PM Modi wish RRR Team : ʼನಾಟು ನಾಟುʼ ಎಂಬ ಹಿಟ್ ಟ್ರ್ಯಾಕ್‌ಗಾಗಿ ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ಸಿನಿರಂಗದಲ್ಲಿ ಈ ಪ್ರಶಸ್ತಿಯನ್ನು ಪಡೆದ ಏಕೈಕ ಸಿನಿಮಾ ಆಗಿ ಆರ್‌ಆರ್‌ಆರ್‌ ಹೊರಹೊಮ್ಮಿದೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ RRR ಚಿತ್ರತಂಡಕ್ಕೆ ಶಭಕೋರಿದ್ದಾರೆ. ಅಲ್ಲದೆ, ಇದು ಬಹಳ ವಿಶೇಷವಾದ ಸಾಧನೆ ಮತ್ತು ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನಿಗೂ ತುಂಬಾ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ತಮ್ಮ ಟ್ಟಿಟರ್‌ ಖಾತೆಯಲ್ಲಿ ರಾಜಮೌಳಿ ಅವರ ವಿಡಿಯೋ ಹಂಚಿಕೊಂಡಿರುವ ಮೋದಿ, ಇದು ಒಂದು ವಿಶೇಷ ಸಾಧನೆ! ಎಂಎಂ ಕೀರವಾಣಿ, ಪ್ರೇಮ್ ರಕ್ಷಿತ್, ಕಾಲ ಭೈರವ, ಚಂದ್ರಬೋಸ್, ರಾಹುಲ್ ಸಿಪ್ಲಿಗುಂಜ್ ಅವರಿಗೆ ಅಭಿನಂದನೆಗಳು. ನಾನು ಎಸ್‌ಎಸ್ ರಾಜಮೌಳಿ, ಜೂ. ಎನ್‌ಟಿಆರ್, ರಾಮ್ ಚರಣ್ ಮತ್ತು ಆರ್‌ಆರ್‌ಆರ್ ಚಿತ್ರದ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತಂದಿದೆ. ಎಂದು ಟ್ವೀಟ್ ಮಾಡಿದ್ದಾರೆ.


Golden Globe Awards: RRRಗೆ ಪ್ರತಿಷ್ಠಿತ ಪ್ರಶಸ್ತಿಯ ಗರಿ; ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್!


ಆರ್‌ಆರ್‌ಆರ್‌ ಸಿನಿಮಾದ ʼನಾಟು ನಾಟುʼ ಪ್ರಪಂಚದಾದ್ಯಂತ ಸಖತ್‌ ಹಿಟ್‌ ಆಗಿದೆ. ವಿದೇಶಿಗರು ಸಹ ಈ ಹಾಡಿಗೆ ಹೆಜ್ಜೆ ಹಾಕಿದ್ದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಇನ್ನು ಜನ ಮೆಚ್ಚಿದ ಹಾಡಿಗೆ ಬುಧವಾರ ನಡೆದ ಗೋಲ್ಡನ್ ಗ್ಲೋಬ್ಸ್ 2023 ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಅತ್ಯುತ್ತಮ ಮೂಲ ಹಾಡು ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ವಿಶೇಷ ಅಂದ್ರೆ ಗ್ಲೋಬ್ಸ್‌ ಅವಾರ್ಡ್‌ಗಾಗಿ ಟೈಲರ್ ಸ್ವಿಫ್ಟ್, ರಿಹಾನ್ನಾ ಮತ್ತು ಲೇಡಿ ಗಾಗಾ ಅವರಂತಹ ಹಾಡುಗಳು ಸ್ಪರ್ಧೆಗಿಳಿದಿರುತ್ತವೆ.


ವಿಶ್ವದಾದ್ಯಂತ 1,200 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ ಆರ್‌ಆರ್‌ಆರ್‌ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಅಜಯ್ ದೇವಗನ್, ಆಲಿಯಾ ಭಟ್, ಶ್ರಿಯಾ ಸರನ್, ಸಮುದ್ರಕನಿ, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಕೂಡ ಅಭಿನಯಿಸಿದ್ದಾರೆ. ಈ ಚಲನಚಿತ್ರವು 1920ರ ದಶಕದಲ್ಲಿ ಇಬ್ಬರು ನಿಜ ಜೀವನದ ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್, ಅವರ ಕಾಲ್ಪನಿಕ ಸ್ನೇಹ ಮತ್ತು ಬ್ರಿಟಿಷ್ ರಾಜ್ ವಿರುದ್ಧದ ಹೋರಾಟದ ಸುತ್ತಲೂ ಹಣೆದ ಕಥೆಯ ದೃಶ್ಯಕಾವ್ಯವಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.