Adipurush: ಇಲ್ಲಿದೆ ನೋಡಿ ಆದಿಪುರುಷ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್.. ಚಿತ್ರದ ಒಟ್ಟು ಅವಧಿ ಎಷ್ಟು ಗೊತ್ತಾ?
Adipurush Censor Certificate : ಇದೇ ಜೂನ್ 16 ರಂದು ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಆದಿಪುರುಷ ರಿಲೀಸ್ ಆಗಲಿದೆ. ಈಗ ಸೆನ್ಸಾರ್ ಮಂಡಳಿಯಿಂದ ಸಿಕ್ಕ ಸರ್ಟಿಫಿಕೇಟ್ ಮತ್ತು ಸಿನಿಮಾದ ಒಟ್ಟು ಅವಧಿಯ ವಿಚಾರ ತೀವ್ರ ಚರ್ಚೆಯಾಗುತ್ತಿದೆ.
Adipurush run time : ಆದಿಪುರುಷ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ದಿನದಿಂದ ದಿನಕ್ಕೆ ಇದರ ಮೇಲಿನ ಕ್ರೇಜ್ ಹೆಚ್ಚಾಗುತ್ತಿದೆ. ಭೂಷಣ್ ಕುಮಾರ್ ನಿರ್ಮಿಸಿದ ಮತ್ತು ಓಂ ರಾವತ್ ನಿರ್ದೇಶನದ ಆದಿಪುರುಷ ಸಿನಿಮಾ ಮೇಲೆ ಜನರ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಈಗ ಸೆನ್ಸಾರ್ ಮಂಡಳಿಯಿಂದ ಯು-ಸರ್ಟಿಫಿಕೇಟ್ ಪಡೆಯುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಟ್ರೇಲರ್ ಮತ್ತು ಹಾಡುಗಳನ್ನು ಗಮನಿಸಿದರೆ, ಪ್ರಭಾಸ್ ಮತ್ತು ಕೃತಿ ಅಭಿನಯದ ಚಿತ್ರ ಇತಿಹಾಸ ಸೃಷ್ಟಿಸುವ ನಿರೀಕ್ಷೆಯನ್ನು ಹುಟ್ಟುಹಾಕುತ್ತದೆ. ಭಾರತೀಯ ಪುರಾಣದ ಒಂದು ಪ್ರಮುಖ ಅಂಶದ ಬಗ್ಗೆ ಯುವ ಪೀಳಿಗೆಗೆ ತಿಳಿಸಲು ನಿರ್ಮಿಸಿದ ಒಂದು ಸುಂದರ ದೃಶ್ಯ ಕಾವ್ಯದಂತಿದೆ. ಓಂ ರಾವುತ್ ಅವರ ನಿರ್ದೇಶನವು ಕೇವಲ ದೃಶ್ಯ ವೈಭವವನ್ನು ಪ್ರದರ್ಶಿಸುವುದಲ್ಲದೇ, ಭಾರತೀಯ ಪರಂಪರೆಯ ಬೇರುಗಳನ್ನು ಎತ್ತಿ ತೋರಿಸುವ ಶ್ರೀಮಂತ ಕಥೆಯನ್ನು ಹೊರತರುತ್ತದೆ.
ಇದನ್ನೂ ಓದಿ: ಆದಿಪುರುಷ ಸಿನಿಮಾದ 10 ಸಾವಿರ ಟಿಕೆಟ್ ಬುಕ್ ಮಾಡಿದ ಬಾಲಿವುಡ್ ನಟ
ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಚಿತ್ರದ ಅವಧಿಯನ್ನು ಬಹಿರಂಗಪಡಿಸಿದ್ದಾರೆ. ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅವರು, "ಆದಿಪುರುಷ 8 ಜೂನ್ 2023 ರಂದು CBFC ಯಿಂದ 'U' ಸರ್ಟಿಫಿಕೇಟ್ ಪಡೆದಿದೆ. ಈ ಸಿನಿಮಾದ ಅವಧಿ: 2 ಗಂಟೆ, 59 ನಿಮಿಷ" ಎಂದು ಬರೆದಿದ್ದಾರೆ.
ತಿರುಪತಿ ದೇವಸ್ಥಾನದಲ್ಲಿ ಕೃತಿ ಸನೋನ್‌ಗೆ ಕಿಸ್ ಕೊಟ್ಟ ನಿರ್ದೇಶಕ, ಟೀಕೆಗೆ ಗುರಿ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.