Prajwal Devaraj News: ನಟ ಪ್ರಜ್ವಲ್​ ದೇವರಾಜ್ ಬಗ್ಗೆ ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದು, ಕುಟುಂಬಸ್ಥರು ಗರಂ ಆಗಿದ್ದಾರೆ. ಪ್ರಜ್ವಲ್​ ಆರೋಗ್ಯವಾಗಿದ್ದಾರೆ. ಯಾರೋ ಕಿಡಿಗೇಡಿಗಳು ಸೋಶಿಯಲ್​ ಮೀಡಿಯಾದಲ್ಲಿ ಪ್ರಜ್ವಲ್ ಕುರಿತು ಇಂತಹ ಕೆಟ್ಟ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ನಟ ಪ್ರಜ್ವಲ್ ಫೋಟೋ ದುರ್ಬಳಕೆ ಮಾಡಿಕೊಂಡು ‘ಪ್ರಜ್ವಲ್​ ದೇವರಾಜ್​ ಇನ್ನಿಲ್ಲ. ಓಂ ಶಾಂತಿ’ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಇದರಿಂದ ಪ್ರಜ್ವಲ್​ ದೇವರಾಜ್ ಫ್ಯಾನ್ಸ್‌ ಆತಂಕಗೊಂಡಿದ್ದರು. ಪ್ರಜ್ವಲ್​ ದೇವರಾಜ್ ಫೋಟೋ ವೈರಲ್‌ ಆಗ್ತಿದ್ದಂತೆ ಅವರ ಕುಟುಂಬದವರ ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ ಓದಿ: Ravichandran Birthday: ಅಪ್ಪನಿಗಾಗಿ ಪ್ರೀತಿಸಿದ ಆ ನಟಿಯನ್ನೇ ಬಿಟ್ಟ ನಟ ರವಿಚಂದ್ರನ್.. ಆ ಚೆಲುವೆ ಯಾರು ಗೊತ್ತಾ?


"‘ಪ್ರಜ್ವಲ್ ದೇವರಾಜ್ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದಲ್ಲಿ ಏನೂ ಬದಲಾವಣೆಗಳಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಹರಡಿರುವುದು ಸುಳ್ಳು ಸುದ್ದಿ. ಅಭಿಮಾನಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪ್ರಜ್ವಲ್ ಪೋಟೋಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ರೀತಿಯ ವದಂತಿಗಳನ್ನು ಹಬ್ಬಿಸುವುದು ಸರಿಯಲ್ಲ. ಇದು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆತಂಕಕ್ಕೆ ಕಾರಣವಾಗುತ್ತದೆ" ಎಂದು ಪ್ರಜ್ವಲ್ ಆಪ್ತರು ಸ್ಪಷ್ಟನೆ ನೀಡಿದ್ದಾರೆ. 


ಪ್ರಜ್ವಲ್ ದೇವರಾಜ್ ಬಗ್ಗೆ ಇಂತಹ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು ನೀಡಲು ಕುಟುಂಬದವರು ಮುಂದಾಗಿದ್ದಾರೆ ಎನ್ನಲಾಗ್ತಿದೆ. 


ಇದನ್ನೂ ಓದಿ: ನಟಿ ಖುಷ್ಬೂ ಮೇಲೆ ಹೆತ್ತ ತಂದೆಯಿಂದಲೇ ನಡೆದಿತ್ತು ಲೈಂಗಿಕ ದೌರ್ಜನ್ಯ !?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.