Sandalwood News: 'ಕರಾವಳಿ' ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ. 


COMMERCIAL BREAK
SCROLL TO CONTINUE READING

ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಜಗತ್ತಿಗೆ ಎಂಟ್ರಿ ಕೊಡುವ ಎರಡು ಹೊಸ ಜೀವಗಳನ್ನು ನೋಡಬಹುದು. ತಾಯಿ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯದ ಜೊತೆಗೆಯೇ ಕೋಣ ಕೂಡ ತನ್ನ ಮಗುವಿಗೆ ಜನ್ಮ ನೀಡುತ್ತಿದೆ. ಈ ಟೀಸರ್ ನೋಡ್ತಿದ್ರೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಬಗ್ಗೆ ಇರುವ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೋತ್ತಾಗುತ್ತಿದೆ. ಬ್ಯಾಗ್ರೌಂಡ್‌ನಲ್ಲಿ ಬರುವ ಯಕ್ಷಗಾನದ ಧ್ವನಿ ಟೀಸರ್‌ನ ತೂಕವನ್ನು ಹೆಚ್ಚಿಸುವ ಜೊತೆಗೆ ಕುತೂಹಲ ದುಪ್ಪಟ್ಟು ಮಾಡಿದೆ. 


ಇದನ್ನೂ ಓದಿ-ಅವಿ-ಪವಿ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ! ಈತ ಭಾರತೀಯನೇ ಅಲ್ಲ…


ಕರಾವಳಿ ಎಂದಮೇಲೆ ಆ ಭಾಗದ ಸಂಸ್ಕೃತಿ, ದೈವ, ಯಕ್ಷಗಾನ ಮುಖ್ಯವಾಗಿ ಕಂಬಳ ಸೇರಿದಂತೆ ಅಲ್ಲಿನ ಆಚಾರ ವಿಚಾರ ಎಲ್ಲವನ್ನು ಈ ಸಿನಿಮಾದಲ್ಲಿ ನೋಡುವ ಕಾತರದಲ್ಲಿದ್ದಾರೆ ಅಭಿಮಾನಿಗಳು. ಇನ್ನು ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. 


ಸದ್ಯ ರಿಲೀಸ್ ಆಗಿರುವ ಟೀಸರ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರ ಪಾತ್ರ ನೋಡಿದ್ರೆ ಇದುವರೆಗೂ ಅವರು ಮಾಡಿರುವ ಪಾತ್ರಗಳಲ್ಲಿಯೇ ಅತ್ಯಂತ ವಿಭಿನ್ನವಾಗಿದೆ. ಟೀಸರ್ ನೋಡ್ತಿದ್ರೆ ಪ್ರಜ್ವಲ್ 40ನೇ ಸಿನಿಮಾ ತುಂಬಾ ವಿಶೇಷವಾಗಿ ಮೂಡಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುದರಲ್ಲಿ ಎರಡು ಮಾತಿಲ್ಲ. ಇದೀಗ ಟೀಸರ್ ಮೂಲಕ ಸದ್ದು ಮಾಡುತ್ತಿರುವ 'ಕರಾವಳಿ' ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಶೂಟಿಂಗ್‌ಗೆ ಹೊರಡಲಿದೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.


ಇದನ್ನೂ ಓದಿ-ಲೀಲಾವತಿಯವರ ಆಸ್ಪತ್ರೆ ಉದ್ಘಾಟಿಸಿದ್ದು ನನಗೆ ನೆಮ್ಮದಿ ಕೊಟ್ಟ ಕೆಲಸ: ಡಿಸಿಎಂ ಡಿ.ಕೆ.ಶಿವಕುಮಾರ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