Pooja Bhat  : ಪೂಜಾ ಭಟ್‌ 80ರ ದಶಕದಲ್ಲೇ ಬಿಕಿನಿ ಧರಿಸಿ ತಮ್ಮ ಹಾಟ್‌ ಲುಕ್‌ನಿಂದಲೇ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡ ನಟಿ. ಇವರ ತಂದೆ ನಿರ್ದೇಶಕ ಮಹೇಶ್‌ ಭಟ್‌. ಇವರು ಆಗಾಗ್ಗೆ ವಿವಾದಗಳಿಗೆ ಸಿಲುಕುತ್ತಲೇ ಇರುತ್ತಾರೆ. 


COMMERCIAL BREAK
SCROLL TO CONTINUE READING

ಹೌದು ಇತ್ತೀಚೆಗೆ ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿದ್ದ ಅವರು ಅಲ್ಲಿಯ ಮಹಿಳಾ ಸ್ಪರ್ಧಿಗಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರು ಎನ್ನುವ ಆರೋಪವೂ ನಿರ್ಮಾಪಕ ಮಹೇಶ್‌ ಭಟ್‌ ಮೇಲೆ ಕೇಳಿಬಂದಿತ್ತು. ಆದರೆ ಇವರ ಮೇಲೆ ವಿವಾದಗಳು ಬರೋದು ಇದೇ ಮೊದಲಲ್ಲ. 


ಮಹೇಶ್‌ ಭಟ್‌ ಮಗಳು ಪೂಜಾ ಭಟ್‌ಳನ್ನು ಮದುವೆಯಾಗಬೇಕೆನ್ನುವ ತಮ್ಮ ಬಯಕೆಯನ್ನು ಹೇಳಿಕೊಂಡು ಆಕೆಯ ಜೊತೆಗೆ ಲಿಪ್‌ ಲಾಕ್‌ ಮಾಡಿ ನೆಟ್ಟಿಗರಿಂದ ಆಕ್ರೋಶಕ್ಕೆ ಒಳಗಾಗಿದ್ದರು. ಇನ್ನು ಅದರ ಪೋಟೋ ಹೊರಬಂದಾಗ ಸಿನಿರಂಗದಲ್ಲಿ ಸಂಚಲನವೇ ಸೃಷ್ಟಿಯಾಗಿತ್ತು. ಈ ಬಗ್ಗೆ ಮಾದ್ಯಮಗಳು ಸಹ ಕೀಳಾಗಿ ಪ್ರತಿಕ್ರಿಯಿಸಿದ್ದರು. 


ಇದನ್ನೂ ಓದಿ-Jawan OTT Release: ಜವಾನ್ ಒಟಿಟಿ ಬಿಡುಗಡೆ ಎಲ್ಲಿ, ಯಾವಾಗ?


ಮಹೇಶ್‌ ಭಟ್‌ ಅವರು ತಮ್ಮ ಮಗಳೊಂದಿಗೆ ಪರಸ್ಪರ ಚುಂಬಿಸಿದ ಫೋಟೋವನ್ನು ಸ್ಟಾರ್ಡಸ್ಟ್ ಮ್ಯಾಗಜಿನ್‌ನಲ್ಲಿ ಪ್ರಕಟಿಸಲಾಗಿತ್ತು. ಈ ಪೋಟೋಗೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಅದೇ ಪೋಟೋ ವಿಚಾರವಾಗಿ ನಟಿ ಪೂಜಾ ಭಟ್‌ ಮತ್ತೆ ಮಾತನಾಡಿದ್ದಾರೆ.


'ಬಿಗ್ ಬಾಸ್ OTT 2' ನಲ್ಲಿ ಭಾಗವಹಿಸಿದ ನಂತರ ನಿರಂತರವಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಪೂಜಾ ಭಟ್ ಒಂದು ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅದೇ ವೇಳೆ ತಮ್ಮ ತಂದೆಯೊಂದಿಗಿನ ಲಿಪ್ಲಾಕ್ ವಿವಾದದ ಕುರಿತಾಗಿಯೂ ಮಾತನಾಡಿದ್ದಾರೆ. 


ಲಿಪ್-ಲಾಕ್‌ ವಿವಾದದ ಬಗ್ಗೆ ಮೌನ ಮುರಿದ ಪೂಜಾ ಭಟ್
ನಿಮ್ಮ ತಂದೆಯೊಂದಿಗೆ ಲಿಪ್‌ ಲಾಕ್‌ ಮಾಡಿ ನೀವು ಪಶ್ಚಾತಾಪ ಪಟ್ಟಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪೂಜಾ ಭಟ್‌ "ನಾನು ಆ ಕ್ಷಣವನ್ನು ಸಾಮಾನ್ಯವೆಂದು ಭಾವಿಸುತ್ತೇನೆ. ನೋಡುವವರು ಏನಾದರೂ ಮಾತನಾಡಬಹುದು. ಈ ಸಂದರ್ಭದಲ್ಲಿ ನನಗೆ ಶಾರುಖ್‌ ಅವರ ಒಂದು ಮಾತು ನೆನಪಿಗೆ ಬರುತ್ತೆ ಏನೆಂದರೆ ನಿಮಗೆ ಹೆಣ್ಣು ಮಕ್ಕಳಿದ್ದು, ಅವರು ಚಿಕ್ಕವರಿದ್ದಾಗ ಅಪ್ಪ ಅಮ್ಮ ನನಗೆ ಒಂದು ಮುತ್ತು ಕೊಡಿ ಎಂದು ಕೇಳುತ್ತದೆ. ಆಗ ತಂದೆ ತಾಯಿ ಸಹಜವಾಗಿಯೇ ಕೊಡುತ್ತಾರೆ. ಅದೇ ರೀತಿ ನಾನು ಈಗಲೂ ನನ್ನಪ್ಪನಿಗೆ ಚಿಕ್ಕ ಮಗುವೇ..ಅವರು ಜೀವನವಿಡೀ ನನ್ನ ಜೊತೆ ಹೀಗೆ ಇರುತ್ತಾರೆ" ಎಂದು ಹೇಳಿದ್ದಾರೆ. 


ಇದನ್ನೂ ಓದಿ-ʼಜೈಲರ್‌ʼ ನಲ್ಲಿ ನಟಿಸಿದ್ದ ಖ್ಯಾತ ತಮಿಳು ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.