Maruti Swift: ರೋಡ್ ಟ್ಯಾಕ್ಸ್ ಕಟ್ಟದೆ 4 ಲಕ್ಷಕ್ಕೆ ಮಾರುತಿ ಸ್ವಿಫ್ಟ್ ಮನೆಗೆ ಕೊಂಡೊಯ್ಯಿರಿ!

Second Hand Maruti Swift Car: ನಿಮ್ಮ ಬಜೆಟ್ ಕಮ್ಮಿ ಇದ್ದರೆ ಹೊಸ ಕಾರು ಖರೀದಿಸುವ ಬದಲು ಹಳೆಯ ಕಾರನ್ನು ಖರೀದಿಸಬಹುದು. ಉತ್ತಮ ಸ್ಥಿತಿಯಲ್ಲಿರುವ first owner ಕಾರುಗಳು ಕೆಲವೇ ಸಾವಿರ ಕಿಮೀ ಓಡಿರುತ್ತವೆ. ಕಡಿಮೆ ಬೆಲೆಗೆ ನೀವು ಇವುಗಳನ್ನು ಖರೀದಿಸಬಹುದು.

Written by - Puttaraj K Alur | Last Updated : Mar 20, 2023, 04:59 PM IST
  • ಅನೇಕ ಹಳೆಯ ಮಾರುತಿ ಸ್ವಿಫ್ಟ್ ಕಾರುಗಳು ಮಾರಾಟಕ್ಕೆ ಲಭ್ಯವಿವೆ
  • ಉತ್ತಮ ಸ್ಥಿತಿಯಲ್ಲಿರುವ 2nd Hand ಖರೀದಿಸಲು ಉತ್ತಮ ಅವಕಾಶ
  • ಈ ಕಾರುಗಳಿಗೆ ಈಗಾಗಲೇ ನಂಬರ್ ಪ್ಲೇಟ್ ಇದ್ದು, ರಸ್ತೆ ತೆರಿಗೆ ಕಟ್ಟಬೇಕಿಲ್ಲ
Maruti Swift: ರೋಡ್ ಟ್ಯಾಕ್ಸ್ ಕಟ್ಟದೆ 4 ಲಕ್ಷಕ್ಕೆ ಮಾರುತಿ ಸ್ವಿಫ್ಟ್ ಮನೆಗೆ ಕೊಂಡೊಯ್ಯಿರಿ!    title=
ಮಾರುತಿ ಸ್ವಿಫ್ಟ್ ಕಾರು

ನವದೆಹಲಿ: ಫೆಬ್ರವರಿ 2023ರಲ್ಲಿ ಮಾರುತಿ ಸ್ವಿಫ್ಟ್ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು. ಇದು ಜನರಿಗೆ ಎಷ್ಟು ಇಷ್ಟವಾಗಿದೆ ಅಂತಾ ನೀವು ಅಂದಾಜಿಸಬಹುದು. ನೀವು ಸಹ ಮಾರುತಿ ಸ್ವಿಫ್ಟ್ ಕಾರು ಖರೀದಿಸಬಯಸಿದರೆ ಇಲ್ಲಿದೆ ಉತ್ತಮ ಅವಕಾಶ. ಅತ್ಯಂತ ಕಡಿಮೆ ಬೆಲೆಗೆ ಹೊಸ ಕಾರಿನ ಬದಲು ನೀವು ಉತ್ತಮ ಕಂಡೀಶನ್‍ನಲ್ಲಿರುವ ಹಳೆಯ ಮಾರುತಿ ಸ್ವಿಫ್ಟ್ ಖರೀದಿಸಬಹುದು.  

