ʼಜೈಲರ್‌ʼ ನಲ್ಲಿ ನಟಿಸಿದ್ದ ಖ್ಯಾತ ತಮಿಳು ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ..!

Jailer actor Marimuthu : ಕಾಲಿವುಡ್‌ ಖ್ಯಾತ ನಿರ್ದೇಶಕ, ನಟ ಮಾರಿಮುತ್ತು ಅವರು ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಧಾರಾವಾಹಿಗೆ ಡಬ್ಬಿಂಗ್‌ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ತಿಳಿದು ಬಂದಿದೆ.

Written by - Krishna N K | Last Updated : Sep 8, 2023, 12:31 PM IST
  • ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ
  • ಇತ್ತೀಚಿಗೆ ಜೈಲರ್‌ ಸಿನಿಮಾದಲ್ಲಿ ನಟಿಸಿದ್ದ ತಮಿಳು ನಟ
  • ನಿರ್ದೇಶಕರಾಗಿಯೂ ಸಹ ತಮಿಳು ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದರು
ʼಜೈಲರ್‌ʼ ನಲ್ಲಿ ನಟಿಸಿದ್ದ ಖ್ಯಾತ ತಮಿಳು ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ..! title=

Marimuthu passed away : ತಮಿಳು ಖ್ಯಾತ ನಿರ್ದೇಶಕ ಹಾಗೂ ನಟ ಮಾರಿಮುತ್ತು (58) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ‘ಎತ್ತಿರ್ ನೀಚೆಲ್’ ಎಂಬ ಧಾರಾವಾಹಿಗೆ ಡಬ್ಬಿಂಗ್ ಮಾಡುತ್ತಿದ್ದ ನಟ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಟ ಮಾರಿಮುತ್ತು ಅವರು ಎದೆನೋವಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಅವರ ಸಾವಿನ ಸುದ್ದಿ ತಿಳಿದು ಚಿತ್ರರಂಗ ಮಾತ್ರವಲ್ಲದೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅವರ ನಿಧನಕ್ಕೆ ಗಣ್ಯರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಚೆನ್ನೈನ ವಿರುಗಂಬಾಕ್ಕಂ ಪ್ರದೇಶದ ಭಾಸ್ಕರ್ ಕಾಲೋನಿಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗುತ್ತದೆ. ಇಂದು ಮಧ್ಯಾಹ್ನ 3 ಗಂಟೆಗೆ ಥೇಣಿಯಲ್ಲಿರುವ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Jawan Collection Day 1 : ಜವಾನ್‌ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನವೇ ಹೊಸ ದಾಖಲೆ

ತೇಣಿ ಜಿಲ್ಲೆಯ ಪಶುಮಲೈ ಮೂಲದ ಮಾರಿಮುತ್ತು ಕವಿ ವೈರಮುತ್ತು ಅವರಿಗೆ ಸಹಾಯಕರಾಗಿದ್ದರು. ಅಲ್ಲದೆ, ರಾಜ್‌ಕಿರಣ್‌ ಅವರ ಪ್ರಥಮಕಿಲಿ ಮತ್ತು ಸಾಮಿ ಎನ್ ರಸ ಥಾನ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ನಿರ್ದೇಶಕರಾದ ಮಣಿರತ್ನಂ, ಸೀಮಾನ್, ಎಸ್.ಜೆ. ಸೂರ್ಯ ಮತ್ತು ವಸಂತ್ ಅವರೊಂದಿಗೂ ಕೆಲಸ ಮಾಡಿದ್ದಾರೆ.

2008 ರಲ್ಲಿ ಕಣ್ಣುಂ ಕಣ್ಣುಂ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಮಾರಿಮುತ್ತು, ಸುಮಾರು 6 ವರ್ಷಗಳ ನಂತರ 2014 ರಲ್ಲಿ ವಿಮಲ್, ಪ್ರಸನ್ನ, ಓವಿಯಾ, ಅನನ್ಯಾ, ಇನಿಯಾ ನಟಿಸಿದ ಬುಲಿವಾಲ್ ಚಿತ್ರವನ್ನು ನಿರ್ದೇಶಿಸಿದರು. 2010ರಿಂದ ನಟನೆಯತ್ತಲೂ ಗಮನ ಹರಿಸಿದ್ದರು. 

ಇದನ್ನೂ ಓದಿ: ಸಲಾರ್' ಯಶಸ್ಸಿಗಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಶಾಂತ್ ನೀಲ್..! ವಿಡಿಯೋ ವೈರಲ್

ಇತ್ತೀಚೆಗೆ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದಲ್ಲೂ ನಟಿಸಿದ್ದರು. ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಚಿತ್ರದಲ್ಲೂ ಅವರು ನಟಿಸಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ, ಅವರು ಸನ್ ಟಿವಿಯಲ್ಲಿ ಪ್ರಸಾರವಾದ 'ಎತ್ತಿರೆ ನೀಚಲ್' ಧಾರಾವಾಹಿಯಲ್ಲಿನ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News