Salaar ‌Movie Review: ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಮೊದಲ ಶೋಗಳು ಅಮೆರಿಕದಲ್ಲಿ ನಡೆದಿದೆ. ಮೊದಲಿನಿಂದಲೂ ಈ ಸಿನಿಮಾ ಸಾಕಷ್ಟು ಕ್ರೇಜ್ ಹುಟ್ಟುಹಾಕಿತ್ತು. ಹೈದರಾಬಾದ್‌ನ ಕೆಲವು ಥಿಯೇಟರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಜನರು ಮುಗಿಬಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರ ದಂಡೇ ಬರೆಬೇಕಾಯಿತು.  


COMMERCIAL BREAK
SCROLL TO CONTINUE READING

ಬಾಹುಬಲಿ ನಂತರ ಪ್ರಭಾಸ್‌ಗೆ ನಿರೀಕ್ಷಿತ ಯಶಸ್ಸು ಸಿಗದ ಕಾರಣ ತೆಲುಗು ಪ್ರೇಕ್ಷಕರು ಈ ಸಿನಿಮಾ ಸೂಪರ್‌ ಹಿಟ್‌ ಆಗಲೆಂದು ಕಾಯುತ್ತಿದ್ದಾರೆ. ಸಲಾರ್ ಮೊದಲ ಶೋನಿಂದಲೇ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಮೊದಲೇ ನಿರೀಕ್ಷಿಸಿದಂತೆ ಇದು ಡಾರ್ಲಿಂಗ್ ಪ್ರಭಾಸ್‌ಗೆ ಮಾಸ್ ಕಮ್ ಬ್ಯಾಕ್ ಎಂದು ನೆಟಿಜನ್‌ಗಳು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಭರವಸೆ ಉಳಿಸಿಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. 


ಇದನ್ನೂ ಓದಿ: Aaradhya Bachchan: 12 ವರ್ಷದ ಆರಾಧ್ಯ ಬಚ್ಚನ್‌ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ.! 


ಭಾರೀ ನಿರೀಕ್ಷೆಗಳ ನಡುವೆ ಇಂದು ಸಲಾರ್ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ. ತೆಲುಗು ಅಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಯಿತು. ಪ್ರದರ್ಶನಗಳು ಈಗಾಗಲೇ US ನಲ್ಲಿ ಪ್ರೀಮಿಯರ್ ಆಗಿವೆ. ಅದೇ ರೀತಿ ತೆಲಂಗಾಣದಲ್ಲೂ ರಾತ್ರಿಯಿಂದಲೇ ಶೋಗಳು ನಡೆಯುತ್ತಿವೆ. ಇದರಿಂದ ಸಿನಿಮಾ ನೋಡಿದವರು ಎಕ್ಸ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಸಲಾರ್‌ ಸಿನಿಮಾದಲ್ಲಿ ಪ್ರಭಾಸ್ ಅವರ ಎಲ್ಲಾ ಆಕ್ಷನ್ ಬ್ಲಾಕ್‌ಗಳು ವಿಭಿನ್ನ ಮಟ್ಟದಲ್ಲಿವೆ ಎಂದು ಪೋಸ್ಟ್ ಮಾಡಿದ್ದಾರೆ. ಪ್ರಭಾಸ್ ಅವರ ಆರಂಭಿಕ ದೃಶ್ಯವು ವಿಭಿನ್ನ ಲೆವೆಲ್ ಆಗಿದೆ.. ಪ್ರಿ-ಇಂಟರ್ವೆಲ್ ವೇಳೆ ಗೂಸ್ ಬಂಪ್ಸ್ ಫಿಕ್ಸ್.. ಇಂಟರ್ವಲ್ ವೇಳೆ ಡೆತ್ ಮಾಸ್ ಎಂದು ಪೋಸ್ಟ್ ಮಾಡಿದ್ದಾರೆ.‌ 


ಇದನ್ನೂ ಓದಿ: Namratha Gowda: ಬಿಗ್ ಬಾಸ್ ನಮ್ರತಾ ಗೌಡ ಅವರ ತಾಯಿ ಯಾರು ಗೊತ್ತೇ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 


ಬಹಳ ವರ್ಷಗಳ ನಂತರ ಮತ್ತೆ ಕಾಲರ್ ಹಾರಿಸಿಕೊಂಡು ಥಿಯೇಟರ್ ನಿಂದ ಹೊರ ಬಂದೆವು ಎಂದು ಪ್ರಭಾಸ್‌ ಫ್ಯಾನ್ಸ್‌ ಹೇಳುತ್ತಿದ್ದಾರೆ. ಇದೆಲ್ಲ ನೋಡಿದರೆ ಪ್ರಭಾಸ್‌ ಅವರಿಗೆ ಸಲಾರ್‌ ಹಿಟ್‌ ನೀಡುವುದು ಖಚಿತವಾಗಿದೆ.