Prajwal Devaraj: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇದೇ ಮೊದಲ ಬಾರಿಗೆ ಹಾರರ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾರರ್ ಸಿನಿಮಾ ನೋಡೋಕೆ ಭಯ ಪಡುವ ನಟ ಪ್ರಜ್ವಲ್ ದೇವರಾಜ್ ಈಗ ಹಾರರ್ ಸಿನಿಮಾದಲ್ಲಿಯೇ ಮಿಂಚಿದ್ದಾರೆ. 'ಮಮ್ಮಿ' ಮತ್ತು 'ದೇವಕಿ' ಖ್ಯಾತಿಯ ನಿರ್ದೇಶಕ ಲೋಹಿತ್ ಸಾರಥ್ಯದಲ್ಲಿ ಮೂಡಿ ಬಂದಿರುವ 'ರಾಕ್ಷಸ' ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಬ್ಬರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚಿಗಷ್ಟೇ 'ರಾಕ್ಷಸ' ಸಿನಿಮಾತಂಡ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಇದೀಗ ಭರ್ಜರಿ ಟೀಸರ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ. ಸೈಲೆಂಟಾಗಿ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಇದೀಗ ಪ್ರಮೋಷನ್ ಕಾರ್ಯಗಳಲ್ಲಿ ಬಿಜಿಯಾಗಿದೆ.


ರಾಕ್ಷಸ ಟೀಸರ್ ಅನ್ನು ಪ್ರಸನ್ನ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ನಟಿ ಪ್ರಿಯಾಂಕ ಉಪೇಂದ್ರ 'ರಾಕ್ಷಸ' ಟೀಸರ್ ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಜೊತೆಗೆ ನಟ ಪೃಥ್ವಿ ಅಂಬರ್, ಡೈಲಾಗ್ ರೈಟರ್ ಮಾಸ್ತಿ, ನಟ ಶಿವರಾಜ್ ಕೆಆರ್ ಪೇಟೆ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು ರಾಕ್ಷಸ ಟೀಸರ್ ನೋಡಿ ಮೆಚ್ಚಿಕೊಂಡರು. ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡ ಒಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿತು.


ವಿಶೇಷ ಎಂದರೆ ಈ ಸಿನಿಮಾ ಹಾರರ್ ಜೊತೆಗೆ ಟೈಮ್ ಲೂಪ್ ಕಾನ್ಸೆಪ್ಟನ್ನು ಅಳವಡಿಸಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ಇಂಥದೊಂದು ಹೊಸ ಪ್ರಯತ್ನದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ನಿರ್ದೇಶಕ ಲೋಹಿತ್ ಮತ್ತು ನಟ ಪ್ರಜ್ವಲ್ ದೇವರಾಜ್. 


ಇದನ್ನೂ ಓದಿ: ಬಿಕಿನಿ ತುಟ್ಟು ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ..ಈಕೆಯ ವಯಸ್ಸೆಷ್ಟು ಗೆಸ್‌ ಮಾಡಿ


ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ 'ರಾಕ್ಷಸ ನಾಗಿ ಪ್ರಜ್ವಲ್ ದೇವರಾಜ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ನಿರ್ದೇಶಕ ಲೋಹಿತ್ ವಿಭಿನ್ನ ಪ್ರಯತ್ನ ಮಾಡುತ್ತಿರುತ್ತಾರೆ. ಟೀಸರ್ ಅದ್ಭುತವಾಗಿದೆ. ಸಿನಿಮಾ ತಂಡಕ್ಕೆ ಒಳ್ಳೆದಾಗಲಿ' ಎಂದರು. ನಟ ಪೃಥ್ವಿ ಅಂಬರ್ ಮಾತನಾಡಿ, 'ನಾನು ಪ್ರಜ್ವಲ್ ದೇವರಾಜ್ ಅವರ ಅಭಿಮಾನಿ, ಅವರನ್ನ ಅಣ್ಣ ಇಂದೇ ಕರೆಯುತ್ತೇನೆ. ನಿರ್ದೇಶಕ ಲೋಹಿತ್ ಉತ್ತಮ ಕೆಲಸ ತೆಗಿಸುತ್ತಾರೆ' ಎಂದರು.


