ಸಿಂಪಲ್ ಮ್ಯಾರೇಜ್ಗೆ ರೆಡಿಯಾದ ಪ್ರಥಮ್: ಒಳ್ಳೆ ಹುಡುಗನ ಮದುವೆ ಯಾವತ್ತು ಗೊತ್ತೇ?
Olle Huduga Pratham: ಕನ್ನಡ ಕಿರುತೆರೆಯ ಬಿಗ್‌ಬಾಸ್ ಕನ್ನಡ ಸೀಸನ್ 4ರ ವಿಜೇತ ನಟ ಪ್ರಥಮ್, ನಿಶ್ಚಿತಾರ್ಥವಾಗಿ ಐದು ತಿಂಗಳ ಬಳಿಕ ಹಸೆಮೆಣೆ ಏರಲು ತಯರಾಗಿದ್ದು, ಮದುವೆ ಡೇಟ್ ಫಿಕ್ಸ್ ಆಗಿದ್ದರ ಬಗ್ಗೆ ಹಂಚಿಕೊಂಡಿದ್ದಾರೆ.
Actor Pratham Marriage Date: ಕನ್ನಡ ಕಿರುತೆರೆಯ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಒಳ್ಳೆ ಹುಡುಗ ಎಂದು ಹೇಳಿಕೊಂಡು, ಸದ್ಯ ಅದೇ ಹೆಸರಿನಿಂದ ಜನಪ್ರಿಯರಾಗಿ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟು, ಕನ್ನಡಿಗರಿಗೆ ಚಿರಪರಿಚಿತರಾದ ಪ್ರಥಮ್ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಒಳ್ಳೆ ಹುಡುಗ ಪ್ರಥಮ್ ಕಳೆದ ಜೂನ್ ತಿಂಗಳ 12ನೇ ತಾರೀಖಿನಂದು ಮಂಡ್ಯದ ಭಾನುಶ್ರೀ ಎಂಬುವವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಿಶ್ಚಿತಾರ್ಥವಾದ ಐದು ತಿಂಗಳ ಬಳಿಕ ಹಸೆಮಣೆ ಎರಲು ಈ ಜೋಡಿ ತಯಾರಾಗಿದೆ. ಈ ಬಗ್ಗೆ ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದಾರೆ
ಮುಂದಿನ ವಾರ ಪ್ರಥಮ್ ಹಸೆಮಣೆ ಏರಲಿದ್ದು, ಅಂದರೆ ನವೆಂಬರ್ ತಿಂಗಳಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಬಗ್ಗೆ ಇವರ ಆಹ್ವಾನ ಸಕತ್ ಸದ್ದು ಮಾಡ್ತಿದ್ದು, ಮದುವೆ ಬಗ್ಗೆ "ನೆಕ್ಟ್ ವೀಕ್ ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಮದುವೆ ಆಹ್ವಾನ ತಲುಪಿಸೋದೇ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೇಸೆಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಿ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ, ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲಿಯೇ ಹಾರೈಸಿ" ಎಂದು ಪ್ರಥಮ್ ಟ್ವೀಟ್ ಮಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದಂದು ಬಿಡುಗಡೆಯಾಯಿತು "ಭೈರಾದೇವಿ" ಚಿತ್ರದ ಟೀಸರ್ ಹಾಗೂ "ಅಜಾಗ್ರತ" ಚಿತ್ರದ ಪೋಸ್ಟರ್
ನಟ ಪ್ರಥಮ್ ಮೊದಲಿನಿಂದಲೂ ಹಳ್ಳಿ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳಿದ್ದು, ಅದರಂತೆ ಮಂಡ್ಯ ಮೂಲದ ಭಾನುಶ್ರೀ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮಂಡ್ಯ ಪಕ್ಕದ ಹಳ್ಳಿಯಲ್ಲಿ ಪ್ರಥಮ್- ಭಾನುಶ್ರೀ ನಿಶ್ಚಿತಾರ್ಥ್ ಬಹಳ ಸರಳವಾಗಿ ನೆರವೇರಿತ್ತು."ಒಂದು ಸುಂದರ ಕ್ಷಣ. ಎಂಗೇಜ್‌ಮೆಂಟ್ ಆಯ್ತು, ಯಾವ ಆಡಂಬರವಿಲ್ಲದೆ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗಿರೋಕೆ ಇಷ್ಟ. ಮದುವೆ ಎಷ್ಟು ಅದ್ಧೂರಿ ಅನ್ನೋಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹಾಗೇ ಇರ್ತೀನಿ. ಹರಸುವವರು ಅಲ್ಲಿಂದಲೇ ಹರಸಿ" ಎಂದಿದ್ದರು.
ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಬಗ್ಗೆಯೂ ಅನೇಕರು ಕೊಂಕು ತೆಗೆದಿದ್ದಕ್ಕೆ, ಪ್ರಥಮ್ ಉತ್ತರ ನೀಡಿದ್ದರು."ಎಂಗೇಜ್‌ಮೆಂಟ್ ಮೊನ್ನೆ ಆಯ್ತು. ನಾಲ್ಕು ಜನರ ಕರೆದು ಊಟ ಹಾಕಿಸಬೇಕಿತ್ತು ಅನ್ನೋದು ಹಲವರ ಅಭಿಪ್ರಾಯ. ಇನ್ನೆರಡು ದಿನದಲ್ಲಿ ವೃದ್ಧಾಶ್ರಮ ವೊಂದರ 138 ಜನರಿಗೆ ಸಿಹಿ ಊಟ. ಚಳಿಗಾಲದ ಆಸರೆಗಾಗಿ ಒಂದು ಶಾಲು. ಮದುವೆ ಅವ್ರಿಷ್ಟದಂತೆ ಅವ್ರು ಮಾಡಬಹುದು. ನನ್ನ ಕಡೆಯಿಂದ ಒಂದು 200 ಜನರಿಗೆ ನಮ್ಮೂರು ಕೊಳ್ಳೇಗಾಲ, ಹನೂರಲ್ಲಿ ಬೀಗರ ಊಟ. ಇಷ್ಟೇ ನನ್ನ ಮದುವೆಯ ಮೆನು" ಎಂದು ತಿರುಗೇಟು ನೀಡಿದ್ದರು. ಒಟ್ನಲ್ಲಿ ಒಳ್ಳೆ ಹುಡ್ಗ ಪ್ರಥಮ್ ತಮ್ಮ ಆಸೆಯಂತೆ ಮದುವೆಯಾಗಿ ಖುಷಿಯಾಗಿರಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.