮೇಲೆ ವಿವಿಧ ಗ್ಯಾಸಿಪ್ಸ್ ಕೇಳಿಬರುತ್ತಿವೆ. ಇನ್ನು ಸಿನಿಮಾ ಶೂಟಿಂಗ್ ಸುಮಾರು 70 ಶೇಕಡಾ ಮುಗಿದಿದ್ದು, ಬರುವ ವರ್ಷದ ಸಮ್ಮರ್‌ನಲ್ಲಿ ಚಿತ್ರ ಪ್ರೇಕ್ಷಕರು ಮುಂದೆ ಬರಲಿದೆ ಎಂದು ನಿರ್ಮಾಪಕ ಎಂ ರತ್ನಂ ಹೇಳಿದ್ದಾರೆ.
ಒಟ್ಟಾರೆಯಾಗಿ ಹರಿ ಹರ ವೀರಮಲ್ಲು ಸಿನಿಮಾ ಸಿನಿಮಾ ಬಿಡುಗಡೆಗೂ ಮುನ್ನ ಟ್ರೆಂಡಿಂಗ್‌ನಲ್ಲಿದ್ದು, ಪವನ್ ಕಲ್ಯಾಣ್ ಶೂ ಮ್ಯಾಟರ್ ರೇಟ್ ಸದ್ದು ಮಾಡುತ್ತಿದೆ. ಇತಿಹಾಸ ಆಧಾರಿತ ವೀರಮಲ್ಲು ಫಸ್ಟ್‌ಲುಕ್ ಬಿಡುಗಡೆಯಾಗಿದು, ಪವನ್ ಹೊಸ ಅವತಾರ ಫ್ಯಾನ್ಸ್ ಕುತೂಹಲಕ್ಕೆ ಕಾರಣವಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.