ಸಂಭಾಷಣೆಕಾರ ಮಾಸ್ತಿ ಮಾತನಾಡಿ, 'ನಿರ್ದೇಶಕ ಲೋಹಿತ್ ಗೆ ಇಂಡಸ್ಟ್ರಿಯಲ್ಲಿ ಗಾಡ್ ಫಾದರ್ ಅಂತ ಯಾರು ಇಲ್ಲ. ಆದರೆ ನಟಿ ಪ್ರಿಯಾಂಕ ಉಪೇಂದ್ರ ಅವರು ಲೋಹಿತ್ ಅವರ ಎಲ್ಲಾ ಸಿನಿಮಗಳಿಗೂ ಬೆಂಬಲಿಸುತ್ತಿರುವುದು ಖುಷಿಯ ವಿಚಾರ. ಇನ್ನು ಪ್ರಜ್ವಲ್ ನನ್ನ ಗೆಳೆಯ, ಸಿನಿಮಾಗೆ ಒಳ್ಳೇಯದಾಗಲಿ. ಉತ್ತಮ ಸಿನಿಮಾ ಕೊಟ್ಟರೆ ಖಂಡಿತವಾಗಿಯೂ ಜನ ಚಿತ್ರಮಂದಿರಕ್ಕೆ ಬರ್ತಾರೆ' ಎಂದರು. ಇನ್ನು ಶಿವರಾಜ್ ಕೆಆರ್ ಪೇಟೆ ಮಾತನಾಡಿ, 'ರಾಕ್ಷಸ ಟೀಸರ್ ಭಯ ಹುಟ್ಟಿಸುತ್ತಿದೆ. ಪ್ರಜ್ವಲ್ ದೇವರಾಜ್ ಮುದ್ದು ರಾಕ್ಷಸ. ಈ ಚಿತ್ರದ ಮೂಲಕ ಮತ್ತಷ್ಟು ಜನ ಚಿತ್ರಮಂದಿರಕ್ಕೆ ಬರುವಂತಾಗಲಿ' ಎಂದರು.


ಪ್ರಜ್ವಲ್ ದೇವರಾಜ್ ಮಾತನಾಡಿ, 'ನನಗೆ ಹಾರರ್ ಸಿನಿಮಾ ಎಂದರೆ ತುಂಬಾ ಭಯ. ನಾನು ಹೆಂಡತಿ ಸೆರಗಿನ ಹಿಂದೆ ಬಚ್ಚಿಟ್ಟುಕೊಂಡು ಹಾರರ್ ಸಿನಿಮಾ ನೋಡ್ತೀನೆ. ಆದರೆ ಈಗ ನಾನೆ ಹಾರರ್ ಸಿನಿಮಾದಲ್ಲೇ ನಟಿಸಿದ್ದೇನೆ ಇದಕ್ಕೆ ಕಾರಣ ಲೋಹಿತ್. ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ' ಎಂದರು. 


ಇನ್ನು ನಿರ್ದೇಶಕ ಲೋಹಿತ್ ಮಾತನಾಡಿ 'ನನ್ನ ಪಾಲಿಗೆ ಇದು ಸ್ಪೆಷಲ್ ಸಿನಿಮಾ. ಚಿತ್ರಮಂದಿರಗಳಲ್ಲಿ ಅತ್ಯುತ್ತಮ  ಅನುಭವ ನೀಡಲಿದೆ. ಕಂಪ್ಲೀಟ್ ಸಿನಿಮಾ ವಿಜ್ಯುವಲ್ ಎಫೆಕ್ಟ್ ಮೇಲೆಯೇ ನಡೆಯಲಿದೆ' ಎಂದರು.


ಇದನ್ನೂ ಓದಿ: ಖ್ಯಾತ ನಟಿಯ ಹುಟ್ಟುಹಬ್ಬದಂದು ಮಾಜಿ ಪ್ರಿಯಕರನಿಂದ ಗಿಫ್ಟ್‌ಗಳ ಸುರಿಮಳೆ..100 ಐ ಫೋನ್‌..ದುಬಾರಿ ಆಸ್ಪತ್ರೆ ಅಷ್ಟೆ ಅಲ್ಲ, ಲಿಸ್ಟ್‌ ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ..!


ರಾಕ್ಷಸ ಸಿನಿಮಾವನ್ನು ಸುಮಾರು 55 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸಂಪೂರ್ಣ ಚಿತ್ರೀಕರಣ ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿ ಮಾಡಿರುವುದು ವಿಶೇಷ. ಅಂದಹಾಗೆ ಮೊದಲ ಬಾರಿಗೆ ವರ್ಲ್ಡ್ ಸಿನಿಮಾದಲ್ಲಿ ಹಾರಾರ್ ಟೈಂಲೂಪ್ ವರ್ಷನ್ ಟ್ರೈ ಮಾಡಿದ್ದಾರೆ ನಿರ್ದೇಶಕ ಲೋಹಿತ್.


ಇನ್ನು ಈ ಸಿನಿಮಾದಲ್ಕಿ ಪ್ರಜ್ವಲ್ ಜೊತೆಯಾಗಿ ಅರುಣ್ ರಾಥೋಡ್, ಶ್ರೀಧರ್,ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ ಜಯಂತ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. 


ಶಾನ್ವಿ ಎಂಟರ್ಪ್ರೈಸಸ್ ಅಡಿಯಲ್ಲಿ ಪ್ರದೀಪ್ ಮಹೀಶಿ ಪ್ರಸೆಂಟ್ಸ್ ನಲ್ಲಿ ದೀಪು ಬಿ ಎಸ್, ನವೀನ್ ಗೌಡ ಹಾಗೂ ಮಾನಸ ಅವರು ರಾಕ್ಷಸ ಸಿನಿಮಾ ನಿರ್ಮಾಣ ಮಾಡಿದ್ದಾರೆ.  ಇಷ್ಟು ದಿನಗಳ ಕಾಲ ಕಮರ್ಷಿಯಲ್ ಚಿತ್ರಗಲ್ಲಿ ಕಾಣಿಸಿಕೊಳ್ತಿದ್ದ ಪ್ರಜ್ವಲ್ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಹಾರಾರ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.