Ustaad bhagat singh : ʼಉಸ್ತಾದ್ ಭಗತ್ ಸಿಂಗ್ʼ ಲುಕ್‌ನಲ್ಲಿ ಪವನ್ ಕಲ್ಯಾಣ್ : ಸಖತ್ತಾಗಿದೆ ಚಿತ್ರದ ಫಸ್ಟ್ ಲುಕ್..!
Pawan kalyan ustaad bhagat singh movie : ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಿರ್ದೇಶಕ ಹರೀಶ್ ಶಂಕರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ಬ್ಲಾಕ್ಬಸ್ಟರ್ ಗಬ್ಬರ್ ಸಿಂಗ್ ಸಿನಿಮಾ ಎಷ್ಟು ಸೂಪರ್ ಹಿಟ್ ಆಗಿತ್ತು ಅಂತ ಎಲ್ಲರಿಗೂ ತಿಳಿದಿದೆ. ಇದೀಗ ಇಬ್ಬರು ಉಸ್ತಾದ್ ಭಗತ್ ಸಿಂಗ್ ಸಿನಿಮಾದ ಮೂಲಕ ಮತ್ತೇ ಒಂದಾಗಿದ್ದಾರೆ.
Ustaad bhagat singh : ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಹರೀಶ್ ಶಂಕರ್ ನಿರ್ದೇಶನದ ಉಸ್ತಾದ್ ಭಗತ್ ಸಿಂಗ್ ಚಿತ್ರದ ಫಸ್ಟ್ ಲುಕ್ ಗ್ಲಿಂಪ್ಸ್ ರಿಲೀಸ್ ಅಗಿದೆ. ಬ್ಲಾಕ್ಬಸ್ಟರ್ ʼಗಬ್ಬರ್ ಸಿಂಗ್ʼ ಸಿನಿಮಾದ ನಂತರ ಇಬ್ಬರು ಒಂದಾಗಿ ನಟಿಸುತ್ತಿರುವ ಸಿನಿಮಾದ ಮೇಲೆ ಕ್ಯೂರಿಯಾಸಿಟಿ ಹೆಚ್ಚಾಗಿದ್ದು, ಉಸ್ತಾದ್ ಭಗತ್ ಸಿಂಗ್ ಪೊಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಹೌದು.. ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರ ತೆಲುಗಿನಲ್ಲಿ ಗಬ್ಬರ್ ಸಿಂಗ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಬಂಡ್ಲ ಗಣೇಶ್ ನಿರ್ಮಾಣದ ಈ ಚಿತ್ರ ಹಲವು ದಾಖಲೆಗಳನ್ನು ಮುರಿದಿತ್ತು. ಸದ್ಯ ಹರೀಶ್ ಶಂಕರ್ ಮತ್ತು ಪವನ್ ಕಲ್ಯಾಣ್ ಮತ್ತೆ ಒಂದಾಗಿದ್ದು, ಮೊದಲಿಗೆ ಇಬ್ಬರೂ ಒಟ್ಟಿಗೆ ಸೇರಿ ʼಭಾವದಿಯುಡು ಭಗತ್ ಸಿಂಗ್ʼ ಎಂಬ ಸಿನಿಮಾ ಮಾಡಲು ಮುಂದಾಗಿದ್ದರು. ಈ ಶೀರ್ಷಿಕೆ ಅಧಿಕೃತವಾಗಿ ಘೋಷಣೆಯಾಗಿತ್ತು. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಡಿಯಲ್ಲಿ ಈ ಚಿತ್ರ ತಯಾರಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಚಿತ್ರ ರದ್ದುಗೊಂಡಿತು. ಸದ್ಯ ಉಸ್ತಾದ್ ಭಗತ್ ಸಿಂಗ್ ಎಂಬ ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಇದನ್ನೂ ಓದಿ: ಮೇ 13 ರಂದು ಮತ ಎಣಿಕೆ ಹಿನ್ನೆಲೆ ಬೆಂಗಳೂರಿನಾದ್ಯಂತ 144 ಸೆಕ್ಷನ್ ಜಾರಿ..!
ತಮಿಳಿನಲ್ಲಿ ಸೂಪರ್ ಹಿಟ್ ಆಗಿರುವ ತೇರಿ ಸಿನಿಮಾ ತೆಲುಗಿನ ನೇಟಿವಿಟಿಗೆ ತಕ್ಕಂತೆ ಹಲವು ಬದಲಾವಣೆಗಳನ್ನು ಮಾಡಿ ಹೊಸ ಕಥೆಯನ್ನು ಸೃಷ್ಟಿಸಿರುವ ಹರೀಶ್ ಶಂಕರ್ ಇದೀಗ ಸಿನಿಮಾದ ಫಸ್ಟ್ ಲುಕ್ ಗ್ಲಿಂಪ್ಸಸ್ ಬಿಡುಗಡೆ ಮಾಡಿದ್ದಾರೆ. ಈಗಾಗೇ ಥಿಯೇಟರ್‌ಗಳಲ್ಲಿ ಈ ಸಿನಿಮಾದ ಫಸ್ಟ್ ಲುಕ್ ಗ್ಲಿಂಪ್ಸ್‌ಗಳನ್ನು ಪ್ರದರ್ಶನ ಮಾಡಲಾಗಿದ್ದು, ಪವರ್ ಸ್ಟಾರ್ ಲುಕ್ ಹಾಗೂ ಡೈಲಾಗ್‌ಗೆ ಪ್ರೇಕ್ಷಕರು ಸಿಳ್ಳೆ ಹೊಡೆದು ಸಂಭ್ರಮಿಸಿದರು.
ಇನ್ನು ಟೀಸರ್‌ನಲ್ಲಿ ಭಗವದ್ಗೀತೆಯ ಪದ್ಯಗಳಿಂದ ವಿಡಿಯೋ ಪ್ರಾರಂಭವಾಗುತ್ತದೆ. ಅನ್ಯಾಯವನ್ನು ವಿರೋಧಿಸಲು ಅಗತ್ಯವಿದ್ದಾಗ ಪ್ರತಿ ಯುಗದಲ್ಲೂ ಅವತಾರ ಪುರುಷ ಹುಟ್ಟುತ್ತಾನೆ ಎಂಬ ಡೈಲಾಗ್ ಬರುತ್ತಿದ್ದಂತೆ ಪವನ್ ಕಲ್ಯಾಣ್ ಎಂಟ್ರಿ ಆಗುತ್ತದೆ. ಖಡಕ್ ಪೊಲೀಸ್ ಅಧಿಕಾರಿಯ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪವನ್ ಕಲ್ಯಾಣ್ ಭಗತ್ ಎಂಬ ಪೊಲೀಸ್ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಪವನ್ ಕಲ್ಯಾಣ್ ಬಿಟ್ಟೆ ನಾಯಕಿ ಶ್ರೀಲೀಲಾ ಕಾಣಿಸಿಕೊಂಡಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