ಪ್ರಭಾಸ್ ಸೇರಿದಂತೆ.. 2023ರಲ್ಲಿ ಗ್ರ್ಯಾಂಡ್ ಕಮ್ ಬ್ಯಾಕ್ ಕೊಟ್ಟ ಮೂವರು ಸ್ಟಾರ್ ಹೀರೋಗಳಿವರು..!
Pan India Stars Hit Come Back: 2023ಕ್ಕೆ ವಿದಾಯ ಹೇಳಿ.. 2024ಕ್ಕೆ ಸ್ವಾಗತಿಸುವ ಸಮಯ ಬಂದಿದೆ. ಈ ವರ್ಷ ಅನೇಕ ಸಿನಿಪ್ರೇಮಿಗಳು ನಿರಾಸೆಯಿಂದೀಚೆ ಬಂದಿರಬಹುದು ಏಕೆಂದರೆ ಬಹಳ ದಿನಗಳಿಂದ ಹಿಟ್‌ಗಾಗಿ ಎದುರು ನೋಡುತ್ತಿದ್ದ ಮೂವರು ಸ್ಟಾರ್ ಹೀರೋಗಳು ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ..
Pan India Stars: 2023 ಚಿತ್ರರಂಗದಲ್ಲೂ ಸಿಹಿ ಮತ್ತು ಕಹಿ ನೆನಪುಗಳನ್ನು ನೀಡಿದೆ.. ಆದರೆ ಇದು ಮೂರು ಸ್ಟಾರ್ ಹಿರಿಯ ನಾಯಕರಿಗೆ ಬೆಸ್ಟ್ ಕಮ್ ಬ್ಯಾಕ್ ನೀಡಿದೆ.. ಹೌದು ಬಹಳ ದಿನಗಳಿಂದ ಫ್ಲಾಪ್‌ಗಳೊಂದಿಗೆ ಒಡನಾಡುತ್ತಿದ್ದ ಸ್ಟಾರ್‌ಗಳಿಗೆ ಈ ವರ್ಷ ಯಶಸ್ವಿ ವರ್ಷವಾಗಿದೆ. ಆದರೆ ಈ ಮೂವರು ಪ್ಯಾನ್ ಇಂಡಿಯಾ ಸ್ಟಾರ್ ಗಳು.. ಮೂವರಿಗೂ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅವರೇ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್.. ಸೂಪರ್ ಸ್ಟಾರ್ ರಜನಿಕಾಂತ್.. ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್.
ಈ ಮೂವರು ಪ್ಯಾನ್ ಇಂಡಿಯಾ ಸ್ಟಾರ್ ಗಳು.. ಕೋಟಿಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಹೀರೋಗಳು.. ಫ್ಲಾಪ್ ಗಳು ಬಂದರೂ.. ಇಮೇಜು ಸ್ವಲ್ಪವೂ ಕಡಿಮೆಯಾಗದ ಸ್ಟಾರ್ ಗಳು.. ಸಖತ್ ಹಿಟ್ ಗಾಗಿ ನಾಲ್ಕೈದು ವರ್ಷ ತಾಳ್ಮೆಯಿಂದ ಕಾದ ಹೀರೋಗಳು. ಸದ್ಯ ಈ ಮೂವರು ಸ್ಟಾರ್‌ಗಳು ತಮ್ಮ ಚಿತ್ರಗಳಿಂದ ಹಿಟ್‌ಗಳನ್ನು ಹೊಡೆಯುವ ಮೂಲಕ ತಮ್ಮ ಹಿಂದಿನ ವೈಭವವನ್ನು ಗಳಿಸಿದ್ದಾರೆ.
ಇದನ್ನೂ ಓದಿ-Kalki 2898 AD : ಕಲ್ಕಿಯಲ್ಲಿ ಭಾರತದ ಭವಿಷ್ಯ ಕಾಣಿಸಲಿದೆ.. ಶೀಘ್ರದಲ್ಲೇ ಟ್ರೈಲರ್ ರಿಲೀಸ್!
ಬಾಹುಬಲಿ ಚಿತ್ರದ ಮೂಲಕ ಪ್ರಭಾಸ್ ವಿಶ್ವದ ಗಮನವನ್ನು ತನ್ನತ್ತ ತಿರುಗಿಸಿದರು... ಆದರೆ ಈ ಚಿತ್ರದ ನಂತರ ಮೂರು ಪ್ಯಾನ್ ಇಂಡಿಯಾ ಚಿತ್ರಗಳು ಪ್ರಭಾಸ್‌ಗೆ ನಿರಾಸೆ ಮೂಡಿಸಿದವು. ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಸಾಹೋ, ರಾಧೆ ಶ್ಯಾಮ್ ಮತ್ತು ಆದಿ ಪುರುಷ ಅವರ ಚಿತ್ರಗಳು ಪ್ಯಾನ್ ಇಂಡಿಯಾ ಚಲನಚಿತ್ರಗಳಾಗಿ ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾದವು, ಆದರೆ ತೀವ್ರ ನಿರಾಸೆಯಾಗುವಂತೆ ಮಾಡಿದವು..
