ಡ್ರಗ್ಸ್ ಮಾರಾಟ: ಮಲಯಾಳಂ ನಟಿ ಅಶ್ವಥಿ ಬಾಬು ಬಂಧನ
ಬಂಧಿತ ನಟಿಯಿಂದ ಲಕ್ಷಾಂತರ ರೂ. ಮೌಲ್ಯದ 58 ಗ್ರಾಂ ಡ್ರಗ್ಸ್ ವಶಪಡಿಸಿಕೊಂಡಿರುವ ಪೊಲೀಸರು, ಡ್ರಗ್ಸ್ ನೀಡಲು ಗ್ರಾಹಕನಿಗಾಗಿ ಮನೆಯ ಸಮೀಪದಲ್ಲೇ ಕಾಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಕೊಚ್ಚಿ: ಡ್ರಗ್ಸ್ ಮಾರಾಟ ಮಾಡಲು ಯತ್ನಿಸಿದ ಆರೋಪದಲ್ಲಿ ಮಲಯಾಳಂನ ಕಿರುತೆರೆ ಮತ್ತು ಹಿರಿತೆರೆ ನಟಿ ಅಶ್ವಥಿ ಬಾಬು(22) ಮತ್ತು ಅವರ ಕಾರ್ ಡ್ರೈವರ್ ಬಿನೋಯ್ ಅಬ್ರಾಹಂನನ್ನು ಕೇರಳದ ಕೊಚ್ಚಿಯ ತ್ರಿಕ್ಕಾಕರ ಎಂಬಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನಟಿಯಿಂದ ಲಕ್ಷಾಂತರ ರೂ. ಮೌಲ್ಯದ 58 ಗ್ರಾಂ ಡ್ರಗ್ಸ್ ವಶಪಡಿಸಿಕೊಂಡಿರುವ ಪೊಲೀಸರು, ಡ್ರಗ್ಸ್ ನೀಡಲು ಗ್ರಾಹಕನಿಗಾಗಿ ಮನೆಯ ಸಮೀಪದಲ್ಲೇ ಕಾಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಆಕೆಯ ಕಾರ್ ಡ್ರೈವರ್ ಅಶ್ವತಿಗೆ ಬೆಂಗಳೂರಿನಿಂದ ಡ್ರಗ್ಸ್ ತರಿಸಿಕೊಡಲು ಸಹಾಯ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಈ ಧಧೆಯ ಇಡೀ ಜಾಲವನ್ನು ಪತ್ತೆ ಹಚ್ಚಲು ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ವರ್ಷ ಕೊಚ್ಚಿಯಲ್ಲೇ ಬರೋಬ್ಬರಿ 280 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿತ್ತು.
ಖಚಿತ ಮಾಹಿತಿ ಮೇರೆಗೆ ಕಳೆದ ಕೆಲ ವಾರಗಳಿಂದ ಅಶ್ವಥಿ ಅವರ ಚಲನವಲನಗಳನ್ನು ಗಮನಿಸಲಾಗುತ್ತಿತ್ತು. ಈ ಬೆನ್ನಲೇ ಭಾನುವಾರ ರೆಡ್ ಹ್ಯಾಂಡ್ ಆಗಿ ಅವರನ್ನು ಬಂಧಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.