ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನೂತನ ಹೀರೊ ಪ್ರವೀರ್ ಶೆಟ್ಟಿ..!
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ `ಸೈರನ್` ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ.
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ "ಸೈರನ್" ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. "ಉಪಾಧ್ಯಕ್ಷ" ಚಿಕ್ಕಣ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದರು.
ನಿರ್ಮಾಪಕ ಉಮಾಪತಿ ಗೌಡ, ಲಹರಿ ವೇಲು, ಟವಿ 9 ಹಿರಿಯ ಸಂಪಾದಕರಾದ ರಂಗನಾಥ್ ಭಾರದ್ವಾಜ್, ಶಿವಾನಂದ ಶೆಟ್ಟಿ, ಶರತ್ ಚಂದ್ರ ಸಾನಿಲ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಉಪಸ್ಥಿತರಿದ್ದರು.ಕ ರ ವೇ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ನಮ್ಮ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಿಸುತ್ತೇವೆ. ಈ ಚಿತ್ರದ ನಿರ್ದೇಶಕ ರಾಜ ವೆಂಕಯ್ಯ ಅವರು ನನ್ನನ್ನು ಭೇಟಿಯಾಗಿ ಕಥೆ ಹೇಳಿದರು. ತುಂಬಾ ಇಷ್ಟವಾಯಿತು. ಬಿಜು ಶಿವಾನಂದ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ಪ್ರವೀರ್ ಶೆಟ್ಟಿ.
ನಾನು ಕಳೆದ ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ಛಾಯಾಗ್ರಹಕನಾಗಿ, ಸಂಕಲನಕಾರನಾಗೂ ಕಾರ್ಯ ನಿರ್ವಹಿಸಿದ್ದೇನೆ. ಈಗ ಕನ್ನಡದಲ್ಲಿ "ಸೈರನ್" ಚಿತ್ರವನ್ನು ನಿರ್ದೇಶಿಸಿದ್ದೇನೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನಾಯಕ ಪ್ರವೀರ್ ಶೆಟ್ಟಿ ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಆಡಿಯೋ ರಿಲೀಸ್ ಸಮಯದಲ್ಲಿ ಚಿತ್ರದ ಬಗ್ಗೆ ಹೆಚ್ಚು ಮಾತನಾಡುತ್ತೇನೆ ಎಂದರು ನಿರ್ದೇಶಕ ರಾಜ ವೆಂಕಯ್ಯ.
ಇದನ್ನೂ ಓದಿ: Bigg Boss Kannada OTT : ಈ ಬಾರಿ ಶೋನಲ್ಲಿ ಭಾಗಿಯಾಗುವ ಸ್ಪರ್ಧಿಗಳ ಪಟ್ಟಿ ಇಲ್ಲಿದೆ
ನಾಯಕಿ ಲಾಸ್ಯ ಹಾಗೂ ಪ್ರಮುಖ ಪಾತ್ರಧಾರಿ ಸುಕನ್ಯ ತಮ್ಮ ಪಾತ್ರದ ಬಗ್ಗೆ, ನಾಗೇಶ್ ಆಚಾರ್ಯ ಛಾಯಾಗ್ರಹಣದ ಕುರಿತು ಮಾತನಾಡಿದರು.
ರೋಡಿನಲ್ಲಿ "ಸೈರನ್" ಸದ್ದಿಗೆ ಎಲ್ಲರೂ ದಾರಿ ಬಿಡುತ್ತಾರೆ. ಸ್ಯಾಂಡಲ್ ವುಡ್ ನಲ್ಲೂ ಈ "ಸೈರನ್" ಸಹ ಭಾರಿ ಸದ್ದು ಮಾಡಲಿ. ಭರ್ಜರಿ ಯಶಸ್ಸು ಕಾಣಲಿ. ಟೀಸರ್ ನಲ್ಲೇ ಪ್ರವೀರ್ ಶೆಟ್ಟಿ ಒಳ್ಳೆಯ ಭರವಸೆ ಮೂಡಿಸಿದ್ದಾರೆ. ಅವರಿಗೂ ಒಳ್ಳೆಯದಾಗಲಿ ಎಂದು ನಟ ಚಿಕ್ಕಣ್ಣ ಹಾರೈಸಿದರು.
ಪ್ರವೀಣ್ ಶೆಟ್ಟಿ ಅವರ ಸ್ನೇಹಿತರ ಬಳಗ ದೊಡ್ಡದು. ಮುಂದೆ ಈ ಸಿನಿಮಾದ ಕಾರ್ಯಕ್ರಮಗಳನ್ನು ಅರಮನೆ ಆವರಣದಲ್ಲಿ ಮಾಡುವಂತೆ ವಿನಂತಿಸುತ್ತೇನೆ. ಟೀಸರ್ ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ. ಶುಭವಾಗಲಿ ಎಂದರು ನಿರ್ಮಾಪಕ ಉಮಾಪತಿ ಗೌಡ.
ನಾವು ಹಾಗೂ ಪ್ರವೀಣ್ ಶೆಟ್ಟಿ ಅವರು ನೆರೆಹೊರೆಯವರು. ಅವರ ಮಗನ ಚಿತ್ರ ಭರ್ಜರಿ ಗೆಲುವು ಸಾಧಿಸಲಿ ಎಂದು ಲಹರಿ ವೇಲು ಹಾರೈಸಿದರು.
ಟಿವಿ 9 ಹಿರಿಯ ಸಂಪಾದಕ ರಂಗನಾಥ್ ಭಾರದ್ವಾಜ್, ಶಿವಾನಂದ ಶೆಟ್ಟಿ, ಪಳನಿ ಪ್ರಕಾಶ್, ಬಂಟರ ಸಂಘದ ಅಧ್ಯಕ್ಷರು ಸೇರಿದಂತೆ ಸಾಕಷ್ಟು ಗಣ್ಯರು ತಮ್ಮ ಮಾತುಗಳ ಮೂಲಕ ಚಿತ್ರಕ್ಕೆ ಶುಭ ಕೋರಿದರು. ನಿರ್ಮಾಪಕ ಬಿಜು ಶಿವಾನಂದ ಎಲ್ಲರಿಗೂ ಧನ್ಯವಾದ ತಿಳಿಸಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.