Prabhas marriage : ಪೌರಾಣಿಕ ಚಿತ್ರ ʼಆದಿ ಪುರುಷʼದಲ್ಲಿ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನನ್ ನಟಿಸಿದ್ದಾರೆ. ಬಾಲಿವುಡ್ ನಿರ್ದೇಶಕ ಓಂ ರಾವುತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೃತಿ ಸನನ್ ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣಾಸುರನ ಪಾತ್ರವನ್ನು ನಟಿಸಿದ್ದಾರೆ. 


COMMERCIAL BREAK
SCROLL TO CONTINUE READING

ಆದಿಪುರುಷ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಜೂನ್ 16 ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದ ಪ್ರಚಾರ ಕಾರ್ಯ ಶುರುವಾಗಿದೆ. ಇದರ ಭಾಗವಾಗಿ ತಿರುಪತಿಯಲ್ಲಿ ದೊಡ್ಡ ಮಟ್ಟದ ಪ್ರೀ ರಿಲೀಸ್ ಇವೆಂಟ್‌ ಆಯೋಜಿಸಲಾಗಿತ್ತು. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ (ಎಸ್‌ವಿಯು) ಕ್ರೀಡಾಂಗಣದಲ್ಲಿ ಸಮಾರಂಭ ಅದ್ದೂರಿಯಾಗಿ ನಡೆಯಿತು. 


ಇದನ್ನೂ ಓದಿ: ಕಪಿಲ್ ಶರ್ಮಾ, ಜಾನಿ ಲಿವರ್ ಅಲ್ಲ.. ಭಾರತದ ಶ್ರೀಮಂತ ಕಾಮಿಡಿಯನ್‌ ದಕ್ಷಿಣ ಭಾರತದ ಈ ಹಾಸ್ಯ ನಟ


‘ಆದಿ ಪುರುಷ’ ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ಪ್ರಭಾಸ್ ತಮ್ಮ ಮದುವೆ ಬಗ್ಗೆ ಪ್ರಸ್ತಾಪ ಮಾಡಿದರು. ವೇದಿಕೆಯ ಮೇಲೆ ಪ್ರಭಾಸ್ ಮಾತನಾಡುತ್ತಿದ್ದಾಗ ಅಭಿಮಾನಿಗಳು ಯಾವಾಗ ಮದುವೆಯಾಗುತ್ತೀರಿ ಎಂದು  ಕೇಳಿದ್ರು, ಆಗ ಡಾರ್ಲಿಂಗ್‌ ಯಾವಾಗ ಎಂದು ಹೇಳದೆ ತಿರುಪತಿಯಲ್ಲಿ ಖಂಡಿತಾ ಮದುವೆಯಾಗುತ್ತೇನೆ ಎಂದು ಉತ್ತರಿಸಿದರು. 


ವಧು ಮತ್ತು ದಿನಾಂಕ ತಿಳಿದಿಲ್ಲವಾದರೂ, ಸ್ಥಳ ತಿರುಪತಿ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಪ್ರಭಾಸ್ ಅಭಿಮಾನಿಗಳು ಸದ್ಯದಲ್ಲೇ ಮದುವೆಯಾಗ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಗಂಧದ ಗುಡಿ ಪ್ರವೇಶಿಸಿದ ಮುಂಬೈ ಹುಡುಗಿ ಪ್ರಾಚಿ ಶರ್ಮ..! ಫೋಟೋಸ್‌ ನೋಡಿ


ಇನ್ನು ಪ್ರಭಾಸ್‌ ಮದುವೆ ಸ್ಥಳ ಪ್ರಸ್ತಾಪ ಬೆನ್ನಲ್ಲೆ ಕೃತಿ ಸನೋನ್ ಹೆಸರು ಮುಂಚೂಣಿಗೆ ಬಂದಿದೆ. ಪ್ರಭಾಸ್‌ ಕೃತಿ ಸನೋನ್‌ ಮದುವೆಯಾಗ್ತಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದ್ರೆ, ಕೆಲ ನೆಟ್ಟಿಜನ್ಸ್‌ ಇಲ್ಲಾ ಡಾರ್ಲಿಂಗ್‌ ಅನುಷ್ಕಾ ಶೆಟ್ಟಿ ಕೈ ಹಿಡಿಯಲಿದ್ದಾರೆ ಎಂದು ವಾದಿಸುತ್ತಿದ್ದಾರೆ. ಸದ್ಯ ಈ ಪ್ರಶ್ನೆಗೆ ಪ್ರಭಾಸ್‌ ಅವರೇ ಉತ್ತರ ನೀಡಿಬೇಕಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.