ಸಿನೆಮಾ ಹಾಲ್ನಲ್ಲಿ `ಸಾಹೋ` ಬ್ಯಾನರ್ ಹಾಕುವ ವೇಳೆ ಪ್ರಭಾಸ್ ಅಭಿಮಾನಿ ಸಾವು
ಬ್ಯಾನರ್ ಹಾಕುವ ವೇಳೆ ತಂತಿ(wire) ಸಂಪರ್ಕಗೊಂಡು ಆತ ಕಟ್ಟಡದಿಂದ ಬಿದ್ದು ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಖ್ಯಾತ ನಟ ಪ್ರಭಾಸ್ ಅವರ 'ಸಾಹೋ' ಚಿತ್ರದ ಮೆಗಾ ಬಿಡುಗಡೆಗೆ ಮುನ್ನ ತೆಲಂಗಾಣದಲ್ಲಿ ದುರದೃಷ್ಟಕರ ಘಟನೆಯೊಂದು ವರದಿಯಾಗಿದೆ. ಬಾಲಿವುಡ್ ಲೈಫ್ ಡಾಟ್ ಕಾಮ್ ನ ವರದಿಯ ಪ್ರಕಾರ, ಚಲನಚಿತ್ರ ಬ್ಯಾನರ್ ಸರಿಪಡಿಸುವಾಗ ಮಹಬೂಬ್ನಗರದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಮನರಂಜನಾ ಪೋರ್ಟಲ್ ಸ್ಥಳೀಯ ಮಾಧ್ಯಮವನ್ನು ಆಧರಿಸಿ ವರದಿ ಮಾಡಿದೆ. ಈ ಅನಾಹುತದಲ್ಲಿ ಮೃತಪಟ್ಟ ಹುಡುಗನ ಗುರುತು ಇನ್ನೂ ತಿಳಿದುಬಂದಿಲ್ಲ. ಬ್ಯಾನರ್ ಹಾಕುವ ವೇಳೆ ತಂತಿ(wire) ಸಂಪರ್ಕಗೊಂಡು ವಿದ್ಯುದಾಘಾತಕ್ಕೊಳಗಾಗಿ ಕಟ್ಟಡದಿಂದ ಬಿದ್ದು ಯುವಕ ಮೃತ ಪಟ್ಟಿದ್ದಾನೆ ಎಂದು ವರದಿಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಘಟನೆಯ ಬಗ್ಗೆ ಚಿತ್ರದ ನಟ ಪ್ರಭಾಸ್ ಅವರಿಗೆ ಇನ್ನೂ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು ವರದಿ ತಿಳಿಸಿದೆ.
'ಸಾಹೋ' ಆಗಸ್ಟ್ 30, 2019 ರಂದು ಬಿಡುಗಡೆಯಾಗಲಿದೆ. 'ಬಾಹುಬಲಿ' ನಟ ಪ್ರಪಂಚದಾದ್ಯಂತ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿದ್ದಾರೆ.
ಆಕ್ಷನ್ ನಟರಾದ ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್, ವೆನ್ನೆಲಾ ಕಿಶೋರ್, ಮುರ್ಲಿ ಶರ್ಮಾ, ಅರುಣ್ ವಿಜಯ್, ಪ್ರಕಾಶ್ ಬೆಲವಾಡಿ, ಎವೆಲಿನ್ ಶರ್ಮಾ ಮತ್ತು ಚಂಕಿ ಪಾಂಡೆ ಈ ಚಿತ್ರದಲ್ಲಿ ನಟಿಸಿದ್ದಾರೆ.
'ಸಾಹೋ' ಚಿತ್ರವನ್ನು ಸುಜೀತ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ವಿ ವಂಶಿ ಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಲಪತಿ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ.