ಪೆಂಟಗನ್... ಟೈಟಲ್ಲೇ ಒಂದೊಳ್ಳೆ ಕಿಕ್ಕು.ಹಾಡುಗಳು ಮತ್ತು ಟೀಸರ್​ ಮೂಲಕ ‘ಪೆಂಟಗನ್​’ ಸಿನಿಮಾ ದೊಡ್ಡಮಟ್ಟದಲ್ಲಿ ಜನರಿಗೆ ಹತ್ತಿರವಾಗುತ್ತಿದೆ. ಒಂದೇ ಸಿನಿಮಾದಲ್ಲಿ ಐದು ಹೀರೋ, ಐದು ಸ್ಟೋರಿಗಳನ್ನ ನೋಡಬೋದು ಅಂದ್ರೆ ಲೆಕ್ಕಾ ಹಾಕಿ. ಹೆಂಗಿರ್ಬೋದು ಪೆಂಟಗನ್ ಸಿನಿಮಾ ಅಂತ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೋಡ್ ಟ್ಯಾಕ್ಸ್ ಕಟ್ಟದೆ 4 ಲಕ್ಷಕ್ಕೆ ಮಾರುತಿ ಸ್ವಿಫ್ಟ್ ಮನೆಗೆ ಕೊಂಡೊಯ್ಯಿರಿ!


ಹಲವು ಪ್ರಥಮಗಳಿಗೆ ಈ ಸಿನಿಮಾ ಸಾಕ್ಷಿಯಾಗುತ್ತಿದೆ ಪೆಂಟಗನ್. ಏಪ್ರಿಲ್ 7 ಕ್ಕೆ ಭರ್ಜರಿಯಾಗಿ ಈ ಸಿನಿಮಾ ತೆರೆ ಮೇಲೆ ಕಮಾಲ್ ಮಾಡಲು ಬರುತ್ತಿದೆ. ಈಗ ಟೀಸರ್ ನೋಡಿದ್ದಾಯ್ತು,ಹಾಡುಗಳನ್ನ ನೋಡಿದ್ದಾಯ್ತು. ಟ್ರೇಲರ್ ಯಾವಾಗ ಸ್ವಾಮಿ ಅನ್ನೋ ಪ್ರಶ್ನೆ ಫ್ಯಾನ್ಸ್ ಗಳಿಗೆ ಇತ್ತು.ಅದಕ್ಕೂ ಈಗ ಉತ್ತರ ಸಿಕ್ಕಿದೆ.ಯುಗಾದಿ ಹಬ್ಬವನ್ನ ಖುಷಿಖುಷಿಯಾಗಿ ಸೆಲೆಬ್ರೇಟ್ ಮಾಡಿ ನೆಕ್ಸ್ಟ್ ಡೇ ಅಂದ್ರೆ ಏಪ್ರಿಲ್ 23 ರಂದು ಸಂಜೆ ಭರ್ಜರಿ ಬಾಡೂಟದ ಜೊತೆ ಪೆಂಟಗನ್ ಸಿನಿಮಾದ ಟ್ರೇಲರ್ ನೋಡೋ ಸದವಕಾಶ ನಿಮಗೆ ಸಿಗುತ್ತಿದೆ.


ಇದನ್ನೂ ಓದಿ: Arecanut price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೀಗಿದೆ ನೋಡಿ


ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ.  ಜೊತೆಗೆ ಗುರು ದೇಶಪಾಂಡೆ ಇಲ್ಲಿ ಹಣ ಹೂಡಿದ್ದಾರೆ.ಪ್ರಕಾಶ್ ಬೆಳವಾಡಿ, ಕಿಶೋರ್ ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.