ನವದೆಹಲಿ : ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ಮತ್ತು ಅವರ ಪತಿ ಜೀನ್ ಗುಡೆನಾಫ್ ಗುರುವಾರ, ತಮ್ಮ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ದಂಪತಿ ಬಾಡಿಗೆ ತಾಯ್ತನದ ಮೂಲಕ, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿಯನ್ನು ಪ್ರೀತಿ  ತನ್ನ ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ತನ್ನ ಮಕ್ಕಳ ಹೆಸರನ್ನೂ ಬಹಿರಂಗಪಡಿಸಿದ ಪ್ರೀತಿ : 
ಈ ಪೋಸ್ಟ್ ನಲ್ಲಿ ಪ್ರೀತಿ (Preity Zinta) ತನ್ನ ಪತಿಯೊಂದಿಗಿನ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಎಲ್ಲರೊಂದಿಗೆ, ತಮ್ಮ ಜೀವನದ ಬಹು ದೊಡ್ಡ ವಿಷಯವನ್ನು ಹಂಚಿಕೊಳ್ಳುವುದಾಗಿ ಪ್ರೀತಿ ಹೇಳಿದ್ದಾರೆ.  ತಮ್ಮ ಜೀವನದಲ್ಲಿ ಅವಳಿ ಮಕ್ಕಳ  (twin babies to Preity Zinta) ಆಗಮನವಾಗಿರುವ ಬಗ್ಗೆ ಪ್ರೀತಿ ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ಮಕ್ಕಳ ಹೆಸರನ್ನು ಕೂಡಾ ಅವರು ಪ್ರಕಟಿಸಿದ್ದಾರೆ. ಅವಳಿ ಮಕ್ಕಳಾದ ಜಯ್ ಜಿಂಟಾ  ಗುಡೆನಫ್ (Jai Zinta Goodenoug)ಮತ್ತು ಜಿಯಾ ಜಿಂಟಾ ಗುಡೆನಫ್ (ia Zinta Goodenough) ಅವರನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ. 


Puneeth Rajkumar: ಪುನೀತ್ ರಾಜಕುಮಾರ್ ಗೆ ‘ಭಾರತ ರತ್ನ’ ನೀಡಲು ಒತ್ತಾಯ


ಒಬ್ಬ ಮಗ ಮತ್ತು ಒಬ್ಬ ಮಗಳು  :
ಪ್ರೀತಿ ಹಂಚಿಕೊಂಡಿರುವ ಪೋಸ್ಟ್‌ನಿಂದ ಅವರ ಸಂತೋಷ ಸ್ಪಷ್ಟವಾಗಿ ಗೋಚರಿಸುತ್ತದೆ. ತಮ್ಮ ಮಕ್ಕಳಿಗೆ ಅವರು ಜಯ್ ಮತ್ತು ಜಿಯಾ ಎಂದು ಹೆಸರಿಟ್ಟಿದ್ದಾರೆ. ಈ ಹೆಸರನ್ನು ಗಮನಿಸಿದರೆ ಮಕ್ಕಳ ಪೈಕಿ ಒಂದು ಗಂಡು ಮತ್ತೊಂದು ಹೆಣ್ಣು ಎನ್ನುವುದು ಕೂಡಾ ಸ್ಪಷ್ಟವಾಗುತ್ತದೆ. 


ಅಭಿನಂದನೆಯ ಮಹಾಪೂರ : 
ಈ ಪೋಸ್ಟ್ ಅನ್ನು ಪ್ರೀತಿ ಶೇರ್ ಮಾಡುತ್ತಿದ್ದಂತೆಯೇ, ದಂಪತಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಪ್ರೀತಿಗಿಂತ ಮೊದಲು ಏಕ್ತಾ ಕಪೂರ್ (Ekta Kapoor), ತುಷಾರ್ ಕಪೂರ್, ಕರಣ್ ಜೋಹರ್, ಶಿಲ್ಪಾ ಶೆಟ್ಟಿ (Shilpa Shetty) ಹೀಗೆ ಅನೇಕ ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ (Surrogacy) ಮೂಲಕ ಪೋಷಕರಾಗಿರುವುದನ್ನು ನೆನಪಿಸಿಕೊಳ್ಳಬಹುದು. 


ಇದನ್ನೂ ಓದಿ : Kangana Ranaut:'ಭಿಕ್ಷೆಯ ಸ್ವಾತಂತ್ರ್ಯ' ಹೇಳಿಕೆಯ ಬಳಿಕ ಮತ್ತೊಮ್ಮೆ ಮಹಾತ್ಮಾ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಂಗನ ರಣಾವತ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.