ಶಾರುಖ್ ಖಾನ್ ಜೊತೆ ಕಣಕ್ಕಿಳಿಯಲು ರೆಡಿ ಆದ ಪ್ರಭಾಸ್...! ಸಲಾರ್ ಟ್ರೈಲರ್ ರಿಲೀಸ್ ಡೇಟ್ ರಿವೀಲ್
Salar: ಪ್ರಭಾಸ್ ಮತ್ತು ಶ್ರುತಿ ಹಾಸನ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
Salar Tariler: ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಎಂಬ ದೊಡ್ಡ ಸಿನಿಮಾವನ್ನು ನೀಡಿದ್ದರು.. ಜೊತೆಗೆ ಅದರ ಎರಡೂ ಭಾಗಗಳನ್ನು ಬ್ಲಾಕ್ಬಸ್ಟರ್ ಹಿಟ್ ಮಾಡಿದರು. ಸದ್ಯ ಈ ನಿರ್ದೇಶಕರ ಮುಂದಿನ ಮುಂಬರುವ ಚಿತ್ರ ಸಲಾರ್. ಕೆಜಿಎಫ್ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್ ಈ ಚಿತ್ರವನ್ನೂ ನಿರ್ಮಿಸಿದೆ.
ಸಲಾರ್ ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಹಲವು ಬಾರಿ ಅನೌನ್ಸ್ ಮಾಡಿ, ಮುಂದೂಡಿದ್ದ ಸಿನಿಮಾ ಈಗ ಕೊನೆಗೂ ಬಿಡುಗಡೆಗೆ ಸಿದ್ಧವಾಗಿದೆ. ಸಲಾರ್ ಚಿತ್ರ ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ತೆಲುಗು, ಹಿಂದಿ, ಕನ್ನಡ, ಮಲಯಾಳಂ ಮತ್ತು ತಮಿಳು ಎಂಬ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ರಿಲೀಸ್ ಆಗುತ್ತಿದೆ.
ಈ ಚಿತ್ರಕ್ಕೆ ಪೈಪೋಟಿ ನೀಡಲು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಡುಂಗಿ ಚಿತ್ರವೂ ತೆರೆಗೆ ಬರಲಿದೆ. ಇವೆರಡೂ ಪ್ಯಾನ್ ಇಂಡಿಯಾ ಚಿತ್ರಗಳಾದ್ದರಿಂದ ದೇಶಾದ್ಯಂತ ಈ ಚಿತ್ರಗಳ ನಿರೀಕ್ಷೆ ಹೆಚ್ಚಿದೆ. ಸಲಾರ್ ರಿಲೀಸ್ ಗೆ ಇನ್ನು 4 ವಾರ ಬಾಕಿ ಇದ್ದು, ಇದೀಗ ಚಿತ್ರದ ಟ್ರೈಲರ್ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ.
ಅದರಂತೆ ಡಿಸೆಂಬರ್ 1 ರಂದು ಸಂಜೆ 7.19ಕ್ಕೆ ಸಲಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಚಿತ್ರದ ಟೀಸರ್ ವೈರಲ್ ಆಗುತ್ತಿದ್ದಂತೆ ಇದೀಗ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ-BBK 10: ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ವಿಶೇಷ ಅಧಿಕಾರ..! ನಾಮಿನೇಷನ್ ಲಿಸ್ಟ್‌ನಲ್ಲಿ ತನಿಷಾ, ಡ್ರೋನ್ ಪ್ರತಾಪ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.