Meena Second marriage Rumors: ಚಿತ್ರರಂಗಕ್ಕೆ ಅನೇಕ ನಾಯಕರು, ನಾಯಕಿಯರು ಬರುತ್ತಲೇ ಇರುತ್ತಾರೆ. ಸ್ಟಾರ್ ನಾಯಕಿಯಾಗಿ ಗುರುತಿಸಿಕೊಳ್ಳುವುದು ತುಂಬಾ ಕಷ್ಟ. ಬಾಲ ಕಲಾವಿದೆಯಾಗಿ ಎಂಟ್ರಿಕೊಟ್ಟು ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಬೆಳೆದ ಈ ನಟಿ ಸಿನಿಮಾ ಮಾತ್ರವಲ್ಲ ವಯಕ್ತಿಕ ಜೀವನದಿಂದಲೂ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಈ ಸ್ಟಾರ್‌ ನಟಿ ಇಂಡಸ್ಟ್ರಿಯ ಟಾಪ್ ಹೀರೋಗಳ ಎದುರು ಅನೇಕ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ಹೀರೋಯಿನ್ ಆಗಿ ಮೆರೆದ ಕೆಲವೇ ಕೆಲವು ಸಿನಿಮಾ ತಾರೆಗಳಲ್ಲಿ ಮೀನಾ ಕೂಡ ಒಬ್ಬರು. ಟಾಪ್ ಹೀರೋಯಿನ್ ಆದ ಮೀನಾ ಕಾಲಿವುಡ್, ಮಾಲಿವುಡ್, ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್ ಟಾಪ್ ಹೀರೋಗಳ ಎದುರು ಅನೇಕ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.


ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಗಳಲ್ಲಿ ಮೀನಾ ಕೂಡ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ. ಟಾಪ್ ಹೀರೋಗಳ ಎದುರು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ದೃಶ್ಯಂ ಚಿತ್ರದ ಮೂಲಕ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಅವರು ಮತ್ತೊಮ್ಮೆ ತಮ್ಮ ಅಭಿನಯದಿಂದ ಜನರ ಮನಗೆದ್ದಿದ್ದಾರೆ. ಸದ್ಯ ನಟಿ ಮೀನಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.


ಇದನ್ನೂ ಓದಿ : ವಾರದ 7 ದಿನ ಬೆಳಿಗ್ಗೆ ಹೀಗೆ ಮಾಡಿದ್ರೆ, ಮಲೈಕಾರಂತೆ ನೀವು 50 ರಲ್ಲೂ 20 ರಂತೆ ಕಾಣಬಹುದು..!


ಮದುವೆಯ ನಂತರ ಸಿನಿಮಾದಿಂದ ದೂರ ಉಳಿದಿದ್ದರು. ಮೀನಾಗೆ ಒಬ್ಬ ಮಗಳಿದ್ದಾಳೆ. ಮೀನಾ ಅವರ ಪತಿ ವಿದ್ಯಾಸಾಗರ್ ಇತ್ತೀಚೆಗೆ ನಿಧನರಾದರು. ಅನಾರೋಗ್ಯದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಂದಿನಿಂದ ಮೀನಾ ತನ್ನ ಮಗಳೊಂದಿಗೆ ಚೆನ್ನೈನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ.


ಸದ್ಯ ಅವರು ಮೀನಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತನಗಿಂತ ಕಿರಿಯ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. 


48 ವರ್ಷ ವಯಸ್ಸಿನ ನಟಿ ಮೀನಾ 41 ವರ್ಷದ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ನಟ ಯಾರೆಂದು ರಿವೀಲ್‌ ಆಗಿಲ್ಲ. ಮೀನಾ ಪೋಷಕರು ಒಂಟಿಯಾಗಿ ನರಳುವುದಕ್ಕಿಂತ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಮೀನಾ ಅವರನ್ನು ಮಗಳಿಗಾಗಿ ಆದರೂ ಎರಡನೇ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದಾರಂತೆ ಎನ್ನಲಾಗಿದೆ. 


ಆದರೆ ಇವು ಕೇವಲ ವದಂತಿಗಳಷ್ಟೇ ಎನ್ನುತ್ತಾರೆ ಮೀನಾ ಸ್ನೇಹಿತರು. ಮೀನಾ ಕೂಡ ಈ ಸುದ್ದಿಯನ್ನು ಹಲವು ಬಾರಿ ನಿರಾಕರಿಸಿದ್ದರು. ಆದರೆ ಮತ್ತೆ ಮತ್ತೆ ಈ ಸುದ್ದಿಗಳು ಬರುತ್ತಲೇ ಇವೆ.  


ಇದನ್ನೂ ಓದಿ : ಒಂದು ಕಾಲದಲ್ಲಿ ಕ್ರೇಜಿ ಹೀರೋಯಿನ್.. ಈಗ ಮೋಟಿವೇಶನಲ್ ಸ್ಪೀಕರ್! ಯಾರು ಗೆಸ್‌ ಮಾಡಿ..   


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.