Adipurush: ಆದಿಪುರುಷ ಸಿನಿಮಾದ 10 ಸಾವಿರ ಟಿಕೆಟ್ ಬುಕ್‌ ಮಾಡಿದ ಬಾಲಿವುಡ್‌ ನಟ

Adipurush: ಸೈಫ್ ಅಲಿ ಖಾನ್, ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಚಿತ್ರ ಆದಿಪುರುಷ ಜೂನ್ 16 ರಂದು ಬಿಡುಗಡೆಯಾಗುತ್ತಿದೆ. ಈ ಪೌರಾಣಿಕ ಕಥೆಯ ಸಿನಿಮಾವನ್ನು ವೀಕ್ಷಿಸಲು ಎಲ್ಲರೂ ಉತಸುಕರಾಗಿದ್ದಾರೆ. ಈ ಹಿನ್ನೆಲೆ ಆದಿಪುರುಷ ಸಿನಿಮಾದ 10 ಸಾವಿರ ಟಿಕೆಟ್‌ಗಳನ್ನು ಬಾಲಿವುಡ್‌ ನಟರೊಬ್ಬರು ಈಗಾಗಲೇ ಖರೀದಿಸಲಿದ್ದಾರಂತೆ. 

Written by - Chetana Devarmani | Last Updated : Jun 9, 2023, 10:59 AM IST
  • ಆದಿಪುರುಷ ಸಿನಿಮಾದ 10 ಸಾವಿರ ಟಿಕೆಟ್ ಬುಕ್‌ ಮಾಡಿದ ಬಾಲಿವುಡ್‌ ನಟ
  • ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಚಿತ್ರ
  • ಜೂನ್ 16 ರಂದು ಬಿಡುಗಡೆಯಾಗುತ್ತಿದೆ ಆದಿಪುರುಷ
Adipurush: ಆದಿಪುರುಷ ಸಿನಿಮಾದ 10 ಸಾವಿರ ಟಿಕೆಟ್ ಬುಕ್‌ ಮಾಡಿದ ಬಾಲಿವುಡ್‌ ನಟ  title=
Adipurush

Adipurush: ಓಂ ರಾವುತ್ ನಿರ್ದೇಶನದ ಆದಿಪುರುಷ ಬಿಡುಗಡೆಗೆ ಎಲ್ಲರೂ ಕಾದು ಕುಳಿತಿದ್ದಾರೆ. ಇದೇ ತಿಂಗಳ 16 ರಂದು ಆದಿಪುರುಷ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಅನೇಕರು ಈ ಸಿನಿಮಾ ಟಿಕೆಟ್‌ ಬುಕ್‌ ಮಾಡಲು ಕಾಯುತ್ತಿದ್ದಾರೆ. ಕಾರ್ತಿಕೇಯ 2 ನಿರ್ಮಾಪಕ ಅಭಿಷೇಕ್ ಅಗರ್ವಾಲ್ ತೆಲಂಗಾಣದಲ್ಲಿ 10,000 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ವಿತರಿಸುವುದಾಗಿ ಘೋಷಿಸಿದರು. ಇದಾದ ಬಳಿಕ ಈಗ ಬಾಲಿವುಡ್‌ ನಟರೊಬ್ಬರು 10,000 ಹಿಂದುಳಿದ ಮಕ್ಕಳಿಗೆ ಈ ಸಿನಿಮಾ ತೋರಿಸಲು ನಿರ್ಧರಿಸಿದ್ದಾರೆ. 

ಚಲನಚಿತ್ರ ವಿಮರ್ಶಕ ಮತ್ತು ವಿಶ್ಲೇಷಕ ತರಣ್ ಆದರ್ಶ್ ಅವರು ತಮ್ಮ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ. "ರಣಬೀರ್ ಕಪೂರ್ ಮಕ್ಕಳಿಗಾಗಿ 10,000 ಆದಿಪುರುಷ ಟಿಕೆಟ್‌ಗಳನ್ನು ಕಾಯ್ದಿರಿಸಲು ನಿರ್ಧರಿಸಿದ್ದಾರೆ" ಎಂದು ಪೋಸ್ಟ್‌ ಮಾಡಿದ್ದಾರೆ. ಈ ಹಿಂದೆ ಕಾರ್ತಿಕೇಯ 2 ನಿರ್ಮಾಪಕ ತೆಲಂಗಾಣದಲ್ಲಿ ಹಿಂದುಳಿದ ಮಕ್ಕಳಿಗೆ ಆದಿಪುರುಷ ಸಿನಿಮಾ ತೋರಿಸಲು 10 ಸಾವಿರ ಟಿಕೆಟ್‌ ಖರೀದಿಸಲು ನಿರ್ಧರಿಸಿದ್ದರು.  

ಇದನ್ನೂ ಓದಿ: ಭಾರೀ ಮೊತ್ತಕ್ಕೆ ಮಾರಾಟವಾಯಿತು "ಜವಾನ್" ಚಿತ್ರದ ಓಟಿಟಿ, ಸಂಗೀತ ಮತ್ತು ಸ್ಯಾಟಿಲೈಟ್ ಹಕ್ಕುಗಳು 

ಆದಿಪುರುಷ ಚಿತ್ರದಲ್ಲಿ ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಕ್ರಮವಾಗಿ ರಾಘವ್, ಜಾನಕಿ ಮತ್ತು ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಮರಾಠಿ ನಟ ದೇವದತ್ತ ನಾಗೆ ಭಗವಾನ್ ಹನುಮಾನ್ ಪಾತ್ರವನ್ನು ನಟಿಸಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನಾಗಿ ಅಭಿನಯಿಸಿದ್ದಾರೆ. ಓಂ ರಾವುತ್ ನಿರ್ದೇಶನದ ಈ ಸಿನಿಮಾ ಮಹರ್ಷಿ ವಾಲ್ಮಿಕಿಯ ರಾಮಾಯಣ ಮತ್ತು ತುಳಸಿದಾಸರ ರಾಮಚರಿತಮಾನಸವನ್ನು ಆಧರಿಸಿದೆ. 

ಇತ್ತೀಚಿನ ವರದಿಗಳ ಪ್ರಕಾರ, ಆದಿಪುರುಷ ಈಗಾಗಲೇ ಬಾಕ್ಸ್ ಆಫೀಸ್ ಯಶಸ್ಸಿನ ಹಾದಿಯಲ್ಲಿರುವಂತೆ ತೋರುತ್ತದೆ. ಬಿಡುಗಡೆಗೂ ಮುನ್ನವೇ ಆದಿಪುರುಷ 435 ಕೋಟಿ ಗಳಿಸಿದೆ ಎನ್ನಲಾಗಿದೆ. ಚಿತ್ರದ ಬಜೆಟ್ 500 ಕೋಟಿ ಎಂದು ಹೇಳಲಾಗುತ್ತಿದೆ. ವರದಿ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೋಗೆ 250 ಕೋಟಿ ರೂ.ಗೆ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಈ ವರದಿಗಳ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ. 

ಇದನ್ನೂ ಓದಿ: ಹೊಂಬಾಳೆ ಫಿಲಂಸ್ ನಿರ್ಮಾಣದ ‘ಧೂಮಂ’ ಚಿತ್ರದ ಟ್ರೇಲರ್ ಬಿಡುಗಡೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News