ಸುಮಾರು 6 ವರ್ಷಗಳಿಂದ ಹಿಟ್‌ಗಾಗಿ ಎದುರು ನೋಡುತ್ತಿದ್ದ ಪ್ರಭಾಸ್‌ಗೆ ಸಲಾರ್ ಮತ್ತೆ ಸ್ಟ್ರಾಂಗ್ ಕಮ್ ಬ್ಯಾಕ್ ನೀಡಿದೆ.. ಹೌದು ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಶನ್ ಸಲಾರ್ ಡಿಸೆಂಬರ್ 22 ರಂದು ಚಿತ್ರಮಂದಿರಗಳಿಗೆ ಅಪ್ಪಳಿಸಿ.. ಪ್ರಭಾಸ್ ಗೆ ಮತ್ತೆ ಮೊದಲಿನ ವೈಭವ ತಂದುಕೊಟ್ಟಿತು... ಸದ್ಯ ಆದಾಯಗಳ ಮಹಾಪೂರವೇ ಹರಿದು ಬರುತ್ತಿದ್ದು.. ಮುಂದಿನ ವರ್ಷವೂ ಇದೇ ಗತಿ ಮುಂದುವರಿದರೆ ಪ್ರಭಾಸ್ ವೈಭವ ಮತ್ತೆ ಶುರುವಾಗಲಿದೆ.
ಇನ್ನು ತಲೈವಾ... ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಇತ್ತೀಚಿಗೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ.. ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸತತವಾಗಿ ವಿಫಲವಾದಾಗ, ಅವರು ಸಾಕಷ್ಟು ತೊಂದರೆ ಅನುಭವಿಸಿದರು... ಆದರೆ ರಜನಿಕಾಂತ್ ಸಿನಿಮಾ ಮಾಡುವುದನ್ನು ನಿಲ್ಲಿಸಲಿಲ್ಲ. ತಮ್ಮ 50 ವರ್ಷಗಳ ಚಿತ್ರರಂಗದಲ್ಲಿ ತಮಿಳು, ಹಿಂದಿ, ಕನ್ನಡ, ತೆಲುಗು ಮತ್ತು ಬಂಗಾಳಿ ಭಾಷೆಗಳಲ್ಲಿ 169ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ..
ಇದನ್ನೂ ಓದಿ-ಬಾಕ್ಸಾಫೀಸ್ ನಲ್ಲಿ 'ಡಂಕಿ' ಧಮಾಕ...7 ದಿನದಲ್ಲಿ 305 ಕೋಟಿ ಬಾಚಿದ ಕಿಂಗ್ ಖಾನ್ ಸಿನಿಮಾ
ರೋಬೋಟ್ ಸಿನಿಮಾ ಹಿಟ್ ಆದ ನಂತರ ರಜನಿಕಾಂತ್ ಅವರ ರೇಂಜ್ ನಲ್ಲಿ ಮತ್ತೊಂದು ಸಿನಿಮಾ ಬಂದಿಲ್ಲ.. ಆದರೆ ಇದರ ಮುಂದಿನ ಸಿನಿಮಾಗಳು ರಜನಿಗೆ ಹೇಳಿಕೊಳ್ಳುವಷ್ಟು ಗೆಲುವನ್ನು ತಂದುಕೊಡಲಿಲ್ಲ.. ಸದ್ಯ ಇವರಿಗೆ ಸುಮಾರು 5 ವರ್ಷಗಳ ನಂತರ 2023ರಲ್ಲಿ ಲಕ್ ಬಂದಿದೆ ಎಂದು ಹೇಳಬಹುದು... ಕಾರಣ ಜೈಲರ್ ಸಿನಿಮಾ.. ಈ ಸಿನಿಮಾ ಹಿಟ್ ಅಲ್ಲ.. ಬ್ಲಾಕ್ ಬಸ್ಟರ್ ಹಿಟ್ ಆಯಿತು.. ಇದು ಸೂಪರ್‌ಸ್ಟಾರ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರ ಸುಮಾರು 600 ಕೋಟಿ ಕಲೆಕ್ಷನ್ ಮಾಡಿ ರಜನಿಕಾಂತ್ ಗೆ ದಿ ಬೆಸ್ಟ್ ಕಮ್‌ಬ್ಯಾಕ್ ನೀಡಿತು. ಇದಲ್ಲದೆ, ರಜನಿಕಾಂತ್ ಈ ಚಿತ್ರಕ್ಕಾಗಿ 210 ಕೋಟಿ ಸಂಭಾವನೆ ಪಡೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಗುರುತಿಸಲ್ಪಟ್ಟಿದ್ದಾರೆ.
ಬಾಲಿವುಡ್ ತೆರೆಯ ಮೇಲೆ ಮಿಂಚಿದ್ದ ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್.. ಧಾರಾವಾಹಿ ನಟನಾಗಿ ವೃತ್ತಿ ಜೀವನ ಆರಂಭಿಸಿದರು.. ಹೀರೋ ಆಗಿ ಬದಲಾದರು..ಬಾಲಿವುಡ್‌ನಲ್ಲಿ ಅಲೆ ಎಬ್ಬಿಸಿದರು.. ಚೆನ್ನೈ ಎಕ್ಸ್ ಪ್ರೆಸ್ ನಂತರ ಮುಂದೆ ಅವರೂ ಸತತ ಫ್ಲಾಪ್‌ಗಳಿಂದ ಕಂಗೆಟ್ಟಿದ್ದರು.. ಆದರೆ ಸರಿಯಾಗಿ 9 ವರ್ಷಗಳ ನಂತರ 2023 ರಲ್ಲಿ ಶಾರುಖ್ ಪಠಾಣ್ ಜವಾನ್ ಜೊತೆಗೆ ತಮ್ಮ ವೃತ್ತಿಜೀವನವನ್ನು ಮರುಸ್ಥಾಪಿಸಿದರು... ಸದ್ಯ ಶಾರುಕ್ ಅವರ ಡಂಕಿ ಸಿನಿಮಾ ರಿಲೀಸ್ ಆಗಿ ಭಾರೀ ಸದ್ದು ಮಾಡುತ್ತಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.