Vikrant Rona Collection : 150 ಕೋಟಿ ಗಡಿ ದಾಟುತ್ತಾ ವಿಕ್ರಾಂತ್ ರೋಣ? 7ನೇ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

Vikrant Rona Box Office Collection Day 7 : ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂ.ಗಳತ್ತ ದಾಪುಗಾಲಿಡುತ್ತಿದೆ. 

Written by - Chetana Devarmani | Last Updated : Aug 4, 2022, 10:33 AM IST
  • ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ
  • ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಸಿನಿಮಾ
  • ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂ.ಗಳತ್ತ ದಾಪುಗಾಲು
Vikrant Rona Collection : 150 ಕೋಟಿ ಗಡಿ ದಾಟುತ್ತಾ ವಿಕ್ರಾಂತ್ ರೋಣ? 7ನೇ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!   title=
ವಿಕ್ರಾಂತ್ ರೋಣ

Vikrant Rona Box Office Collection Day 7 : ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂ.ಗಳತ್ತ ದಾಪುಗಾಲಿಡುತ್ತಿದೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ದೊಡ್ಡ ತಾರಾಗಣವನ್ನೇ ಹೊಂದಿರುವ ಈ ಚಿತ್ರವು ತನ್ನ 3D ಮತ್ತು ವಿಷುಯಲ್ ಎಫೆಕ್ಟ್‌ಗಳಿಂದ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಕರ್ನಾಟಕದ ಹೊರತಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. 7 ನೇ ದಿನದಂದು ವಿಕ್ರಾಂತ್ ರೋಣ ಗಲ್ಲಾಪೆಟ್ಟಿಗೆಯಲ್ಲಿ 5.5 ರಿಂದ 6 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ನಾಯಕನಾಗಿ 'ಸಜ್ಜು' ಎಂಟ್ರಿಗೆ ವೇದಿಕೆ ಸಜ್ಜು..! ಹೇಗಿದೆ ‘ಮ್ಯಾನ್ಷನ್ ಹೌಸ್ ಮುತ್ತು’ ಲುಕ್..?‌

ವಿಕ್ರಾಂತ್ ರೋಣ 7ನೇ ದಿನದ ಕಲೆಕ್ಷನ್ : 

ಟ್ರೇಡ್ ವರದಿಗಳ ಪ್ರಕಾರ, ಚಿತ್ರವು ಒಂದೆರಡು ದಿನಗಳಲ್ಲಿ ಲಾಭದ ವಲಯಕ್ಕೆ ಕಾಲಿಡಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 10 ಕೋಟಿ ರೂ.ಗಳ ಗಡಿಯನ್ನು ತಲುಪುತ್ತಿರುವ ಈ ಚಿತ್ರವು ತೆಲುಗು ರಾಜ್ಯಗಳಲ್ಲಿ ತನ್ನ ಪ್ರದರ್ಶನದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದೆ. 3ಡಿ ಆವೃತ್ತಿ ಅಂತೂ ಸಿನಿಪ್ರಿಯರ ಹೃದಯ ಮುಟ್ಟಿದೆ.

ಅಲ್ಲದೆ, ರಣಬೀರ್ ಕಪೂರ್-ಸಂಜಯ್ ದತ್ ಅಭಿನಯದ ಶಂಶೇರಾ ಮತ್ತು ಅರ್ಜುನ್ ಕಪೂರ್, ಜಾನ್ ಅಬ್ರಹಾಂ, ತಾರಾ ಸುತಾರಿಯಾ ಮತ್ತು ದಿಶಾ ಪಟಾನಿಯ ಏಕ್ ವಿಲನ್ ರಿಟರ್ನ್ಸ್‌ನಂತಹ ಚಿತ್ರಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಿದ ನಂತರವೂ ವಿಕ್ರಾಂತ್ ರೋಣ ಹಿಂದಿ ಬೆಲ್ಟ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದೆ ಎಂದು ಹೇಳಲಾಗುತ್ತದೆ. 

ಕಿಚ್ಚ ಸುದೀಪ್ ಅಭಿನಯದ ಬಹುಭಾಷಾ ಚಿತ್ರವು 55 ದೇಶಗಳಲ್ಲಿ 14 ಭಾಷೆಗಳಲ್ಲಿ 3 D ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಉತ್ತರ ಭಾರತದಲ್ಲಿ ಸಲ್ಮಾನ್ ಖಾನ್ ಫಿಲ್ಮ್ಸ್, ಜೀ ಸ್ಟುಡಿಯೋಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತವೆ. ಅನೂಪ್ ಭಂಡಾರಿ ಬಿರ್ದೇಶನದ ಈ ಸಿನಿಮಾವನ್ನು ಜಾಕ್ ಮಂಜುನಾಥ್ ಅವರು ತಮ್ಮ ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ ಮತ್ತು ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಉತ್ತರ ಭಾರತದಲ್ಲಿ ಪಿವಿಆರ್ ಪಿಕ್ಚರ್ಸ್ ವಿತರಿಸಿದೆ.  

ಇದನ್ನೂ ಓದಿ: ಸುದೀಪ್ ಕನ್ನಡ ಪ್ರೇಮಕ್ಕೆ ನೆಟ್ಟಿಗರು ಫಿದಾ.. ಕನ್ನಡ ಪದ ತಪ್ಪಾಗಿ ಉಚ್ಛರಿಸಿದ ಆ್ಯಂಕರ್‌ಗೆ ಕಿಚ್ಚನ ಪಾಠ

ವಾರಾಂತ್ಯದಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ನಂತರ ವಿಕ್ರಾಂತ್‌ ರೋಣ ಕಲೆಕ್ಷನ್ ಸ್ಥಿರವಾಗಿದೆ ಎಂದು ವರದಿಯಾಗಿದೆ. ಈ ಚಿತ್ರವು ಈಗ 150 ಕೋಟಿ ರೂಪಾಯಿಗಳ ಗಡಿಯತ್ತ ಸಾಗುತ್ತಿದೆ. ಎರಡನೇ ವಾರಾಂತ್ಯದ ಮೊದಲು 150 ಕೋಟಿ ರೂ. ದಾಟುವ ನಿರೀಕ್ಷೆಯಿದೆ. ಚಿತ್ರದ ಮುಂದಿನ ಗುರಿಯು ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ಸಾಧನೆಯನ್ನು ದಾಟುವುದು, ಅದು ಅದರ ಎರಡನೇ ವಾರಾಂತ್ಯದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News