ಹೈದರಾಬಾದ್: ವಾರಾಂತ್ಯದ ಸಂಚಿಕೆಯಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 6 ನಿರೂಪಕ ನಾಗಾರ್ಜುನ ಅವರ ವಿರುದ್ಧ ವಿಡಂಬನಾತ್ಮಕ ಕಾಮೆಂಟ್‌ಗಳಿಗೆ ಸಿಪಿಐ ನಾಯಕ ನಾರಾಯಣ ಪ್ರತಿಕ್ರಿಯಿಸಿದ್ದಾರೆ. ಸಿಪಿಐ ಮುಖಂಡ ನಾರಾಯಣ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ಟೀಕಿಸುತ್ತಿದ್ದು, ಕಾರ್ಯಕ್ರಮದ ವಿರುದ್ಧ ಕಾಮೆಂಟ್ ಮಾಡಿದ್ದು ಗೊತ್ತೇ ಇದೆ. ಬಿಗ್‌ ಬಾಸ್‌ ಮನೆಯಲ್ಲಿ ಮದುವೆಯಾದವರಿಗೆ ನೀವು ಅನುಕೂಲ ಮಾಡಿಕೊಟ್ಟಿದ್ದೀರಿ ಎಂದು ಅವರು ಆಕ್ಷೇಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : BBK Season 9 : ಬಿಗ್ ಬಾಸ್ ಮನೆಗೆ ನಟ ಅನಿರುದ್ಧ!


ಮದುವೆಯಾಗದಿರುವವರು ಏನು ಮಾಡಬೇಕು? ಅಣ್ಣ, ತಮ್ಮ, ಅಕ್ಕ, ತಂಗಿ ಅಲ್ಲದವರನ್ನು ಒಂದೇ ಮನೆಯಲ್ಲಿ ಹೀಗೆ ಕೂಡಿ ಹಾಕಿದರೆ ಏನಾಗುತ್ತೆ ಹೇಳಿ? ಎಂದು ನಾರಾಯಣ ಪ್ರಶ್ನಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ತೆಲುಗು ಬಿಗ್‌ ಬಾಸ್‌ ಸೀಸನ್‌ 6 ಇತ್ತೀಚೆಗೆ ಆರಂಭವಾಗಿದೆ. ಆದರೆ ಆಂಧ್ರದ ಸಿಪಿಐ ಮುಖಂಡ ನಾರಾಯಣ್ ಅವರು ಬಿಗ್‌ ಬಾಸ್‌ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿರುವುದು ಪರ ವಿರೋಧ ಚರ್ಚೆಗೆ ಕಾರಣವಾಗಿದೆ.


ಬಿಗ್‌ ಬಾಸ್‌ ಮೊದಲ ಸೀಸನ್‌ ಜ್ಯೂನಿಯರ್‌ ಎನ್‌ಟಿಆರ್‌, ಎರಡನೇ ಸೀಸನ್‌ ನಾಣಿ ಹಾಗೂ ಅದರ ನಂತರದ ಸೀಸನ್‌ಗಳನ್ನು ಅಕ್ಕಿನೇನಿ ನಾಗಾರ್ಜುನ ಹೋಸ್ಟ್‌ ಮಾಡುತ್ತಾ ಬಂದಿದ್ದಾರೆ. ನಾಗಾರ್ಜುನ ಅವರನ್ನು ಪ್ರಶ್ನಿಸಿರುವ ಸಿಪಿಐ ಮುಖಂಡ ನಾರಾಯಣ, ''ನಾಗಣ್ಣ ಬಿಗ್‌ ಬಾಸ್‌ ಮನೆಯಲ್ಲಿ ಮದುವೆಯಾದವರಿಗೆ ಅನುಕೂಲ ಮಾಡಿಕೊಡ್ತೀರಾ, ಆದರೆ ಮದುವೆಯಾಗದಿರುವವರು ಏನು ಮಾಡಬೇಕು? ಅಣ್ಣ, ತಮ್ಮ, ಅಕ್ಕ, ತಂಗಿ ಅಲ್ಲದವರನ್ನು ಒಂದೇ ಮನೆಯಲ್ಲಿ ಹೀಗೆ ಕೂಡಿ ಹಾಕಿದರೆ ಏನಾಗುತ್ತೆ ಹೇಳಿ? ಈ ರೀತಿಯ ಅಸಹ್ಯಗಳನ್ನು ಜನರಿಗೆ ತೋರಿಸುವ ಮೂಲಕ ನೀವು ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದೀರಿ. ನನಗೆ ಬಿಗ್ ಬಾಸ್ ಮನೆ ವೇಶ್ಯಾಗೃಹದಂತೆ ಕಾಣುತ್ತಿದೆ. ಈ ಶೋಗಾಗಿ ಅನಾವಶ್ಯಕವಾಗಿ ಹಣವನ್ನು ಪೋಲು ಮಾಡುತ್ತಿದ್ದೀರಿ. ಕೂಡಲೇ ಇಂತಹ ಶೋಗಳನ್ನು ನಿಲ್ಲಿಸಬೇಕು'' ಎಂದು ಹೇಳಿದ್ದಾರೆ. 


ಇದನ್ನೂ ಓದಿ : Golden Visa: ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕಿಚ್ಚ ಸುದೀಪ್! ಏನಿದರ ಲಾಭ?


ನಾರಾಯಣ್‌ ಅವರ ಮಾತಿಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ ಕೆಲವರು ಶೋವನ್ನು ಹಾಗೆ ಹೋಲಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ. ತಮ್ಮ ವಿಡಂಬನಾತ್ಮಕ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ನಾರಾಯಣ, ಬಿಗ್ ಬಾಸ್ ಮದುವೆಯಾದ ದಂಪತಿಗಳಿಗೆ ಲೈಸೆನ್ಸ್ ನೀಡಿ ಮನೆಯಲ್ಲಿ ಫಸ್ಟ್ ನೈಟ್ ರೂಮ್ ವ್ಯವಸ್ಥೆ ಮಾಡಿದ್ದಾರೆ. ಇನ್ನು ಇತರೆ ಹೌಸ್‌ಮೇಟ್‌ಗಳ ಬಗ್ಗೆ ನಾಗಾರ್ಜುನ್ ಅವರನ್ನು ಪ್ರಶ್ನಿಸಿದ ಅವರು, ಬಿಗ್ ಬಾಸ್ ಮನೆಯಲ್ಲಿ ಇತರ ಹೌಸ್‌ಮೇಟ್‌ಗಳು ಏನು ಮಾಡುತ್ತಾರೆ ಎಂದು ಹೇಳಿ ಎಂದು ಕೇಳಿದ್ದಾರೆ. ಬಿಗ್ ಬಾಸ್ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸುವಂತಹ ಪ್ರಸಂಗಗಳು ಹಿಂದೆಂದೂ ನಡೆದಿರಲಿಲ್ಲ. ಆದರೆ ಕಳೆದ ವಾರದಿಂದ ಶುರುವಾಗಿರುವ ತೆಲುಗು ಬಿಗ್ ಬಾಸ್ ಅನ್ನು ಆಂಧ್ರದ ಸಿಪಿಐ ಮುಖಂಡ ನಾರಾಯಣ ಅವರು ವೇಶ್ಯಾಗೃಹಕ್ಕೆ ಹೋಲಿಸಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.