ಮಾರಾಟಕ್ಕೆ ಲಭ್ಯವಿರುವ ಕೆಲವು ಹಳೆಯ ಮಾರುತಿ ಸ್ವಿಫ್ಟ್ ಕಾರುಗಳ ಬಗ್ಗೆ ನಾವು ನಿಮಗೆ ಮಾಹಿತಿ ತಂದಿದ್ದೇವೆ. ಇವುಗಳನ್ನು ನೀವು ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ ಮೂಲಕ ಖರೀದಸಬಹುದು. ಈ ಹಳೆಯ ಕಾರುಗಳ ರಸ್ತೆ ತೆರಿಗೆಯನ್ನು ಈಗಾಗಲೇ ಪಾವತಿಸಲಾಗಿದೆ ಮತ್ತು ನಂಬರ್ ಪ್ಲೇಟ್‌ನಲ್ಲಿ ಲಭ್ಯವಿದೆ. ಹೀಗಾಗಿ ಈ ಕಾರು ಖರೀದಿಸಲು ನೀವು ಹೆಚ್ಚುವರಿ ರಸ್ತೆ ತೆರಿಗೆ ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ: ಪ್ಯಾನ್‌ ಕಾರ್ಡ್‌ದಾರರೇ ಗಮನಿಸಿ ಮಾರ್ಚ್ 31ರವರೆಗೆ ಈ ಕೆಲಸ ಮಾಡದಿದ್ದರೆ ಭಾರೀ ನಷ್ಟ

2020ರ ನೋಂದಣಿಯೊಂದಿಗೆ ಮಾರುತಿ ಸ್ವಿಫ್ಟ್ VDI ಬೆಲೆ 4.99 ಲಕ್ಷ ರೂ. ಇದೆ. ಫರಿದಾಬಾದ್‌ನಲ್ಲಿ ಈ ಕಾರು ಮಾರಾಟಕ್ಕಿದೆ. ಈ first owner ಪೆಟ್ರೋಲ್ ಎಂಜಿನ್ ಕಾರು ಕೇವಲ 12,417 ಕಿಮೀ ಓಡಿದೆ.

2020ರ ನೋಂದಣಿಯಿರುವ ಮತ್ತೊಂದು ಮಾರುತಿ ಸ್ವಿಫ್ಟ್ LXI ಬೆಲೆ 5.25 ಲಕ್ಷ ರೂ. ಇದೆ. ಈ ಕಾರು ಗುನಾದಲ್ಲಿ ಮಾರಾಟಕ್ಕಿದೆ. ಈ first owner ಪೆಟ್ರೋಲ್ ಎಂಜಿನ್ ಕಾರು ಒಟ್ಟು 13,7712 ಕಿಮೀ ಕ್ರಮಿಸಿದೆ.

ಇಲ್ಲಿ ಪಟ್ಟಿ ಮಾಡಲಾದ ಮತ್ತೊಂದು ಮಾರುತಿ ಸ್ವಿಫ್ಟ್ LXIನ ಬೆಲೆ 5.30 ಲಕ್ಷ ರೂ. ಇದೆ. ಇದರ ನೋಂದಣಿ ಕೂಡ 2020ನೇ ವರ್ಷದಲ್ಲಿ ಆಗಿದ್ದು, ಇದು ಮೀರತ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಪೆಟ್ರೋಲ್ ಎಂಜಿನ್ ಕಾರು 38,450ಕಿಮೀ ಓಡಿದೆ.

ಇದನ್ನೂ ಓದಿ: ಈ ಸೇವೆಯನ್ನು ಉಚಿತವಾಗಿ ನೀಡುತ್ತಿದೆ ರೈಲ್ವೆ! ಪ್ರತಿ ಪ್ರಯಾಣಿಕರೂ ಪಡೆಯಬಹುದು ಇದರ ಲಾಭ

2019ರ ಮಾರುತಿ ಸ್ವಿಫ್ಟ್ VDIನ ಬೆಲೆ 5.80 ಲಕ್ಷ ರೂ. ಇದ್ದು, ಜೋಧಪುರದಲ್ಲಿ ಮಾರಾಟಕ್ಕೆ ಲಭ್ಯವಿದೆ. 2nd ownerನ ಈ ಕಾರು ಒಟ್ಟು 38,490ಕಿಮೀ ಕ್ರಮಿಸಿದೆ. ಇದು ಡೀಸೆಲ್ ಎಂಜಿನ್ ಹೊಂದಿದೆ. ನಿಮಗೆ ಯಾವ ಕಾರು ಇಷ್ಟವೋ ವೆಬ್‍ಸೈಟ್‍ಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಂಡು ಇಷ್ಟವಾದರೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News